Asianet Suvarna News Asianet Suvarna News

ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ: ಮಾಜಿ ಸಿಎಂ ಪಾತ್ರ ಮಾಡ್ತಾರಾ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ..?

ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನ ನಂತರ ಈಗ ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರು ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ ಮಾಡ್ತಿದ್ದಾರೆ. ಇದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಒಪ್ಪಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್‌ಗೆ ತಮಿಳಿನ ಖ್ಯಾತ ನಟ ವಿಜಯ ಸೇತುಪತಿ ಅವರನ್ನು ಅಪ್ರೋಚ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

after siddaramothsava plan ready for siddaramaiah biopic vijay sethupathi approached ash
Author
First Published Nov 29, 2022, 10:49 AM IST

ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections) ಇನ್ನೂ 5 - 6 ತಿಂಗಳು ಇದ್ದರೂ ರಾಜಕೀಯ ಪಕ್ಷಗಳಿಂದ (Political Party) ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ (Congress) ಕೂಡ ಹಿಂದೆ ಬಿದ್ದಿಲ್ಲ. ಆಗಸ್ಟ್‌ ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹುಟ್ಟುಹಬ್ಬವನ್ನು ಉತ್ಸವದ ರೀತಿ ಭರ್ಜರಿಯಾಗಿ ಕಾಂಗ್ರೆಸ್‌ ಪಕ್ಷದಿಂದಲೇ ಆಚರಣೆ ನಡೆಸಲಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಡಿ.ಕೆ. ಶಿವಕುಮಾರ್ (D.K. Shivakumar) ಸೇರಿ ಹಲವು ನಾಯಕರು ಈ ವೇಳೆ ಭಾಗಿಯಾಗಿದ್ದರು. ಸಿದ್ದರಾಮೋತ್ಸವ ಭರ್ಜರಿ ಯಶಸ್ಸನ್ನೂ ಕಂಡಿತ್ತು. ಈಗ ಸಿದ್ದರಾಮೋತ್ಸವ ಬಳಿಕ ಮತ್ತೊಂದು ಈವೆಂಟ್‌ಗೆ ಕಾಂಗ್ರೆಸ್‌ ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ. 

ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನ ನಂತರ ಈಗ ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರು ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ ಮಾಡ್ತಿದ್ದಾರೆ. ಇದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಒಪ್ಪಿಸಲು ಮುಂದಾಗಿದ್ದಾರೆ. ಚುನಾವಣೆಗೂ ಮುನ್ನ ಸಿದ್ದರಾಮಯ್ಯರನ್ನು ಪೋಕಸ್ ಮಾಡಲು ಸಿದ್ದರಾಮಯ್ಯ ಟೀಂ ರೆಡಿಯಾಗುತ್ತಿದ್ದು, ಸಿದ್ದರಾಮಯ್ಯ ಬಯೋಪಿಕ್‌ಗೆ ತಮಿಳಿನ ಖ್ಯಾತ ನಟ ವಿಜಯ ಸೇತುಪತಿ ಅವರನ್ನು ಒಪ್ಪಿಸಲು ಸಹ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಯಾರದ್ದೋ ದುಡ್ಡು.. ಸಿದ್ದರಾಮಯ್ಯನ ಜಾತ್ರೆ : ಸಿಎಂ ಬೊಮ್ಮಾಯಿ ಟೀಕೆ

ಸರಿಸುಮಾರು 20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವಿಜಯ್ ಸೇತುಪತಿ ಅವರನ್ನು ಈಗಾಗಲೇ ಅಪ್ರೋಚ್‌ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. 
 
ಸಿದ್ದರಾಮಯ್ಯ ನಿವಾಸದಲ್ಲಿ ಕಳೆದ ಗುರುವಾರ ಈ ಸಂಬಂಧ ಮಾಜಿ ಸಚಿವ ಮಾತುಕತೆ ನಡೆಸಿದ್ದು, ಜನವರಿಯಲ್ಲಿ ಸಿನಿಮಾ ಮಹೂರ್ತಕ್ಕೆ ಸಮಯ ನಿಗದಿ ಮಾಡ್ತೀವಿ ಎಂದೂ ಹೇಳಿದ್ದಾರೆ. ಅಲ್ಲದೆ, ಮಾಜಿ ಸಿಎಂ ಜತೆ 2 ಸುತ್ತಿನ‌ ಮಾತುಕತೆ ವೇಳೆ ಬಯೋಪಿಕ್‌ನಿಂದ ಆಗುವ ಲಾಭಗಳ ಬಗ್ಗೆಯೂ ಉತ್ತರ ಕರ್ನಾಟಕದ ಮಾಜಿ ಸಚಿವ ವಿವರಣೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ವಂದೇ ಮಾತರಂ ಹಾಡಲು ಸಿದ್ದರಾಮಯ್ಯ ಹಿಂದೇಟು, ಮತ್ತೊಂದು ವಿವಾದದಲ್ಲಿ ಕಾಂಗ್ರೆಸ್!

