ಈ ವಿಷಯಕ್ಕೆ ಶಾರುಖ್​ರನ್ನ ಗೇಲಿ ಮಾಡ್ತಿದ್ರಂತೆ ಮಗಳು ಸುಹಾನಾ ಖಾನ್​!

ಮಗಳು ಸುಹಾನಾ ತಮ್ಮ ವಾಕಿಂಗ್ ಸ್ಟೈಲ್​ ಕುರಿತು ಹೇಗೆ ಗೇಲಿ ಮಾಡುತ್ತಿದ್ದಳು ಎನ್ನುವ ವಿಷಯವನ್ನು ಶಾರುಖ್​ ಖಾನ್​ ಹೇಳಿರುವ ಹಳೆಯ ವಿಡಿಯೋ ವೈರಲ್​ ಆಗಿದೆ. 
 

When Shah Rukh Khan revealed how daughter Suhana Khan used to make fun of him

ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​ಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಕುರಿತು ಹೊಸ ವಿಷಯವೊಂದು ಚರ್ಚೆಯಾಗುತ್ತಿದೆ. ಈಕೆ ಮತ್ತು  ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಡೇಟಿಂಗ್​ನಲ್ಲಿ ಇದೆ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿತ್ತು ಇವರು ಫ್ಲೈಯಿಂಗ್​ ಕಿಸ್​ ಮಾಡಿರುವ  ವಿಡಿಯೋ. ಇದರಿಂದಾಗಿ ಬಚ್ಚನ್​ ಮತ್ತು ಖಾನ್​ ಇಬ್ಬರೂ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಕಿಡ್ಸ್​ಗಳು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ.

ಅದರಂತೆ ಬರ್ತಡೇ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪಾರ್ಟಿ ಮುಗಿಸಿ ಸುಹಾನಾ ಖಾನ್ ಅವರು ಹೊರಡಲು ರೆಡಿಯಾಗಿದ್ದರು. ಆ ವೇಳೆ ಅಗಸ್ತ್ಯ ಅವರು ಸುಹಾನಾರನ್ನು ಕಾರ್ ಹತ್ತಿಸಲು ಬಂದಿದ್ದರು. ಆ ವೇಳೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಫ್ಲೈಯಿಂಗ್ ಕಿಸ್ ನೀಡಿರುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಇದರ ನಡುವೆಯೇ ಸುಹಾನಾ ಅಪ್ಪ ಶಾರುಖ್​ ಮಗಳು ತಮ್ಮನ್ನು ಹೇಗೆ ಗೇಲಿ ಮಾಡುತ್ತಿದ್ದಳು ಎಂಬುದನ್ನು ತಿಳಿಸಿದ್ದಾರೆ. ಅಸಲಿಗೆ 2015ರಲ್ಲಿ ನಡೆದ ಸಂದರ್ಶನದ ವೇಳೆ ಈ ವಿಷಯವನ್ನು ಶಾರುಖ್​ ಹೇಳಿದ್ದು, ಸುಹಾನಾ ಈಗ ಸಕತ್​ ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ಮಗಳ ಜೊತೆ ಹೋದಾಗಲೆಲ್ಲ ತಾವು ಅಂದು ಅನುಭವಿಸುತ್ತಿರುವ ಪೇಚಿನ ಕುರಿತಾಗಿ ಮಗಳು ಸುಹಾನಾ ಸದಾ ತಮ್ಮನ್ನು ಗೇಲಿ ಮಾಡುತ್ತಾಳೆ ಎಂದು ಅಂದು ಶಾರುಖ್​ ಹೇಳಿದ್ದರು.  ಪ್ರತಿ ಬಾರಿಯೂ ಮಗಳನ್ನು ಕರೆದುಕೊಂಡು ಹೋಗುವಾಗ  ಸಾರ್ವಜನಿಕವಾಗಿ ಕರೆದೊಯ್ಯುವಂತೆಯೇ ಇರಲಿಲ್ಲ. ಜನರು ಸದಾ ಕಣ್ಣಿಡುವ ಹಿನ್ನೆಲೆಯಲ್ಲಿ ಯಾರಾದರೂ ಹತ್ತಿರ ಬಂದರೆ ನಾನು ಓಡಿಹೋಗಬೇಕಿತ್ತು. ಇದರ ಹೊರತಾಗಿಯೂ ಜನರು ನನ್ನ ನಡಿಗೆಯ ಶೈಲಿನಲ್ಲಿ ಗುರುತಿಸುತ್ತಿದ್ದರು. ಆದ್ದರಿಂದ ಸುಹಾನಾ ಸದಾ ನನ್ನ ನಡಿಗೆಯ ಶೈಲಿಯನ್ನು ತೋರಿಸಿ ಗೇಲಿ ಮಾಡುತ್ತಾಳೆ ಎಂದು ಶಾರುಖ್​ ಹೇಳಿದ್ದರು.

ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

ಶಾರುಖ್ ಖಾನ್ ಮತ್ತು ಗೌರಿ ಖಾನ್ 1991 ರಲ್ಲಿ ವಿವಾಹವಾದರು. ಅವರು 1997 ರಲ್ಲಿ ಮಗ ಆರ್ಯನ್ ಖಾನ್ ಮತ್ತು 2000 ರಲ್ಲಿ ಮಗಳು ಸುಹಾನಾ ಖಾನ್ ಹುಟ್ಟಿದರು.  2013 ರಲ್ಲಿ ಅವರ ಮೂರನೇ ಮಗು ಅಬ್ರಾಮ್ ಖಾನ್ ಬಾಡಿಗೆ ತಾಯ್ತನದ ಮೂಲಕ ಜನಿಸಿದರು. ಹಳೆಯ ಸಂದರ್ಶನವೊಂದರಲ್ಲಿ, ಶಾರುಖ್ ತಮ್ಮ ಸ್ಟಾರ್‌ಡಮ್ ಬಗ್ಗೆ ಮಾತನಾಡಿದ್ದಾರೆ ಮತ್ತು ಅದು ಅವರ ಮತ್ತು ಅವರ ಕುಟುಂಬದ ಜೀವನದ ಮೇಲೆ ಹೇಗೆ ಪ್ರಭಾವ ಬೀರಿತು ಎಂದು ವಿವರಿಸಿದ್ದಾರೆ.  ಇದೇ ವೇಳೆ ಮಗಳು ಕಿಂಡಲ್​ ಮಾಡುವುದನ್ನು ವಿವರಿಸಿದ್ದಾರೆ. ಪ್ರತಿಬಾರಿಯೂ ಸುಹಾನಾಳನ್ನು ಹೊರಕ್ಕೆ ಕರೆದುಕೊಂಡು ಹೋಗುವಾಗ ಬೇರೆ ಬೇರೆ ರೀತಿಯ ವೇಷ ತೊಟ್ಟು ಹೋಗುತ್ತೇನೆ. ಜನರು ನನ್ನನ್ನು ಗುರುತಿಸಬಾರದು ಎಂದು ತಲೆಯ ಮೇಲೆ ಹೊದ್ದುಕೊಂಡು ಕೂಡ ಹೋಗುತ್ತೇನೆ. ಪ್ರತಿಬಾರಿಯೂ ಸುಹಾನಾಳನ್ನು ಕರೆದುಕೊಂಡು ಹೋಗುವಾಗ ಈ ಬಾರಿ ಯಾರೂ ನನ್ನನ್ನು ಗುರುತಿಸುವುದಿಲ್ಲ ಎಂದು ಚಾಲೆಂಜ್​ ಮಾಡಿಕೊಂಡು ಹೋಗುತ್ತೇನೆ.  ಆದರೆ ಇದು ಸಾಧ್ಯವೇ ಇಲ್ಲ ಎಂದು ಅವಳು ಬೆಟ್​ ಕಟ್ಟುತ್ತಾಳೆ. ಪ್ರತಿ ಬಾರಿಯೂ ನಾನೇ ಸೋಲುತ್ತೇನೆ. ಇದಕ್ಕಾಗಿ ಅವರು ಸದಾ ಗೇಲಿ ಮಾಡುತ್ತಾಳೆ ಎಂದಿದ್ದರು ಶಾರುಖ್​.

ನನ್ನ ವೈಯಕ್ತಿಕ ಜೀವನವು ಸ್ಟಾರ್‌ಡಮ್‌ನಿಂದ ಪ್ರಭಾವಿತವಾಗಿರುತ್ತದೆ, ವಿಶೇಷವಾಗಿ ನನ್ನ ಮಕ್ಕಳೊಂದಿಗೆ ಸಾರ್ವಜನಿಕ ಸ್ಥಳಗಳಿಗೆ ಹೋಗುವುದು ಸುಲಭವಲ್ಲ. ಆದರೆ ನಾನು ಈ ಹಿಂದೆಯೂ ಹೇಳಿದ್ದೇನೆ, ನಾನು ಯಾವಾಗಲೂ ಈ ಜೀವನವನ್ನು ಮತ್ತು ಅದು ನನಗೆ ನೀಡಿದ ಎಲ್ಲವನ್ನೂ ಆರಿಸಿಕೊಳ್ಳುತ್ತೇನೆ. ಸೆಲೆಬ್ರಿಟಿಗಳು ಬೇರೆಯವರಂತೆ ಹೊರಗಡೆ ಈಸಿಯಾಗಿ ತಿರುಗಾಡುವುದು ಸುಲಭವಲ್ಲ, ಆದರೆ ಯಾವುದೇ ರೀತಿಯಲ್ಲಿಯೂ ನನ್ನ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಶಾರುಖ್​ ಈ ಸಂದರ್ಶನದಲ್ಲಿ ಹೇಳಿದ್ದಾರೆ. 

Siddharth Anand: ಬೇಷರಂ ರಂಗ್​ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ

 
 
 
 
 
 
 
 
 
 
 
 
 
 
 

A post shared by SRK VIBE (@srkvibe2.0)

Latest Videos
Follow Us:
Download App:
  • android
  • ios