Asianet Suvarna News Asianet Suvarna News

ಮದುವೆ ಗಂಡು-ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದು, ಕುಟುಂಬಗಳ ನಡುವೆ ಅನ್ನೋದು ನಾನ್​ಸೆನ್ಸ್​- ವಿದ್ಯಾ ಬಾಲನ್​

ಮದುವೆ ಎನ್ನೋದು ಎರಡು ಕುಟುಂಬಗಳ ನಡುವೆ ನಡಿಯೋದು ಎನ್ನೋ ಕಾನ್​ಸೆಪ್ಟೇ ನಾನ್​ಸೆನ್ಸ್​ ಎಂದಿದ್ದಾರೆ  ಬಾಲಿವುಡ್​ ನಟಿ ವಿದ್ಯಾ ಬಾಲನ್​
 

Vidya Balan said that the concept of marriage between two families is nonsense suc
Author
First Published Mar 14, 2024, 12:01 PM IST

ಹಿಂದೂ ಸಂಪ್ರದಾಯದಲ್ಲಿ ಮದುವೆ ಎನ್ನುವುದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಮದುವೆ ಎನ್ನುವುದು ಗಂಡು-ಹೆಣ್ಣಿನ ನಡುವೆ ಮಾತ್ರವಲ್ಲ, ಇದು ಎರಡು ಕುಟುಂಬಗಳ ನಡುವಿನ ಬಂಧನ ಎನ್ನುವುದು ಸಾಮಾನ್ಯವಾಗಿರುವ ಮಾತು.   ಹೆಣ್ಣಾದವಳು ಹುಟ್ಟಿ-ಬೆಳೆದ ಮನೆಯನ್ನು ಬಿಟ್ಟು ಗಂಡಿನ ಮನೆಗೆ ಹೋದಾಗ, ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯ. ಇದೇ ರೀತಿ ಬೇರೆ ಮನೆಯಿಂದ ಬಂದ ಹೆಣ್ಣೊಬ್ಬಳನ್ನು ಗಂಡಿನ ಮನೆಯವರು ತಮ್ಮ ಮನೆಯ ಮಗಳಂತೆಯೇ ಕಾಣಬೇಕು. ಆದ್ದರಿಂದ ಮದುವೆಯ ವ್ಯಾಪ್ತಿ ದೊಡ್ಡದಾಗಿದೆ. ಗಂಡು ಮತ್ತು ಹೆಣ್ಣಿನ ಮನಸ್ಸು ಒಂದಾದರೆ ದಾಂಪತ್ಯ ಜೀವನ ಸುಖವಾಗಿ ಸಾಗಬಹುದು ಎನ್ನುವುದು ನಿಜವಾದರೂ, ಮದುವೆ ಎನ್ನುವುದಕ್ಕೆ ಇಷ್ಟೇ ವ್ಯಾಖ್ಯಾನವಿಲ್ಲ. ಇಲ್ಲಿ ಎರಡೂ ಕುಟುಂಬಗಳ ಪಾಲು ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದೇ ಹೇಳಲಾಗುತ್ತದೆ. ದಂಪತಿಗೆ ಹುಟ್ಟುವ ಮಕ್ಕಳು ಕೇವಲ ಆ ದಂಪತಿಗೆ ಸೇರಿದವರಲ್ಲ. ಅದು ಇಡೀ ಕುಟುಂಬದ ಆಸ್ತಿ. ಇಷ್ಟೇ ಅಲ್ಲದೇ ಗಂಡ ಮತ್ತು ಹೆಂಡತಿಯ ನಡುವೆ ಯಾವುದೋ ಕಾರಣಕ್ಕೆ  ವೈಮನಸ್ಸು ಬಂದಾಗ, ಎರಡೂ ಕುಟುಂಬಗಳು ಕೂತು ಅದನ್ನು ಬಗೆಹರಿಸಬೇಕು.  ಇಲ್ಲದಿದ್ದರೆ ಚಿಕ್ಕಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಅದು ಬೃಹದಾಕಾರವಾಗಿ ಬೆಳೆದು ದಾಂಪತ್ಯದ ಬೇರನ್ನೇ ಕಿತ್ತೆಸೆಯಬಲ್ಲುದು. 

ಇದೇ ನಾನಾ ಕಾರಣಗಳನ್ನು ನೀಡಿ ಮದುವೆಯ ಎಂಬ ಬಂಧಕ್ಕೂ ಎರಡು ಕುಟುಂಬಗಳ ನಡುವಿನ ಸಾಮರಸ್ಯಕ್ಕೂ ಬೆಸುಗೆ ಹಾಕಲಾಗಿದೆ. ಆದರೆ ಇದನ್ನು ಕೆಲವರು ಒಪ್ಪುತ್ತಾರೆ, ಇನ್ನು ಕೆಲವರು ಒಪ್ಪುವುದಿಲ್ಲ. ಹೀಗೆ ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದು, ಎರಡು ಕುಟುಂಬಗಳ ನಡುವೆ ಎನ್ನುವುದು ಹುಚ್ಚುತನದ ಮಾತು ಎಂದಿದ್ದಾರೆ ಬಾಲಿವುಡ್ ನಟಿ ವಿದ್ಯಾ ಬಾಲನ್​. ಇತ್ತೀಚೆಗೆ ಇವರು ನೀಡಿರುವ ಸಂದರ್ಶನದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ.

