Asianet Suvarna News Asianet Suvarna News

ವಯಸ್ಸು 44 ಆಯ್ತು, ಮದುವೆ ಯಾವಾಗ ಅಂದೋರಿಗೆ ಉತ್ತರ ಕೊಟ್ಟ ಪ್ರಭಾಸ್

ಯಾರೇ ಮದುವೆ ಬಗ್ಗೆ ಕೇಳಿದರೂ ಚೆಂದದೊಂದು ಮುಗಳ್ನಗೆ ಬೀರಿ ಪ್ರಭಾಸ್ ಹೋಗುತ್ತಾರೆ. ವಯಸ್ಸು 44 ಆಯ್ತು, ಮದುವೆ ಯಾವಾಗ ಅಂತ ಕೇಳಿದವರಿಗೆ ಕಲ್ಕಿ ಉತ್ತರ ಕೊಟ್ಟಿದ್ದಾರೆ.

tollywood actor prabhas breaks silence on marriage rumour mrq
Author
First Published Jul 8, 2024, 1:16 PM IST

ಹೈದರಾಬಾದ್: ಕಲ್ಕಿ ಸಿನಿಮಾದ ಯಶಸ್ಸಿನ ಸಂತಸದದಲ್ಲಿರುವ ಟಾಲಿವುಡ್ ಬಾಹುಬಲಿ ಪ್ರಭಾಸ್ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ. ಸಿನಿಮಾಗಳ ಜೊತೆಯಲ್ಲಿ ಪ್ರಭಾಸ್ ಮದುವೆ ವಿಷಯ ಸಹ ಆಗಾಗ್ಗೆ ಮುನ್ನಲೆಯಲ್ಲಿ ಬರುತ್ತಿರುತ್ತದೆ. ಯಾರೇ ಮದುವೆ ಬಗ್ಗೆ ಕೇಳಿದರೂ ಚೆಂದದೊಂದು ಮುಗಳ್ನಗೆ ಬೀರಿ ಪ್ರಭಾಸ್ ಹೋಗುತ್ತಾರೆ. ವಯಸ್ಸು 44 ಆಯ್ತು, ಮದುವೆ ಯಾವಾಗ ಅಂತ ಕೇಳಿದವರಿಗೆ ಕಲ್ಕಿ ಉತ್ತರ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಸಮ್‌ಒನ್ ಸ್ಪೆಷಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆದರೆ ಇದು ಕಲ್ಕಿ 2898 ಎಡಿ ಸಿನಿಮಾ ಪ್ರಚಾರದ ಭಾಗವಾಗಿತ್ತು. ಆದರೆ ಅಭಿಮಾನಿಗಳು ಬಾಹುಬಲಿ ಜೀವನದಲ್ಲಿ ವಿಶೇಷ ವ್ಯಕ್ತಿಯ ಎಂಟ್ರಿ ಆಗ್ತಿದೆ ಎಂದು ಖುಷಿಯಾಗಿದ್ದರು. ಆದ್ರೆ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯ ಆಗಮನದ ಸುದ್ದಿಯನ್ನು ಪ್ರಭಾಸ್ ಅಲ್ಲಗಳೆದಿದ್ದರು.

ಈಗ ಡಾರ್ಲಿಂಗ್ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು ಶೀಘ್ರದಲ್ಲಿ ಏನು ಮದುವೆ ಆಗುತ್ತಿಲ್ಲ. ನನ್ನ ಮಹಿಳಾ ಅಭಿಮಾನಿಗಳಿಗೆ ನೋವುಂಟು ಮಾಡಲು ನನಗಿಷ್ಟವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ಮಾತಿನಿಂದ ಬಾಹುಬಲಿಯ ಕಲ್ಯಾಣ ಯಾವಾಗ ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ದಿಶಾ ಪಟಾನಿ ಜೊತೆ ಡೇಟಿಂಗ್?

ಬಾಲಿವುಡ್ ಹಾಟ್ ಗರ್ಲ್ ಆಗಿರುವ ದಿಶಾ ಪಟಾನಿ ಜೊತೆ ಪ್ರಭಾಸ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಚರ್ಚೆ ಕೆಲ ದಿನಗಳಿಂದ ಮುನ್ನೆಲೆಗೆ ಬರುತ್ತಿದೆ. ದಿಶಾ ಪಟಾನಿ ಕೈ ಮೇಲೆ PD ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. P ಅಂದ್ರೆ ಪ್ರಭಾಸ್, D ಅಂದ್ರೆ ದಿಶಾ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಆದ್ರೆ ಕೆಲವರು ಇದೆಲ್ಲಾ ವದಂತಿ ಎಂದಿದ್ದರು. ಹಲವರು ಇದು 'ಪ್ರಭಾಸ್- ದಿಶಾ' ಎಂದು ಡಿಕೋಡ್ ಮಾಡಿದ್ದರೆ, ಕೆಲವರು 'ಪ್ರಭಾಸ್ ಡಾರ್ಲಿಂಗ್' ಎನ್ನುತ್ತಿದ್ದಾರೆ. 

