ಪಠಾಣ್​ ಚಿತ್ರದ ಬೇಷರಂ ರಂಗ್​ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟು ಭಾರಿ ವಿವಾದ ಸೃಷ್ಟಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ಬಣ್ಣದ ಕುರಿತು ನಿರ್ದೇಶಕ ಸಿದ್ಧಾರ್ಥ್​  ಆನಂದ್​ ಮಾತನಾಡಿದ್ದಾರೆ. ಅವರು ಹೇಳಿದ್ದೇನು?  

ಕಳೆದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾ (Pathaan Movie) ಸೂಪರ್​ ಹಿಟ್​ ಆಗಿದೆ. ಸಿನಿಮಾ ಬಾಕ್ಸ್​ ಆಫೀಸ್‌ನಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇನ್ನೂ ಕಲೆಕ್ಷನ್​ ಮುಂದುವರೆದಿದೆ. ಅಷ್ಟಕ್ಕೂ ಪಠಾಣ್‌ ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ವಿವಾದ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರದಲ್ಲಿ ಕೇಸರಿ ಬಿಕಿನಿ ತೊಟ್ಟು ನಟಿ ದೀಪಿಕಾ ಪಡುಕೋಣೆ ಬೇಷರಂ ರಂಗ್‌ ಹಾಡಿಗೆ ಸ್ಟೆಪ್‌ ಹಾಕಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಪಠಾಣ್‌ ಬೈಕಾಟ್‌ ಟ್ರೆಂಡ್‌ (Boycott trend) ಶುರುವಾಗಿತ್ತು. ಇದರ ಬಳಿಕ ಕೇಸರಿ ಬಿಕಿನಿ ಬದಲು ಕೇಸರಿ ಲುಂಗಿ ತೊಟ್ಟು ರೀಶೂಟ್‌ ಮಾಡಲಾಗಿತ್ತು. ಇವೆಲ್ಲವೂ ಈಗ ಹಳೆಯ ಸುದ್ದಿ. ಇವೆಲ್ಲವುಗಳ ಹೊರತಾಗಿಯೂ ಪಠಾಣ್‌ ಮಕಾಡೆ ಮಲಗಿದ್ದ ಬಾಲಿವುಡ್‌ ಅನ್ನು ಮತ್ತೆ ಚಿಗುರಿಸಿದೆ. ಹಲವಾರು ದಾಖಲೆಗಳನ್ನು ಮುರಿದು ಇನ್ನೂ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಆಗಾಗ ಬೇಷರಂ ರಂಗ್‌ (Besharam Rang) ಸದ್ದು ಮಾಡುತ್ತಲೇ ಇದ್ದು, ಹಲವು ಗಣ್ಯರು ಇದರ ಬಗ್ಗೆ ಕಿಡಿ ಕಾರುತ್ತಲೇ ಇದ್ದಾರೆ. ಇಷ್ಟೆಲ್ಲಾ ಗಲಾಟೆಯಾಗಿದ್ದರೂ ನಟಿ ದೀಪಿಕಾ ಪಡುಕೋಣೆ ಮಾತ್ರ ಇದುವರೆಗೆ ಇದರ ಬಗ್ಗೆ ಮೌನದಿಂದ ಇದ್ದರು. ಶಾರುಖ್‌ ಖಾನ್‌ (Shah Rukh Khan) ಕೂಡ ಇದರ ಬಗ್ಗೆ ಬಹಿರಂಗವಾಗಿ ಏನೂ ಹೇಳಿಕೆ ಕೊಟ್ಟಿರಲಿಲ್ಲ. ಬೇಷರಂ ರಂಗ್‌ ಕುರಿತು ಅವರು ಎಲ್ಲಿಯೂ ಮಾತನಾಡಿರಲಿಲ್ಲ. ಚಿತ್ರದ ಬೈಕಾಟ್‌ ಟ್ರೆಂಡ್‌ ಶುರುವಾದಾಗಲೂ ಏನೂ ಹೇಳಿರಲಿಲ್ಲ. ನಂತರ ಈ ಬಗ್ಗೆ ದೀಪಿಕಾ ಮೌನ ಮುರಿದು, ನಾನು ಮತ್ತು ಶಾರುಖ್ ಬದ್ಧತೆ, ಕಠಿಣ ಪರಿಶ್ರಮ ಮತ್ತು ವಿನಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ. ನಾವು ಕ್ರೀಡಾ ಹಿನ್ನೆಲೆಯಿಂದ ಬಂದವರು, ಇದರಿಂದಾಗಿ ಸಂಯಮದ ಬಗ್ಗೆ ಸಾಕಷ್ಟು ಕಲಿತಿದ್ದೇವೆ. ಅದಕ್ಕಾಗಿ ಈ ಬೈಕಾಟ್​ ಕುರಿತು ಏನೂ ಹೇಳಿರಲಿಲ್ಲ ಎಂದಿದ್ದರು. ‘ಬೈಕಾಟ್‌ ಟ್ರೆಂಡ್‌ ಶುರುವಾದಾಗ ಅದನ್ನು ಎದುರಿಸಲು ನಮಗೆ ಬೇರೆ ಮಾರ್ಗಗಳು ತಿಳಿದಿರಲಿಲ್ಲ. ನಮ್ಮ ಕುಟುಂಬ ನಮ್ಮನ್ನು ಚೆನ್ನಾಗಿ ಬೆಳೆಸಿದೆ ಎಂದಷ್ಟೇ ಹೇಳಬಲ್ಲೆ‘ ಎಂದಿದ್ದರು.

