Asianet Suvarna News Asianet Suvarna News

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

ಶಾರುಖ್ ಖಾನ್ ನಟವನೆಯ ಬಹುನಿರೀಕ್ಷೆಯ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಪಾತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಅತೀ ಹೆಚ್ಚು ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

vijay sethupathi charge huge amount for shahrukh khan starrer Jawan film sgk
Author
First Published Aug 29, 2022, 1:28 PM IST

ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಸದ್ಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರಿ ಬೇಡಿಕೆಯ ನಟ ವಿಜಯ್ ಸೇತುಪತಿ ಹೆಸರು ಅನೇಕ ಸ್ಟಾರ್ ನಟರ ಸಿನಿಮಾಗಳಿಗಲ್ಲಿ ಕೇಳಿಬರುತ್ತಿದೆ. ಸದ್ಯ ಸೇತುಪತಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುತ್ತಿರುವುದು ಅಧಿಕೃತವಾಗಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೆ ವಿಜಯ್ ಸೇತುಪತಿ ಅವರ ಪಿಆರ್ ಬಹಿರಂಗ ಪಡಿಸಿದ್ದರು. ಸೌತ್ ಸ್ಟಾರ್ ವಿಜಯ್ ಸೇತುಪತಿ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿನ ಪಾತ್ರ ಅಭಿಮಾನಿಗಳ ಹೃದಯ  ಗೆದ್ದಿತ್ತು. ಈ ಸಿನಿಮಾ ಬಳಿಕ ಸೇತುಪತಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ವಿಜಯ್ ಸೇತುಪತಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಎಷ್ಟೆ ಬೇಡಿಕೆ ಇದ್ದರೂ ವಿಜಯ್ ಸೇತುಪತಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ.  

ಶಾರುಖ್ ಖಾನ್ ನಟವನೆಯ ಬಹುನಿರೀಕ್ಷೆಯ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಪಾತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಅತೀ ಹೆಚ್ಚು ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೌದು, ಸೇತುಪತಿ ಇದುವರೆಗೂ ತನ್ನ ವೃತ್ತಿ ಜೀವನದಲ್ಲಿ ಪಡೆದ ಸಂಭಾವನೆ ಗಿಂತ ಅತ್ಯಧಿಕ ಸಂಭಾವನೆ ಇದಾಗಿದೆಯಂತೆ. ವಿಕ್ರಮ್ ಯಶಸ್ಸಿನ ಬಳಿಕ ಸೇತುಪತಿ 15 ರಿಂದ 21 ಕೋಟಿ ರೂಪಾಯಿ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ಜವಾನ್ ಸಿನಿಮಾಗೆ ಬರೋಬ್ಬರಿ 21 ಕೋಟಿ ರೂ. ಪಡೆದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ವಿಜಯ್ ಸೇತುಪತಿ ಪಡೆದ ದುಬಾರಿ ಸಂಭಾವನೆ ಶಾರುಖ್ ಖಾನ್ ಅವರಿಗೂ ಸಂತಸ ತಂದಿದೆ ಎನ್ನಲಾಗಿದೆ. ಸೇತುಪತಿ ಅವರ ಶ್ರಮ, ಅಭಿನಯ, ಸ್ಕ್ರಿಪ್ಟ್ ಆಯ್ಕೆ ಬಗ್ಗೆ ಶಾರುಖ್ ಖಾನ್ ಹಾಡಿಹೊಗಳಿದ್ದಾರಂತೆ.  ಅಂದಹಾಗೆ ಸೇತುಪತಿ ಅವರ ಅಭಿನಯ ಹಾಗೂ ಶಾರುಖ್ ಜೊತೆ ನಟಿಸುವ ಸಲುವಾಗಿ ಸೇತುಪತಿ ಎರಡು ಸಿನಿಮಾಗಳನ್ನು ಸಹ ಬಿಟ್ಟಿದ್ದಾರಂತೆ. ಹಾಗಾಗಿ ಜವಾನ್ ಸಿನಿಮಾಗೆ ಅತೀ ಹೆಚ್ಚು ನೀಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಶಾರುಖ್ ನೀಡಿದ ಪ್ರತಿಕ್ರಿಯೆ ಬಗ್ಗೆ ಮೂಲಗಳು ಮಾಹಿತಿ ನೀಡಿದ್ದು, ಇದು ಸೇತುಪತಿ ಅವರು ಇದುವರೆಗೂ ಪಡೆದ ಸಂಭಾವನೆಗಿಂತ ಅತೀ ಹೆಚ್ಚು ಮೊತ್ತವಿದು. ಸೇತುಪತಿ ಸಂಭಾವನೆ ಸಂತಸವಾಗಿದೆ. ವಿಕ್ರಮ್ ಸಿನಿಮಾದಲ್ಲಿನ ಅಭಿನಯ ಅದ್ಭುತವಾಗಿದೆ. 15 ಕೋಟಿ ರೂಪಾಯಿಂದ 21 ಕೋಟಿಗೆ ಏರಿಸಿಕೊಂಡಿದ್ದಾರೆ' ಎಂದು ಶಾರುಖ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಲ್ಲು ಅರ್ಜುನ್ ಬದಲು ಶಾರುಖ್ ಖಾನ್ ಸಿನಿಮಾ ಸೇರಿದ್ದೇಕೆ ವಿಜಯ್ ಸೇತುಪತಿ?

ಅಂದಹಾಗೆ ಶಾರುಖ್ ಮತ್ತು ವಿಜಯ್ ಸೇತುಪತಿಯನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ತಮಿಳಿನ ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಂಡಿದ್ದಾರೆ. ಈ ಮೊದಲು ಜವಾನ್ ತಂಡ ರಾಣಾ ದಗ್ಗುಬಾಟಿಯನ್ನು ಆಯ್ಕೆ ಮಾಡಿದ್ದು, ರಾಣಾ ಬ್ಯುಸಿ ಇದ್ದ ಕಾರಣ ವಿಜಯ್ ಸೇತುಪತಿ ಅವರನ್ನು ಅಪ್ರೋಚ್ ಮಾಡಲಾಗಿದ್ದು, ಸೇತುಪತಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಶಾರುಖ್ ಖಾನ್ ವಿಭಿನ್ನ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಮೂಲಗಳ ಪ್ರಕಾರ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

Follow Us:
Download App:
  • android
  • ios