Asianet Suvarna News Asianet Suvarna News

ಶಾರುಖ್ ಜೊತೆ ಕೆಲಸ ಮಾಡ್ತಿದ್ದೀನಿ ಅಂದ್ರೆ ಮಾತ್ರ ಗೌರವಿಸ್ತಾರೆ; ಹಿಂದಿ ಮಂದಿಗೆ ವಿಜಯ್ ಸೇತುಪತಿ ತರಾಟೆ

ಶಾರುಖ್ ಜೊತೆ ಕೆಲಸ ಮಾಡ್ತಿದ್ದೀನಿ ಅಂದ್ರೆ ಮಾತ್ರ ಗೌರವಿಸ್ತಾರೆ ಎಂದು ವಿಜಯ್ ಸೇತುಪತಿ ಹಿಂದಿ ಮಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. 

Vijay Sethupathi Feels He Is not Taken Seriously By The Hindi Audience sgk
Author
First Published Jan 16, 2023, 5:23 PM IST

ಸೌತ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಸದ್ಯ ಹಿಂದಿ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ವಿಜಯ್ ಸೇತುಪತಿ ಇದೀಗ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅಂದಹಾಗೆ ವಿಜಯ್ ಸೇತುಪತಿ ಶಾರುಖ್ ಖಾನ್ ಮತ್ತು ಕತ್ರಿನಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಹಿಂದಿಗೆ ಹಾರಿದ್ದಾರೆ. ಸದ್ಯ ವಿಜಯ್ ಸೇತುಪತಿ ಹಿಂದಿಯ ಫರ್ಜಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಸೇತುಪತಿ ಪೋಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ವಿಜಯ್ ಸೇತುಪತಿ ಹಿಂದಿ ಪ್ರೇಕ್ಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ. 

ಹಿಂದಿ ಪ್ರೇಕ್ಷಕರು ಬಾಲಿವುಡ್‌ನ ದೊಡ್ಡ ಕಲಾವಿದರೊಂದಿಗೆ ಕೆಲಸ ಮಾಡುವವರೆಗೂ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು. ಸೂಪರ್ ಡಿಲಕ್ಸ್, ವಿಕ್ರಮ್ ವೇದ, 96, ವಿಕ್ರಮ್ ಗಳ ಮೂಲಕ ಅಪಾರ  ಸಂಖ್ಯೆಯ ಅಭಿಮಾನಿಗಳನ್ನು ಸೆಳೆದಿರುವ ವಿಜಯ್ ಸೇತುಪತಿ ಹಿಂದಿ ಪ್ರೇಕ್ಷಕರಿಗೆ ಇನ್ನೂ ಅಪರಿಚಿತ ಎನ್ನುವುದನ್ನು ಬಹಿರಂಗ ಪಡಿಸಿದರು. 

ವಿಜಯ್ ಸೇತುಪತಿ ಹಿಂದಿಯಲ್ಲಿ ಶಾರುಖ್ ಜೊತೆ ಪಠಾಣ್, ಶಾಹಿದ್ ಕಪೂರ್ ಜೊತೆ ಫರ್ಜಿ ಮತ್ತು ಕತ್ರಿನಾ ಜೊತೆ ಮೆರಿ ಕ್ರಿಸ್ಮಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ, 'ನಾನು ಹಿಂದಿ ಪ್ರಾಜೆಕ್ಟ್ ಮಾಡುತ್ತಿದ್ದೇನೆ ಎಂದು ಯಾರೇ ನನ್ನನ್ನು ಕೇಳಿದರೂ, ನಾನು ಶಾಹಿದ್, ಶಾರುಖ್ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಬೇಕು ನಂತರ ಅವರು ಓಹ್, ಓಕೆ ಎಂದು ಹೇಳುತ್ತಾರೆ' ಎಂದು ಹೇಳಿದರು. 

ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ: ಮಾಜಿ ಸಿಎಂ ಪಾತ್ರ ಮಾಡ್ತಾರಾ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ..?

ಇದು ನನ್ನ ಚೊಚ್ಚಲ ಸಿನಿಮಾ ಎಂದು ಹೇಳಬೇಕೆಂದು ಅನಿಸುತ್ತಿಲ್ಲ. ಏಕೆಂದರೆ ಇದನ್ನು ನಾನು ಮೊದಲ ಸಿನಿಮಾ ಎಂದು ಹೇಳಲ್ಲ.  2010ರಲ್ಲಿಯೇ ನಾನು ನಾಯಕನಾಗಿ ಪಾದಾರ್ಪಣೆ ಮಾಡಿದೆ.  12 ವರ್ಷಗಳಾಗಿವೆ. ನಾನು ಸುಮಾರು 55 ಚಿತ್ರಗಳನ್ನು ಮಾಡಿದ್ದೇನೆ. ನಾನು ಮತ್ತೆ ಮಗುವಾಗಿ ಹಿಂತಿರುಗುತ್ತಿದ್ದೇನೆ ಎಂದು ತೋರುತ್ತದೆ. ಆದ್ದರಿಂದ ಇದು ಚೊಚ್ಚಲ ಚಿತ್ರ ಎಂದು ನಾನು ಭಾವಿಸುವುದಿಲ್ಲ' ಎಂದು ಸೇತುಪತಿ ಹೇಳಿದರು.

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

ವಿಜಯ್ ಸೇತುಪತಿ ಮತ್ತು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಶಾರುಖ್ ಮತ್ತು ಸೇತುಪತಿ ಅವರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಘಟಾನುಘಟಿ ಸ್ಟಾರ್ ಇಬ್ಬರನ್ನೂ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಜವಾನ್ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಶಾರುಖ್ ಖಾನ್ ವಿಭಿನ್ನ ಲುಕ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
 

Follow Us:
Download App:
  • android
  • ios