ಇದೀಗ ಇವೆಲ್ಲಾ ಸುದ್ದಿ ಹಳೆಯದಾದರೂ ಬೇಷರಂ ರಂಗ್​ ಹಾಗೂ ಕೇಸರಿ ಬಿಕಿನಿ ಕುತೂಹಲದ ತಿರುವು ಪಡೆದುಕೊಂಡಿದೆ. ಏಕೆಂದರೆ, ಇದೇಮೊದಲ ಬಾರಿಗೆ ಕೇಸರಿ ಬಿಕಿನಿ ಕುರಿತು ನಿರ್ದೇಶಕ ಸಿದ್ಧಾರ್ಥ್ ಆನಂದ್ (Siddharth Anand)ಬಾಯಿ ಬಿಟ್ಟಿದ್ದಾರೆ. ಸಿದ್ದಾರ್ಥ್​ ಆನಂದ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕ. ‘ವಾರ್​’, ‘ಪಠಾಣ್​’ ಸಿನಿಮಾಗಳಿಂದಾಗಿ ಅವರ ಖ್ಯಾತಿ ಹೆಚ್ಚಿದೆ. ಕೇಸರಿ ಬಣ್ಣದ ಬಿಕಿನಿಯಲ್ಲೇ ಆರಿಸಿಕೊಂಡಿದ್ದು ಏಕೆ ಎಂದು ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಬಿಕಿನಿ ವಿವಾದದ ಕುರಿತಾದ ಪ್ರಶ್ನೆಗೆ 'ನಮಗೆ ಭಯ ಇರಲಿಲ್ಲ. ಯಾಕೆಂದರೆ ಚಿತ್ರದಲ್ಲಿ ಆಕ್ಷೇಪಾರ್ಹ ವಿಚಾರಗಳು ಯಾವುದು ಇಲ್ಲ ಎನ್ನುವುದು ನಮಗೆ ಗೊತ್ತಿತ್ತು' ಎಂದಿದ್ದಾರೆ. ‘ನಾವು ಹಾಗೇ ಸುಮ್ಮನೆ ಕಾಸ್ಟ್ಯೂಮ್​ (Costume) ಸೆಲೆಕ್ಟ್​ ಮಾಡಿದೆವು. ಆ ಬಗ್ಗೆ ಹೆಚ್ಚೇನೂ ಯೋಚಿಸಿರಲಿಲ್ಲ. ಆ ಬಣ್ಣ ತುಂಬ ಚೆನ್ನಾಗಿ ಕಾಣುತ್ತಿತ್ತು. ಸೂರ್ಯನ ಬೆಳಕು ಚೆನ್ನಾಗಿತ್ತು. ಹುಲ್ಲು ಹಚ್ಚ ಹಸಿರಾಗಿತ್ತು. ನೀರು ನೀಲಿಯಾಗಿ ಕಾಣುತ್ತಿತ್ತು. ಅದರ ನಡುವೆ ಕೇಸರಿ ಬಣ್ಣ ತುಂಬ ಚೆನ್ನಾಗಿ ಕಾಣಿಸುತ್ತಿತ್ತು. ತೆರೆ ಮೇಲೆ ಅದನ್ನು ನೋಡಿದಾಗ ನಮ್ಮ ಉದ್ದೇಶ ಕೆಟ್ಟದ್ದಾಗಿರಲಿಲ್ಲ ಎಂಬುದು ಪ್ರೇಕ್ಷಕರಿಗೆ ಅರ್ಥ ಆಗುತ್ತದೆ ಅಂತ ನಾವು ಅಂದುಕೊಂಡಿದ್ದೆವು. ಆದರೆ ಕೊನೆಗೆ ಆದದ್ದೇ ಬೇರೆ’ ಎಂದು ಸಿದ್ದಾರ್ಥ್​ ಆನಂದ್​ ಹೇಳಿದ್ದಾರೆ.