ಬಯೋಪಿಕ್‌ಗೆ ಅನುಮತಿ ಕೊಡಲು ಸಿದ್ದರಾಮಯ್ಯ ಹಿಂದೇಟು..!
ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರ ಬಯೋ ಪಿಕ್‌ ಮಾಡಲು ಉತ್ತರ ಕರ್ನಾಟಕದ ಮಾಜಿ ಸಚಿವರು ಮುಂದಾಗಿದ್ದಾರೆ. ಆದರೆ, ತಮ್ಮ ಬಯೋಪಿಕ್‌ಗೆ ಸಿದ್ದರಾಮಯ್ಯ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣಾ ಸಮಯದಲ್ಲಿ ಇವೆಲ್ಲ ಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, 20 ಕೋಟಿ ರೂ. ವ್ಯರ್ಥ ಯಾಕೆ, ಈ ಸಿನಿಮಾ ಬೇಡ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. 

ಆದರೆ, ಬಯೋಪಿಕ್‌ಗೆ ಒತ್ತಾಯಿಸಿದ ಮಾಜಿ ಸಚಿವ ಮತ್ತು ಬೆಂಬಲಿಗರು, ನಿಮ್ಮ ಲೈಫ್ ಜರ್ನಿಯಿಂದ ನಮಗೆ (ಕಾಂಗ್ರಸ್‌ ಪಕ್ಷಕ್ಕೆ) ಪ್ಲಸ್ ಆಗುತ್ತದೆ ಎಂದೂ ಹೇಳಿದ್ದಾರೆ. ಹಾಗೂ, ಇಡೀ ರಾಜ್ಯಾದ್ಯಂತ ನಿಮಗೆ ಅಭಿಮಾನಿಗಳು ಇದ್ದಾರೆ ಒಪ್ಪಿಕೊಳ್ಳಿ ಎಂದೂ ಸಿದ್ದರಾಮಯ್ಯ ಟೀಂ ಮಾಜಿ ಮುಖ್ಯಮಂತ್ರಿಯನ್ನು ಮನವಿ ಮಾಡ್ತಿದೆ. ನಂತರ, ಈ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ ಎಂದು ಸಿದ್ದರಾಮಯ್ಯ ಉತ್ತರ ಕರ್ನಾಟಕದ ಆ ಮಾಜಿ ಸಚಿವರಿಗೆ ಮತ್ತು ಅವರ ಬೆಂಬಲಿಗರಿಗೆ ಹೇಳಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಹರಿದು ಬಂದ 10 ಲಕ್ಷ ಜನ: ಜನಸ್ತೋಮ ನೋಡಿ ಕಾಂಗ್ರೆಸ್ಸಿಗರಿಗೇ ಅಚ್ಚರಿ..!

ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಕಾಂಗ್ರೆಸ್‌ ಉತ್ಸವವಾಗಿ ಭರ್ಜರಿಯನ್ನಾಗಿ ಆಚರಿಸಿತ್ತು. ಅದೇ ರೀತಿ, ಈಗ ಸಿದ್ದರಾಮಯ್ಯ ಅವರ ಬಯೋಪಿಕ್‌ಗೆ ಕಾಂಗ್ರೆಸ್‌ ಮಾಜಿ ಸಚಿವರೊಬ್ಬರು ಮುಂದಾಗಿರೋದು ಕುತೂಹಲ ಮೂಡಿಸಿದೆ. ಒಟ್ಟಾರೆ, ಈ ಬಯೋಪಿಕ್‌ ರೆಡಿಯಾದ್ರೂ, ಕಾಂಗ್ರೆಸ್‌ಗೆ ಇದರಿಂದ ಎಷ್ಟು ಲಾಭವಾಗುತ್ತದೆ ಅನ್ನೋದು ಚುನಾವಣೆಯ ನಂತರವೇ ತಿಳಿದುಬರಬೇಕಿದೆ. 

Follow Us:
Download App:
  • android
  • ios