ಪೋಷಕರನ್ನು ಒಪ್ಪಿಸಲು ಶಾರುಖ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ ಎಂದು ಗೌರಿ ಖಾನ್ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು. 

ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ ಮತ್ತು ಗೌರಿ ಮದುವೆ ಸ್ಟೋರಿ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ಬಾಲಿವುಡ್‌ನ ಸ್ಟಾರ್ ಕಪಲ್, ಪವರ್ ಫುಲ್ ಕಪಲ್ ಶಾರುಖ್ ಮತ್ತು ಗೌರಿ ಪ್ರೀತಿಸಿ ಮದುವೆಯಾದವರು. ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆಯಾಗಿ 30 ವರ್ಷಗಳು ಕಳೆದಿವೆ. ಮುಸ್ಲಿಂ ಧರ್ಮದ ಶಾರುಖ್ ಅವರನ್ನು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗುವುದು ಗೌರಿ ಖಾನ್‌ಗೆ ಸುಲಭದ ಮಾತಾಗಿರಲಿಲ್ಲ. ಮನೆಯವರನ್ನು ಒಪ್ಪಿಸಲು ಗೌರಿ ಖಾನ್ ತುಂಬಾ ಕಷ್ಟಪಟ್ಟಿದ್ದಾರೆ. ಇಂದು ಸಂತೋಷದ ಜೀವನ ನಡೆಸುತ್ತಿರುವ ಬಾಲಿವುಡ್‌ನ ಈ ಸ್ಟಾರ್ ಕಪಲ್ ಪ್ರಾರಂಭದ ದಿನಗಳಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ಶಾರುಖ್ ಅವರನ್ನು ಮದುವೆಯಾಗುವುದು ಗೌರಿಯ ಪೋಷಕರಿಗೆ ಇಷ್ಟವಿರಲಿಲ್ಲ. 2008 ರಲ್ಲಿ ಸಂದರ್ಶನವೊಂದರಲ್ಲಿ, ಗೌರಿ ಆ ಬಗ್ಗೆ ಮಾತನಾಡಿದ್ದರು. 

26 ವರ್ಷದ ಶಾರುಖ್ ಅವರನ್ನು ಮದುವೆಯಾದಾಗ ಗೌರಿ ಕೇವಲ 21 ವರ್ಷ ವಯಸ್ಸು. 'ಆಗ ನಾವು ತುಂಬಾ ಚಿಕ್ಕವರಾಗಿದ್ದೆವು. ಸಿನಿಮಾಗೆ ಸೇರಲು ಹೊರಟಿರುವ ವ್ಯಕ್ತಿಯೊಂದಿಗೆ ಮತ್ತು ಬೇರೆ ಧರ್ಮದವರೊಂದಿಗೆ ಮದುವೆಯಾಗಲು ನಿರ್ಧರಿಸಿದ್ದೆ' ಎಂದು ಹೇಳಿದ್ದಾರೆ. ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದಾಗ ಪೋಷಕರು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು ಎಂದು ಗೌರಿ ಹೇಳಿದ್ದಾರೆ. ಹಾಗಾಗಿ ಶಾರುಖ್ ಅವರ ಹೆಸರನ್ನು ಬದಲಾಯಿಸಿ ಹಿಂದೂ ಎಂದು ಮನೆಯವರ ಬಳಿ ನಂಬಿಸಲು ಪ್ಲಾನ್ ಮಾಡಿದ್ದ ಬಗ್ಗೆಯೂ ಬಹಿರಂಗ ಪಡಿಸಿದ್ದರು. 

ಎಲಾನ್ ಮಸ್ಕ್, ಮೆಸ್ಸಿಯನ್ನೂ ಹಿಂದಿಕ್ಕಿ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಆದ ಶಾರುಖ್​ ಖಾನ್

ಶಾರುಖ್ ಖಾನ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ ಅದರಿಂದ ಪೋಷಕರು ಹಿಂದೂ ಎಂದು ಭಾವಿಸುತ್ತಾರೆ ಎನ್ನುವುದು ನನ್ನ ಆಲೋಚನೆ. ಆದರೆ ಅದು ನಿಜವಾಗಿಯೂ ಮೂರ್ಖ ಮತ್ತು ತುಂಬಾ ಬಾಲಿಶವಾಗಿತ್ತು' ಎಂದು ಗೌರಿ ನೆನಪಿಸಿಕೊಂಡಿದ್ದರು. 

ಗೌರಿ ಮತ್ತು ಶಾರುಖ್ ಮದುವೆಯಾಗುವ ಮೊದಲು ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಮನೆಯನ್ನು ಒಪ್ಪಿಸಿ ಮದುವೆಯಾದರು. ನಂತರ ಶಾರುಖ್ ದಂಪತಿ ಇಬ್ಬಕು ಮಕ್ಕಳನ್ನು ಸ್ವಾಗತಿಸಿದರು. ಆರ್ಯನ್ ಮತ್ತು ಸುಹಾನಾ. ಗೌರಿ ಖಾನ್ ಸಂದರ್ಶನ ನೀಡುವ ವೇಳೆ ಅಬ್ರಾಮ್ ಹುಟ್ಟಿರಲಿಲ್ಲ. ಗೌರಿ ತಮ್ಮ ಮಕ್ಕಳು ಎರಡೂ ಧರ್ಮಗಳ ಹಬ್ಬಗಳನ್ನು ಆಚರಿಸುವ ಬಗ್ಗೆ ಮಾತನಾಡಿದರು. ಅದ್ಭುತ ಎಂದು ಹೇಳಿದರು. 

ಕಿಂಗ್‌ ಕೊಹ್ಲಿಗೆ ಪಠಾಣ್ ಸಾಂಗ್‌ಗೆ ಡ್ಯಾನ್ಸ್‌ ಹೇಳಿಕೊಟ್ಟ ಶಾರುಖ್ ಖಾನ್..! ವಿಡಿಯೋ ವೈರಲ್

'ದೀಪಾವಳಿ ಸಮಯದಲ್ಲಿ ನಾನು ಪೂಜೆಯನ್ನು ಮುನ್ನಡೆಸುತ್ತೇನೆ ಮತ್ತು ನಮ್ಮ ಕುಟುಂಬ ಅನುಸರಿಸುತ್ತದೆ. ಈದ್‌ನಲ್ಲಿ ಶಾರುಖ್ ಮುನ್ನಡೆಸುತ್ತಾರೆ ಮತ್ತು ನಾವು ಅನುಸರಿಸುತ್ತೇವೆ. ಇದು ತುಂಬಾ ಸುಂದರವಾಗಿದೆ ಮತ್ತು ಮಕ್ಕಳು ಇದನ್ನು ಒಪ್ಪಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ನನ್ನ ಮಕ್ಕಳು ಶಾರುಖ್ ಏನು ಹೇಳುತ್ತಾರೋ ಅದರ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಅವರಿಗೆ ದೀಪಾವಳಿ, ಈದ್, ಎಲ್ಲವೂ ಅದ್ಭುತವಾಗಿದೆ' ಎಂದು ಗೌರಿ ಖಾನ್ ಹೇಳಿದ್ದರು.