Besham Rang: ಮೊದಲ ಬಾರಿಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

'ನಾವು ಸ್ಪೇನ್‌ನಲ್ಲಿದ್ದಾಗ, ನಾನು ಸುಮ್ನೆ ಹಾಗೆ ಆ ಬಣ್ಣದ ಕಾಸ್ಟ್ಯೂಮ್ ಆರಿಸಿದೆ. ನಾವು ಅದರ ಬಗ್ಗೆ ಎಂದು ಹೆಚ್ಚು ಯೋಚಿಸಲಿಲ್ಲ. ಅಲ್ಲಿಯವರೆಗೆ ಪ್ರೇಕ್ಷಕರು ಸಿನಿಮಾ ನೋಡಿರಲಿಲ್ಲ ಎನ್ನುವ ಕಾರಣಕ್ಕೆ ನಾನು ಅವರನ್ನು ದೂಷಿಸುವುದಿಲ್ಲ. ನಂತರ ಈ ಕಾಸ್ಟ್ಯೂಮ್​ ಏನೇನೋ ತಿರುವು ಪಡೆಯಿತು. ಇವೆಲ್ಲಾ ಆದರೂ ಸಿನಿಮಾ ರಿಲೀಸ್ ಆದಾಗ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದು ಶ್ಲಾಘನೀಯ. ಆದರೆ ಒಂದು ಚಿತ್ರವನ್ನು ಬಾಯ್ಕಾಟ್ ಮಾಡುವುದು ತಪ್ಪು. ಆದರೆ ಹಾಗೆ ಮಾಡಿದರೂ ಪಠಾಣ್​ ಭಾರಿ ಸಕ್ಸಸ್​ (Success) ಆಯಿತು ಎನ್ನುವುದು ಬೇರೆಯ ಪ್ರಶ್ನೆ. ಆದರೆ ಪ್ರತಿದಿನ 300ಕ್ಕೂ ಹೆಚ್ಚು ಜನ ಒಂದು ಸಿನಿಮಾಗಾಗಿ ಕೆಲಸ ಮಾಡುತ್ತಾರೆ. ಶೂಟಿಂಗ್ ನಂತರ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಒಂದಷ್ಟು ಜನ ಕೆಲಸ ಮಾಡುತ್ತಾರೆ. ಆದ್ದರಿಂದ ಬಾಯ್ಕಾಟ್​ ಮಾಡುವುದು ಸರಿಯಲ್ಲ. ಒಬ್ಬ ಸ್ಟಾರ್ ನಟನನ್ನೋ ಅಥವಾ ಒಂದು ಸಿನಿಮಾವನ್ನೋ ಬಾಯ್ಕಾಟ್ ಮಾಡುವಾಗ ಅದರಿಂದ ಆ ಸಿನಿಮಾವನನ್ನು ನಂಬಿಕೊಂಡು ಬದುವವರಿಗೆ ಎಷ್ಟು ಸಮಸ್ಯೆ ಆಗುತ್ತದೆ ಎನ್ನುವುದನ್ನು ಯೋಚಿಸಬೇಕು' ಎಂದಿದ್ದಾರೆ.

ಭಯೋತ್ಪಾದಕರ ವಿಧ್ವಂಸ ಕೃತ್ಯಗಳನ್ನು ತಡೆಯುವ ಸೈನಿಕನಾಗಿ ಚಿತ್ರದಲ್ಲಿ ಶಾರುಖ್​ ಮಿಂಚಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್‌ 'ಪಠಾಣ್' ಚಿತ್ರವನ್ನು ಯಶ್‌ ರಾಜ್ ಸಂಸ್ಥೆ ನಿರ್ಮಾಣ ಮಾಡಿತ್ತು. 'ಜೀರೋ' ಸಿನಿಮಾ ಸೋಲಿನ ನಂತರ 4 ವರ್ಷ ಸೈಲೆಂಟ್ ಆಗಿದ್ದ ಶಾರುಖ್ ಖಾನ್ 'ಪಠಾಣ್' ಆಗಿ ಭರ್ಜರಿ ಕಂಬ್ಯಾಕ್ (Come Back) ಮಾಡಿದ್ದಾರೆ. 

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!