ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

ಶಾರುಖ್​ ಖಾನ್​ ಪುತ್ರಿ ಸುಹಾನಾ ಹಾಗೂ ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ ಡೇಟಿಂಗ್​ನಲ್ಲಿದ್ದಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ  ಕಾರಣವೇನು? 
 

Shah Rukh Khans daughter Suhana Khan gets a flying kiss from  Agastya Nanda

ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​ಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಕುರಿತು ಹೊಸ ವಿಷಯವೊಂದು ಚರ್ಚೆಯಾಗುತ್ತಿದೆ. ಈಕೆ ಮತ್ತು  ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಅಗಸ್ತ್ಯ ಕೂಡ 22 ವರ್ಷದವನೇ. ಹಾಗೆ ನೋಡಿದರೆ ಸುಹಾನಾ ಅಗಸ್ತ್ಯನಿಂದ ಆರು ತಿಂಗಳು ದೊಡ್ಡವರು. ಸುಹಾನಾ 2000ನೇ ಸಾಲಿನ ಮೇ ತಿಂಗಳಿನಲ್ಲಿ ಹುಟ್ಟಿದ್ದರೆ, ಅಗಸ್ತ್ಯ ಹುಟ್ಟಿರುವುದು ಅದೇ ಸಾಲಿನ ನವೆಂಬರ್​ನಲ್ಲಿ. ಇದೀಗ ಈ ಜೋಡಿ ಡೇಟಿಂಗ್​ನಲ್ಲಿ ಇದೆ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ ಇವರ ಕಿಸ್​ ವಿಡಿಯೋ. ಇದರಿಂದಾಗಿ ಬಚ್ಚನ್​ ಮತ್ತು ಖಾನ್​ ಇಬ್ಬರೂ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

 ಅಂದಹಾಗೆ ಸುಹಾನಾ ಮತ್ತು ಅಗಸ್ತ್ಯ ಇಬ್ಬರೂ  ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಚ್ಚನ್ (Amitabh Bacchan) ಕುಟುಂಬದ  2ನೇ ತಲೆಮಾರಿನ ನಂತರ ಇದೀಗ 3ನೇ ತಲೆಮಾರಿನವರೂ ಸಹ ಚಿತ್ರರಂಗ ಪ್ರವೇಶಿಸಿದಂತಾಗಿದೆ. ಆದರೀಗ ಇವರ ಕಿಸ್ಸಿಂಗ್​ ವಿಷಯ ಮಾತ್ರ ಗುಲ್ಲಾಗಿದೆ. ಅಷ್ಟಕ್ಕೂ ಇಬ್ಬರೇನೂ ನೇರಾನೇರವಾಗಿ ಕಿಸ್​ ಕೊಡಲಿಲ್ಲ. ಆದರೆ ಕೊಟ್ಟಿದ್ದು ಫ್ಲೈಯಿಂಗ್​ ಕಿಸ್​. ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಕಿಡ್ಸ್​ಗಳು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ. ಅದರಂತೆ ಬರ್ತಡೇ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪಾರ್ಟಿ ಮುಗಿಸಿ ಸುಹಾನಾ ಖಾನ್ ಅವರು ಹೊರಡಲು ರೆಡಿಯಾಗಿದ್ದರು. ಆ ವೇಳೆ ಅಗಸ್ತ್ಯ ಅವರು ಸುಹಾನಾರನ್ನು ಕಾರ್ ಹತ್ತಿಸಲು ಬಂದಿದ್ದರು. ಆ ವೇಳೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಫ್ಲೈಯಿಂಗ್ ಕಿಸ್ ನೀಡಿರುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಶೂಟಿಂಗ್​ ವೇಳೆ ಅವಘಡ: ಆರೋಗ್ಯದ ಮಾಹಿತಿ ನೀಡಿದ ಅಮಿತಾಭ್​ ಬಚ್ಚನ್