ಗೆದ್ದ ಪ್ಯಾನ್ ಇಂಡಿಯಾ ಮೂವಿ ಕಲ್ಕಿ, ಸೋತು ಸುಣ್ಣವಾಗಿದ್ದ ಪ್ರಭಾಸ್‌ಗೆ ಗೆಲವು

ಅನುಷ್ಕಾ ಶರ್ಮಾ ಒಳ್ಳೆಯ ಜೋಡಿ ಅಂತಾರೆ ಫ್ಯಾನ್ಸ್ 

ಬಾಹುಬಲಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ಪ್ರಭಾಸ್‌ಗೆ ನಟಿ ಅನುಷ್ಕಾ ಶೆಟ್ಟಿ ಒಳ್ಳೆಯ ಜೋಡಿ ಆಗ್ತಾರೆ ಎಂದು ಅಭಿಮಾನಿಗಳು ಹೇಳಿಕೊಂಡು ಬರುತ್ತಲೇ  ಇದ್ದಾರೆ. ಆದ್ರೆ ಇಂದಿಗೂ ಒಂಟಿಯಾಗಿರುವ ಪ್ರಭಾಸ್ ಮ್ತು ಅನುಷ್ಕಾ ಶೆಟ್ಟಿ ನಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡು ಬರುತ್ತಲೇ ಇದ್ದಾರೆ. ಇತ್ತೀಚೆಗೆ ಕನ್ನಡದ ನಿರ್ಮಾಪಕರೊಬ್ಬರ ಜೊತೆಯಲ್ಲಿ ಅನುಷ್ಕಾ ಶೆಟ್ಟಿ ಮದುವೆಯಾಗಲಿದೆ ಎಂಬ ಸುದ್ದಿ ಹೊರ ಬಿದ್ದಿತ್ತು. ಆದರೆ ಆ ನಿರ್ಮಾಪಕ ಯಾರು? ಮದುವೆ ಯಾವಾಗ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಎರಡು OTT ಪ್ಲಾಟ್‌ಫಾರ್ಮ್‌ಗಳಿಂದ ಕಲ್ಕಿ ಖರೀದಿ

ವರದಿಯೊಂದರ ಪ್ರಕಾರ, ಒಂದಲ್ಲ ಎರಡು ದೊಡ್ಡ OTT ವೇದಿಕೆಗಳು ಪ್ರಭಾಸ್ ಅವರ ಕಲ್ಕಿ 2898 AD ಚಿತ್ರದ OTT ಹಕ್ಕುಗಳನ್ನು ಖರೀದಿಸಿವೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಹಿಂದಿ ಆವೃತ್ತಿಯ ಹಕ್ಕುಗಳನ್ನು 200 ಕೋಟಿ ರೂಪಾಯಿಗೆ ಖರೀದಿಸಿದೆ. ಅದೇ ಸಮಯದಲ್ಲಿ, ಅಮೆಜಾನ್ ಪ್ರೈಮ್ ವಿಡಿಯೋ ದಕ್ಷಿಣದ ಭಾಷೆಗಾಗಿ 175 ಕೋಟಿ ರೂ. ಕೊಟ್ಟು ಹಕ್ಕು ಖರೀದಿಸಿದೆ. ಈ ವರದಿಗಳು ನಿಜವಾಗಿಯೂ ನಿಜವಾಗಿದ್ದರೆ, ಕಲ್ಕಿ 2898 AD ಈ ದೊಡ್ಡ ವ್ಯವಹಾರಕ್ಕೆ ಹೊಸ ಮಾನದಂಡವನ್ನು ಹೊಂದಿಸಿದೆ. 

ಪ್ರಭಾಸ್ ಕಲ್ಕಿ ಚಿತ್ರದ ಬುಜ್ಜಿ ಡ್ರೈವ್ ಮಾಡಿದ ನಾಗ ಚೈತನ್ಯ, 6 ಟನ್ ತೂಕದ ಕಾರಿನ ವಿಶೇಷತೆ ಏನು?

Latest Videos
Follow Us:
Download App:
  • android
  • ios