Ramayan Cinema: ರಾಕಿಂಗ್ ಸ್ಟಾರ್ ಯಶ್ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ರಾಮನ ಪಾತ್ರವನ್ನು ತಿರಸ್ಕರಿಸಲು ಮತ್ತು ರಾವಣನ ಪಾತ್ರವನ್ನು ಆಯ್ಕೆಮಾಡಿಕೊಳ್ಳಲು ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ.
ಬೆಂಗಳೂರು: 2025 ಸಿನಿಮಾ ಜಗತ್ತಿಗೆ ಧಮಾಕಾದಾರ್ ಆಗಿದ್ದು, 2026ರಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. ಮುಂದಿನ ವರ್ಷ ಬಹುನಿರೀಕ್ಷಿತ ಸಿನಿಮಾಳು ರಿಲೀಸ್ ಆಗಲಿದ್ದು, ಅದರಲ್ಲೊಂದು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ರಾಮಾಯಣ ಸಹ ಸೇರಿದೆ. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ, ನಟಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಚಂಡ ರಾವಣ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗ 2026ರಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗ 2027ರ ದೀಪಾವಳಿಯಂದು ರಿಲೀಸ್ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.
ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಆರಂಭವಾಗಿದ್ದು, ಮುಂಬೈನ ಕಡಲತೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ಸೆಟ್ ಸಹ ಹಾಕಲಾಗಿದೆ. ರಾಮನ ಬದಲಾಗಿ ರಾವಣನ ಪಾತ್ರದಲ್ಲಿ ನಟಿಸಲು ಯಶ್ ಒಪ್ಪಿಕೊಂಡಿದ್ಯಾಕೆ ಎಂಬ ಕಾರಣ ರಿವೀಲ್ ಆಗಿದೆ.
ರಾಮಾಯಣ ಸಿನಿಮಾ ಬರೋಬ್ಬರಿ 835 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಇಂಡಿಯನ್ ಸಿನಿಮಾದ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಮೂಲಕ ವಿಲನ್ ರೂಪದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರೇ ಸಿನಿಮಾದ ಸಹ-ನಿರ್ಮಾಪಕರು ಆಗಿದ್ದಾರೆ. ಇನ್ನು ಸಂಭಾವನೆ ವಿಷಯ ನೋಡೋದಾದ್ರೆ ಯಶ್ 100 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯಶ್ ಮುಂದಿನ ಸಿನಿಮಾ ಮತ್ತು ತಮ್ಮ ಪಾತ್ರದ ಕುರಿತು ಮಾತನಾಡಿದ್ದರು. ಈ ವೇಳೆ ರಾವಣನ ಪಾತ್ರ ಆಯ್ಕೆ ಮಾಡಿಕೊಂಡಿದ್ಯಾಕೆ ಎಂಬುದನ್ನು ಯಶ್ ಹೇಳಿದ್ದರು.
ಇದನ್ನೂ ಓದಿ: ಮುಂಬೈನಲ್ಲಿ ಯುದ್ಧಕ್ಕಿಳಿದ ನಟ ಯಶ್, ಇದು ರಾಮ-ರಾವಣನ ಮುಖಾಮುಖಿಯಲ್ಲ!
ರಾವಣ ಪಾತ್ರ ಬೇಕೆಂದು ನಾನೇ ಕೇಳಿದೆ. ಚಿತ್ರದಲ್ಲಿ ರಾಮ, ಲಕ್ಷ್ಮಣ, ಆಂಜನೇಯ ಯಾವುದೇ ಪಾತ್ರ ಕೊಟ್ಟರೂ ನಾನು ಮಾಡಲ್ಲಎಂದಿದ್ದೆ. ನಟನಾಗಿ ನನಗೆ ರಾವಣನ ಪಾತ್ರ ತುಂಬಾ ರೋಚಕ ಅನ್ನಿಸುತ್ತದೆ. ರಾವಣ ಪಾತ್ರದಲ್ಲಿ ನಟಿಸೋದು ತುಂಬಾ ಕಷ್ಟಕರ. ಪಾತ್ರದ ಮುಖಭಾವ ಸೇರದಂತೆ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ನಟನಾಗಿ ಈ ಚಾಲೆಂಜ್ ಸ್ವೀಕರಿಸಿದ್ದೇನೆ. ಈ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ಸಾಕಷ್ಟು ಸ್ಕೋಪ್ ಇದೆ ಅನ್ನೋದು ರಾಕಿಂಗ್ ಸ್ಟಾರ್ ಯಶ್ ಮಾತು.
ಕೆಜಿಎಫ್-2 ಸಿನಿಮಾ ಬಳಿಕ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟಾಕ್ಸಿಕ್ ಸಿನಿಮಾದ ಲುಕ್ ರಿವೀಲ್ ಆಗಿದ್ದು, ಸಿನಿಮಾಗಾಗಿ ಇಡೀ ಭಾರತವೇ ಕಾಯುತ್ತದೆ. ಯಶ್ ಹುಟ್ಟುಹಬ್ಬದಂದು ಟಾಕ್ಸಿಕ್ ಸಿನಿಮಾ ಲುಕ್ ಬಿಡುಗಡೆ ಮಾಡಲಾಗಿತ್ತು. 2022ರ ಬಳಿಕ ಯಶ್ ನಟನೆಯ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಮೂರು ವರ್ಷಗಳಿಂದ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾದ ಮೂರನೇ ಭಾಗ ಸಹ ಬರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾನು ʼರಾಕಿಂಗ್ ಸ್ಟಾರ್ʼ ಯಶ್ ತಂಗಿ ಅಂತ ಎಲ್ಲೂ ಹೇಳಲ್ಲ, ಅದಕ್ಕೂ ಕಾರಣ ಇದೆ: ದೀಪಿಕಾ ದಾಸ್
