ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಲಿವುಡ್ ನಟನ ಜೊತೆ ಮಗು ಬಯಸಿರುವುದಾಗಿ ದೀಪಿಕಾ ಪಡುಕೋಣೆ ಹೇಳಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಟಿ ಹೇಳಿದ್ದೇನು?
ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎಂದು ಬಾಲಿವುಡ್ ಲೈಫ್ ವರದಿ ಮಾಡಿತ್ತು. ಆದರೆ ಅದರ ಬಗ್ಗೆ ಸತ್ಯ ತಿಳಿದು ಬಂದಿರಲ್ಲಿ. ಆದರೆ ಇದೀಗ ಖುದ್ದು ನಟ ದಂಪತಿಯೇ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ನಟಿ ಗರ್ಭಿಣಿ ಎನ್ನುವುದಕ್ಕೆ ಸದ್ಯ ಯಾವುದೇ ಮುನ್ಸೂಚನೆ ಇಲ್ಲ. ಏಕೆಂದರೆ ಅವರಿಗೆ ಈಗ ಕೇವಲ ಎರಡು ತಿಂಗಳು. ಎರಡು ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿರುವುದಾಗಿ ದಂಪತಿ ಇದಾಗಲೇ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ದೀಪಿಕಾ ಅವರ ಎರಡು ಹಳೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿರುವುದೂ ಅಲ್ಲದೇ, ನಟಿ ತುಂಬಾ ಟ್ರೋಲ್ಗೂ ಒಳಗಾಗುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನಟಿ, ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ 8 ನಲ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿ ರಣವೀರ್ ಸಿಂಗ್ ಕೂಡ ಇದ್ದರು. ಆಗ ಪತಿಯ ಎದುರೇ ದೀಪಿಕಾ, ವಿವಾಹೇತರ ಸಂಬಂಧದ ಕುರಿತು ಓಪನ್ ಆಗಿ ಮಾತನಾಡಿದ್ದರು. ಡೇಟಿಂಗ್ ಜೀವನದ ಬಗ್ಗೆ ಮಾತನಾಡಿದ್ದ ನಟಿ, ರಣವೀರ್ ಸಿಂಗ್ ಅವರೊಂದಿಗೆ ಮದುವೆಯ ಪ್ರಸ್ತಾಪವನ್ನು ಮಾಡುವವರೆಗೂ ಬೇರೆ ಸಂಬಂಧದಲ್ಲಿ ಇದ್ದ ಬಗ್ಗೆ ಪ್ರಸ್ತಾಪಿಸಿದ್ದರು. ಬಳಿಕ ರಣವೀರ್ ಮತ್ತು ದೀಪಿಕಾ ಅವರು 2015 ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್ ಆಗ್ತಿದ್ದಂತೆಯೇ ಮಗುವಿನ ಬಿಗ್ ಅಪ್ಡೇಟ್ ನೀಡಿದ ರಣವೀರ್ ಸಿಂಗ್!
ಈಗ ನಟಿ ಗರ್ಭಿಣಿ ಎನ್ನುವ ವಿಷಯ ತಿಳಿಯುತ್ತಲೇ ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಇದಕ್ಕಿಂತಲೂ ಮುಂಚೆ 2017ರಲ್ಲಿ ನಟಿ ಮಗುವಿನ ವಿಷಯದ ಬಗ್ಗೆ ಮಾತನಾಡಿದ್ದರು. ಅದು ಇನ್ನೂ ಹೆಚ್ಚಿಗೆ ಟ್ರೋಲ್ಗೆ ಒಳಗಾಗುತ್ತಿದೆ. ಅದೇನೆಂದರೆ,2017 ರ ಜನವರಿಯಲ್ಲಿ ಬಿಡುಗಡೆಯಾದ XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಚಿತ್ರದಲ್ಲಿ ದೀಪಿಕಾ ಮತ್ತು ವಿನ್ ಡೀಸೆಲ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ತಾವು ಮಗುವನ್ನು ಹೊಂದುವುದಾದರೆ ಅದು ವಿನ್ ಡೀಸೆಲ್ ಜೊತೆ ಎಂದು ದೀಪಿಕಾ ಹೇಳಿಕೊಂಡಿದ್ದರು. ಆ ವಿಡಿಯೋ ಮತ್ತೆ ಸೌಂಡ್ ಮಾಡುತ್ತಿದೆ. ದೀಪಿಕಾ ಅವರು, ಎಲೆನ್ ಡಿಜೆನೆರೆಸ್ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಾಗ, ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ವಿಷಯ ತಿಳಿಸಿದ್ದರು. ವಿನ್ ಡೀಸೆಲ್ ಜೊತೆಗಿನ ಸಂಬಂಧದ ಕುರಿತು ಕೇಳಿದಾಗ ದೀಪಿಕಾ, ಹೊಗೆಯಿಲ್ಲದೆ ಬೆಂಕಿ ಇಲ್ಲ... ಆದರೆ, ಎಲ್ಲವೂ ನನ್ನ ತಲೆಯಲ್ಲಿದೆ ಎನ್ನುತ್ತಲೇ, ನಾವಿಬ್ಬರೂ ಅದ್ಭುತ ಕೆಮೆಸ್ಟ್ರಿ ಹೊಂದಿದ್ದೇವೆ. ಮಗು ಪಡೆಯುವುದಿದ್ದರೂ ಅವರಿಂದಲೇ ಎಂದಿದ್ದರು!
ಕುತೂಹಲದ ವಿಷಯವೇನೆಂದರೆ, ನಟ ವಿನ್ ಡೀಸೆಲ್ (Vin Diesel) ವಿರುದ್ಧ ಕಳೆದ ವರ್ಷ ಗಂಭೀರ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಅವರ ಮಾಜಿ ಸಹಾಯಕಿಯೊಬ್ಬರು ಈ ಆರೋಪ ಹೊರಿಸಿದ್ದಾರೆ. ವಿನ್ ಡೀಸೆಲ್ 2010ರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಹೋಟೆಲ್ ಒಂದರಲ್ಲಿ ಕರೆದು ನನ್ನ ಖಾಸಗಿ ಭಾಗಗಳನ್ನು ಸ್ಪರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು ಎಂದಿದ್ದಾರೆ ಸಹಾಯಕಿ. ನಾನು ಪ್ರಶ್ನೆ ಮಾಡಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದ್ದು ಇದರ ವಿಚಾರಣೆ ನಡೆಯುತ್ತಿದೆ. ತಮಗೆ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಇಷ್ಟು ವರ್ಷ ಸುಮ್ಮನಿದ್ದೆ ಎಂದು ಅವರು ಹೇಳಿದ್ದಾರೆ.
ಪಾರ್ಟಿಯಲ್ಲಿ ಡ್ಯಾನ್ಸ್ ಮಾಡ್ತಿದ್ದಾಗ್ಲೇ ರಣವೀರ್ ಪ್ಯಾಂಟ್ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?
