ಟಾಲಿವುಡ್ ಮೋಸ್ಟ್ ಹ್ಯಾಂಡ್‌ಸಮ್ ಬ್ಯಾಚೂಲರ್ ನಟ ಪ್ರಭಾಸ್ ಪಾಕಿಸ್ತಾನದ ಚೆಲುವೆಯ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ತೆಲಗು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

ಹೈದರಾಬಾದ್‌: ದಕ್ಷಿಣ ಭಾರತ ಸಿನಿ ಅಂಗಳದ ಹ್ಯಾಂಡ್‌ಸಮ್ ಬ್ಯಾಚೂಲರ್ ಅಂದ್ರೆ ಅದು ಪ್ರಭಾಸ್. ಕಲ್ಕಿ ಸಿನಿಮಾದ ಯಶಸ್ಸಿನ ಸಂತಸದಲ್ಲಿರುವ ಬಾಹುಬಲಿ, ಮುಂದಿನ ಸಿನಿಮಾಗಳ ಕುರಿತು ಹೊಸ ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಈ ನಡುವೆ ಪ್ರಭಾಸ್ ಮದುವೆ ಯಾವಾಗ ಮತ್ತು ಯಾರ ಜೊತೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಪಾಕ್ ಸುಂದರಿಯ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಹಲವು ಪಾಕಿಸ್ತಾನಿ ನಟ, ನಟಿಯರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಟಾಲಿವುಡ್ ಅಂಗಳಕ್ಕೆ ಪಾಕ್ ಚೆಲುವೆಯ ಎಂಟ್ರಿ ಆಗುವ ಸಾಧ್ಯತೆಗಳಿವೆ.

ಟಾಲಿವುಡ್ ರೆಬೆಲ್ ಚೆಲುವ ಪ್ರಭಾಸ್ ರಾಘವಪುಡಿ ನಿರ್ದೇಶನದ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡೆಕ್ಷನ್ ಕೆಲಸಗಳು ಶುರುವಾಗಿವೆ. ಈ ಚಿತ್ರದಲ್ಲಿ ಬ್ರಿಟಿಷ್ ಸೇನೆಯ ಸೈನಿಕನಾಗಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಮಾತ್ರ ಚಿತ್ರತಂಡ ರಿವೀಲ್ ಮಾಡಿದೆ. ಈ ಚಿತ್ರದ ನಾಯಕಿಯ ಪಾತ್ರ ಸಿನಿಮಾ ತಂಡ ಪಾಕಿಸ್ತಾನದ ನಟಿಯನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ಖಚಿತವಾದ್ರೆ ಪಾಕ್ ಜೊತೆ ಪ್ರಭಾಸ್ ರೊಮ್ಯಾನ್ಸ್ ಮಾಡೋದು ಪಕ್ಕಾ ಅಂತಿವೆ ತೆಲುಗು ಸಿನಿಮಾ ಅಂಗಳ. 

ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? ಟ್ಯಾಟೂ ಜೊತೆ ಗುಟ್ಟು ಬಿಚ್ಚಿಟ್ರಾ ಕಲ್ಕಿ ನಟಿ?

ಚಿತ್ರದ ಹೆಸರೇನು?

ಇದೊಂದು ಪಿರಿಯಾಡಿಟಿಕ್ ಡ್ರಾಮಾ ಆಗಿರಲಿದ್ದು, ಚಿತ್ರಕ್ಕೆ ಫೌಜಿ ಅಂತ ಹೆಸರಿಡುವ ಕುರಿತು ಚರ್ಚೆಗಳು ನಡೆದಿದೆ. ಆದ್ರೆ ಇನ್ನೂ ಸಿನಿಮಾ ಟೈಟಲ್ ಫಿಕ್ಸ್ ಆಗಿಲ್ಲ. ಪ್ರಿ ಪ್ರೊಡೆಕ್ಷನ್ ಕೆಲಸಗಳು ಮುಗಿಯುತ್ತಿದ್ದಂತೆ ಚಿತ್ರೀಕರಣ ಆರಂಭವಾಗಲಿದ್ದು, ಶೀಘ್ರದಲ್ಲಿಯೇ ಪ್ರಭಾಸ್ ಸಹ ಚಿತ್ರತಂಡವನ್ನು ಸೇರ್ಪಡೆಯಾಗಲಿದೆ. ಇದೊಂದು ಸ್ವತಂತ್ರ ಪೂರ್ವದ ಕಥೆ ಆಗಿರಬಹುದಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆರ್‌ಆರ್‌ಆರ್ ಸಿನಿಮಾದಲ್ಲಿ ರಾಮಚರಣ್ ಸಹ ಬ್ರಿಟಿಷ್ ಸೇನೆಯ ಉನ್ನತ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಯಾರು ಈ ಪಾಕ್ ಚೆಲುವೆ?

ತಮ್ಮ ಚಿತ್ರಕ್ಕೆ ಪಾಕ್ ಚೆಲುವೆಯನ್ನು ಕರೆತರಲು ನಿರ್ದೇಶಕ ರಾಘವ್ ಪ್ರಯತ್ನಿಸುತ್ತಿದ್ದಾರಂತೆ. ಪಾಕಿಸ್ತಾನ ಮೂಲದ ನಟಿ ಸಜಲ್ ಅಲಿ ಅವರನ್ನ ತಮ್ಮ ಮುಂದಿನ ಸಿನಿಮಾಗೆ ಟಾಲಿವುಡ್‌ಗೆ ಕರೆತರುವ ಬಗ್ಗೆ ಪ್ರಯತ್ನಗಳು ನಡೆದಿವೆಯಂತೆ. ಈಗಾಗಲೇ ಬಾಲಿವುಡ್‌ನ ಮಾಮ್ ಸಿನಿಮಾದಲ್ಲಿ ಸಜಲ್ ನಟಿಸಿದ್ದಾರೆ. ಮಾಮ್ ಚಿತ್ರ ಹಿರಿಯ ನಟಿ ಶ್ರೀದೇವಿ ನಟನೆಯ ಕೊನೆಯ ಸಿನಿಮಾವಾಗಿದ್ದು, ಇದರಲ್ಲಿ ಮಗಳ ಪಾತ್ರದಲ್ಲಿ ಸಜಲ್ ಕಾಣಿಸಿಕೊಂಡಿದ್ದರು.

ವಯಸ್ಸು 44 ಆಯ್ತು, ಮದುವೆ ಯಾವಾಗ ಅಂದೋರಿಗೆ ಉತ್ತರ ಕೊಟ್ಟ ಪ್ರಭಾಸ್

View post on Instagram