ಲೈಂಗಿಕ ದೌರ್ಜನ್ಯ ಆರೋಪಿ ಜೊತೆ ಮಗು ಬಯಸಿದ್ದ ದೀಪಿಕಾ: ಹಳೆಯ ವಿಡಿಯೋದಲ್ಲಿ ನಟಿ ಹೇಳಿದ್ದೇನು?

ಅಷ್ಟಕ್ಕೂ, ಈ ಸಂದರ್ಶನದಲ್ಲಿ ನಟಿ ವಿದ್ಯಾ ಬಾಲನ್​ ಹೇಳಿದ್ದೇನೆಂದರೆ, ಮದುವೆ ಎನ್ನುವುದು ಕೇವಲ ಮತ್ತು ಕೇವಲ ಇಬ್ಬರ ನಡುವೆ ಮಾತ್ರ. ಭಾರತದಲ್ಲಿ ಎಲ್ಲರೂ ಹೇಳುವುದು ಏನೆಂದರೆ, ನೀವು ಮದುವೆಯಾದರೆ ನೀವು ಓರ್ವ ವ್ಯಕ್ತಿಯನ್ನು ಅಲ್ಲ, ನೀವು ಕುಟುಂಬದ ಜೊತೆ ಮದುವೆಯಾದಂತೆ ಎನ್ನುತ್ತಾರೆ. ಆದರೆ ಇದು ಹುಚ್ಚುತನದ ಪರಮಾವಧಿ. ನಾನು ಇದನ್ನು ಒಪ್ಪುವುದಿಲ್ಲ. ಮದುವೆ ಎನ್ನುವುದು ಕೇವಲ ಗಂಡು ಮತ್ತು ಹೆಣ್ಣಿಗೆ ಸಂಬಂಧಿಸಿದ್ದು ಎಂದಿದ್ದಾರೆ. ಇದಕ್ಕೆ ಪರ-ವಿರೋಧಗಳ ಚರ್ಚೆ ಶುರುವಾಗಿದೆ. 

ಅಂದಹಾಗೆ ನಟಿ 2012ರಲ್ಲಿ  ಸಿದ್ಧಾರ್ಥ್ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿ ಅದೇ ವರ್ಷ ಮದುವೆಯಾಗಿದ್ದರು. ಈ ಹಿಂದೆ ಇವರು ಮದುವೆ ಮತ್ತು ಲಿವ್​ ಇನ್​ ರಿಲೇಷನ್​ ಕುರಿತು ಮಾತನಾಡಿದ್ದರು. ಮೊದಲಿಗೆ ಲಿವ್ ಇನ್ ರಿಲೇಶನ್‍ಶಿಪ್ ಅಥವಾ ಮದುವೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಭಾವಿಸಿದ್ದೆ. ಆದರೆ ಸಿದ್ಧಾರ್ಥ್‍ರಿಂದಾಗಿ ವೈವಾಹಿಕ ಬದುಕು ಅದ್ಭುತವಾಗಿದೆ ಎಂದಿದ್ದರು. ಪತಿಯ ಬಗ್ಗೆ ಮಾತನಾಡುತ್ತಾ, ಸಿದ್ಧಾರ್ಥ್ ಅವರನ್ನು ನನ್ನ ಬಾಳಸಂಗತಿಯನ್ನಾಗಿ ಪಡೆಯಲು ಪುಣ್ಯ ಮಾಡಿದ್ದೆ. ಅವರು ನನ್ನ ಜೀವನದ ಕೆಟ್ಟ ದಿನಗಳಲ್ಲಿ ಬಂದು ಸಂತೋಷವನ್ನು ತಂದುಕೊಟ್ಟಿದ್ದಾರೆ. ಅವರು ನನ್ನನ್ನು ನಾನಿದ್ದಂತೆಯೇ ಸ್ವೀಕರಿಸಿದ್ದಾರೆ ಎಂದಿದ್ದರು. ನನ್ನ ದಾಂಪತ್ಯ ಜೀವನ ಸುಂದರವಾಗಿದೆ.  ಮತ್ತೊಬ್ಬರ ಮಾತುಗಳನ್ನು ಆಲಿಸುವ ತಾಳ್ಮೆ ಸಿದ್ಧಾರ್ಥ್ ರಾಯ್ ಕಪೂರ್ ಅವರಷ್ಟು ಬೇರೆಯವರಲ್ಲಿ ನಾನು ನೋಡಿಲ್ಲ ಎಂದಿದ್ದರು. ಅವರೆಷ್ಟು ತಾಳ್ಮೆಯಿಂದ ಕೇಳುತ್ತಾರೆಂದರೆ ನಾನು ಅವರಿಗೆ ಯಾವುದಾದರೂ ಗೊಂದಲದ ವಿಷಯಗಳನ್ನು ವಿವರಿಸುತ್ತಾ ನನಗೇ ಅದರ ಸ್ಪಷ್ಟ ಚಿತ್ರಣ ಸಿಗುತ್ತೆ. ಅವರಿಂದ ಸಲಹೆಗಳೇ ಬೇಕಾಗುವುದಿಲ್ಲ ಎಂದು ವಿವರಿಸಿದರು. 

ಶೂಟಿಂಗ್​ ವೇಳೆ ಭಾರಿ ಅವಘಡ: ತುಪ್ಪದ ಬೆಡಗಿ ರಾಗಿಣಿ ಕಾಲಿಗೆ ಏಟು- ಚಿತ್ರೀಕರಣ ಕ್ಯಾನ್ಸಲ್​
 

Follow Us:
Download App:
  • android
  • ios