Asianet Suvarna News Asianet Suvarna News

ಶೂಟಿಂಗ್​ ವೇಳೆ ಭಾರಿ ಅವಘಡ: ತುಪ್ಪದ ಬೆಡಗಿ ರಾಗಿಣಿ ಕಾಲಿಗೆ ಏಟು- ಚಿತ್ರೀಕರಣ ಕ್ಯಾನ್ಸಲ್​

ಶೂಟಿಂಗ್​ ಸಮಯದಲ್ಲಿ ನಡೆದ ಅವಘಡದಿಂದ ರಾಗಿಣಿ ದ್ವಿವೇದಿ ಅವರ ಕಾಲಿಗೆ ಏಟು ಬಿದ್ದಿದ್ದು, ಶೂಟಿಂಗ್​ ಕ್ಯಾನ್ಸಲ್​ ಮಾಡಲಾಗಿದೆ. ಏನಾಯ್ತು? 
 

Due to an accident during the shooting Ragini Dwivedis leg was injured and taking rest suc
Author
First Published Mar 14, 2024, 11:12 AM IST

ಸ್ಯಾಂಡಲ್‌ವುಡ್  ನಟಿ  ತುಪ್ಪದ ಬೆಡಗಿ ಎಂದೇ ಫೇಮಸ್ ಆಗಿರೋ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ (Fitness) ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ. ರಾಗಿಣಿ ದ್ವಿವೇದಿ ಈಚೆಗಷ್ಟೆ ಜೀರೋ ಫಿಗರ್​ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದರು. ಇವರು ಆಗಾಗ ಫ್ಯಾಷನ್ ಶೋದಲ್ಲೂ ಭಾಗಿ ಆಗುತ್ತಾರೆ. ಶೋ ಟಾಪರ್ ಆಗಿಯೂ ಹೊಳೆಯುತ್ತಾರೆ.  

ಇದೀಗ ನಟಿ ಮದನಿಕ (Madanika) ಎನ್ನುವ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಚಿತ್ರದ ಶೂಟಿಂಗ್​ ಸಮಯದಲ್ಲಿ ರಾಗಿಣಿ ಅವರಿಗೆ ಏಟುಬಿದ್ದಿದ್ದು, ಶೂಟಿಂಗ್​ ಸ್ಟಾಪ್​ ಆಗಿದೆ. ಈ ಕುರಿತು ನಟಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಈ ಚಿತ್ರದಲ್ಲಿ  ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು  ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.  ಬೆಂಗಳೂರು ಸ್ಟುಡಿಯೋಸ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದ್ದು,  ಚಿಕಿತ್ಸೆ ನಂತರ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿರುವ ಕಾರಣ, ರೆಸ್ಟ್​ ಮಾಡುತ್ತಿದ್ದಾರೆ.

ರಾಗಿಣಿ ಹಾಟ್​ ಫೋಟೋಶೂಟ್​​: ಬಿಕಿನಿಯಲ್ಲೇ ನೀವ್​ ಚೆಂದ, ಚೆಡ್ಡಿ ಬಿಟ್ಬಿಡಿ ಅನ್ನೋದಾ ಫ್ಯಾನ್ಸ್​?

ನಟಿಯ ಕಾಲಿಗೆ ಪೆಟ್ಟಾಗಿರುವ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ನೋವಿನ ನಡುವೆಯೂ ನಟಿ ನಗುತ್ತಿರುವುದನ್ನು ನೋಡಬಹುದು. ನಟಿಯ ಕಾಲಿಗೆ ಸ್ವಲ್ಪ ಫ್ರ್ಯಾಕ್ಚರ್​ ಆಗಿದ್ದು,  ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ. ರಾಗಿಣಿ ನಾಯಕಿಯಾಗಿ ನಟಿಸಿರುವ ‘ಬಿಂಗೊ’ (Bingo) ಚಿತ್ರದ ಶೂಟಿಂಗ್​ ಇತ್ತೀಚೆಗೆ ಮುಕ್ತಾಯವಾಗಿದೆ. ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಆರ್.ಕೆ ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ.  ಇದರ  ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ನಡುವೆ ಮದನಿಕ ಶೂಟಿಂಗ್​ ಸಮಯದಲ್ಲಿ ಅವಘಡ ಸಂಭವಿಸಿದೆ. 

ಅಂದಹಾಗೆ ರಾಗಿಣಿ ಅವರ ಸಿನಿ ಪಯಣದ (Cine Journe) ಕುರಿತು ಹೇಳುವುದಾದರೆ, 2009 ರಲ್ಲಿ `ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಈಕೆ, ಕನ್ನಡ ಮಾತ್ರವಲ್ಲದೇ,  ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ರಾಗಿಣಿ ಅವರು ಹುಟ್ಟಿದ್ದು  ಬೆಂಗಳೂರಿನಲ್ಲಿ ಆದರೂ ಅವರದ್ದು ಪಂಜಾಬಿ ಕುಟುಂಬ. ತಂದೆ ಸೈನ್ಯದ ಜನರಲ್ ಆಗಿದ್ದರು. 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದವರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಪರ್ಧೆ ಗೆದ್ದವರು. ಹಲವಾರು ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಇವರಿಗೆ ಹೆಸರು ತಂದುಕೊಟ್ಟಿತು.  ಶಿವ ರಾಜ್​ಕುಮಾರ್​ ಜೊತೆ ನಟಿಸಿದ `ಶಿವ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿರುವ ರಾಗಿಣಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ಎಂದೂ ಗುರುತಿಸಿಕೊಂಡಿದ್ದಾರೆ. ಹೀಗೆ 15 ವರ್ಷಗಳ ಸಿನಿ ಜರ್ನಿಯಲ್ಲಿ 40 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

'ಕಿರಿಕ್ ಪಾರ್ಟಿ', 'ಕರ್ನಾಟಕ ಕ್ರಷ್' ನೆನಪಿಸಿಕೊಳ್ಳುತ್ತಲೇ ಸಿನಿ ಜರ್ನಿಯ ಕುರಿತು ರಶ್ಮಿಕಾ ಹೇಳಿದ್ದೇನು?

 

 

Follow Us:
Download App:
  • android
  • ios