ಅಂದಹಾಗೆ ಅಗಸ್ತ್ಯ, ಅಮಿತಾಭ್​ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಅವರ ಮಗ. ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ  ಹಲವು ಸ್ಟಾರ್ಸ್​ ಹಾಗೂ ಸ್ಟಾರ್​ ಕಿಡ್​ಗಳು ಆಗಮಿಸಿದ್ದರು. ಆರ್ಯನ್ ಖಾನ್, ಸಂಜಯ್ ಕಪೂರ್, ಮಹೀಪ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್ ಕೂಡ ಭಾಗಿಯಾಗಿದ್ದರು. ವರುಣ್ ಧವನ್ ಅವರ ಸೊಸೆ ಅಂಜಿನಿ ಧವನ್, ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್ ಕೂಡ ಭಾಗಿಯಾಗಿದ್ದರು. ಆದರೆ ಈಗ ಬಚ್ಚನ್ ಮತ್ತು ಶಾರುಖ್  ಕುಟುಂಬಗಳು ಸಿನಿಮಾದಲ್ಲಿ ಮಾತ್ರವಲ್ಲದೇ ಜೀವನದಲ್ಲೂ ಸಂಬಂಧಿಗಳಾಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಎರಡು ಫ್ಯಾಮಿಲಿ ಮಕ್ಕಳು ಇದೀಗ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
 
ಸುಹಾನಾ ಖಾನ್​ (Suhana Khan) ಅವರನ್ನು ಕಾರು ಹತ್ತಿಸಿದ ಅಗಸ್ತ್ಯ ನಂದ ಪ್ರೀತಿಯ  ಫ್ಲೈಯಿಂಗ್ ಕಿಸ್​ ಕೊಟ್ಟಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಗಸ್ತ್ಯ ನಂದ, ಸುಹಾನಾ ಖಾನ್‌ ಅವರು ‘ದಿ ಆರ್ಚೀಸ್‌’ ಚಿತ್ರದಲ್ಲಿ ನಟಿಸಿದ್ದಾರೆ. ಜನಪ್ರಿಯ ಆರ್ಚೀಸ್‌ ಕಾಮಿಕ್ಸ್‌ ಸರಣಿಯ ಭಾರತೀಯ ರೂಪಾಂತರ ಇದಾಗಿದೆ.  ಈ ಜೋಡಿ ಮೊದಲು ಪ್ರೀತಿಸಿದ್ದು ಕೂಡ ಇದೇ  ಚಿತ್ರದ ಸೆಟ್​ನಲ್ಲಿ ಎನ್ನಲಾಗುತ್ತಿದೆ.  ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿತ್ತು.  ಇಬ್ಬರೂ  ಚಿತ್ರದ ಸೆಟ್ ಗಳಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿರುತ್ತಾರೆ ಎನ್ನಲಾಗಿದೆ. ಇವರಿಬ್ಬರು ಒಂದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿದ್ದು, "ಇವರಿಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ, ಅಷ್ಟೇ ಅಲ್ಲದೆ ಅವರ ಬಾಂಧವ್ಯವನ್ನು ಗುಟ್ಟಾಗಿ ಇಡಲು ಕೂಡ ಯೋಚನೆ ಮಾಡೋದಿಲ್ಲ. ಆದರೂ ಇವರಿಬ್ಬರು ಈ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳುವ ಯೋಜನೆಯನ್ನು ಹಾಕಿಕೊಂಡಿಲ್ಲ. ಪ್ರಾಜೆಕ್ಟ್‌ನಲ್ಲಿ (Project) ಕೆಲಸ ಮಾಡಿದವರಿಗೆಲ್ಲರಿಗೂ ಇವರಿಬ್ಬರ ಬಾಂಡಿಂಗ್ ಗೊತ್ತಿದೆ" ಎಂದು ಮೂಲಗಳು ಹೇಳಿವೆ. 

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

 

 
 
 
 
 
 
 
 
 
 
 
 
 
 
 

A post shared by @varindertchawla

Latest Videos
Follow Us:
Download App:
  • android
  • ios