Asianet Suvarna News Asianet Suvarna News

'ಗೋಲ್ಡ್ ಡಿಗ್ಗರ್' ಎಂದ ನೆಟ್ಟಿಗರಿಗೆ ಸುಶ್ಮಿತಾ ಸೇನ್ ಖಡಕ್ ಪ್ರತಿಕ್ರಿಯೆ; ಪ್ರಿಯಾಂಕಾ, ರಣ್ವೀರ್ ಬೆಂಬಲ

ಲಲಿತ್ ಮೋದಿ ಜೊತೆ ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೋಲ್ಡ್ ಡಿಗ್ಗರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಕೆರಳಿರುವ ಮಾಜಿ ವಿಶ್ವಸುಂದರಿ 

Sushmita Sen shuts trolls calling her a gold digger sgk
Author
Bengaluru, First Published Jul 18, 2022, 5:19 PM IST

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಸಂಬಂಧ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಲಿತ್ ಮೋದಿ ಟ್ವೀಟ್ ಮೂಲಕ ಸುಶ್ಮಿತಾ  ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ ನಂತರ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಮಾಜಿ ವಿಶ್ವಸುಂದರಿ ಜೊತೆಗಿನ ಲಲಿತ್ ಮೋದಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಲಲಿತ್ ಮೋದಿ ಮತ್ತು ಸುಶ್ಮಿತಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ಕೂಡ ಸುಶ್ಮಿತಾ ಸೇನ್ ವಿರುದ್ಧ ಕಿಡಿಕಾರಿದ್ದರು.  ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ತಸ್ಲೀಮಾ ನಸ್ರೀನ್, ಆಕೆ ಹಣಕ್ಕೆ ಮಾರಾಟವಾಗಿದ್ದಾಳೆ ಎಂದು ಹೇಳಿದ್ದರು. 

ಲಲಿತ್ ಮೋದಿ ಜೊತೆ ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೋಲ್ಡ್ ಡಿಗ್ಗರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಕೆರಳಿರುವ ಮಾಜಿ ವಿಶ್ವಸುಂದರಿ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ. ಗೋಲ್ಡ್ ಗಿಂತ ವಜ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೀನಿ ಎಂದು ಹೇಳಿದ್ದಾರೆ. ಸುಶ್ಮಿತಾ ಸೇನ್‌ಗೆ ಪ್ರಿಯಾಂಕಾ ಚೋಪ್ರಾ ಮತ್ತು ನಟ ರಣ್ವೀರ್ ಸಿಂಗ್ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಶ್ಮಿತಾ ಪೋಸ್ಟ್ ಗೆ ಕಾಮೆಂಟ್ ಮಾಡುವ ಮೂಲಕ ಸುಶ್ಮಿತಾ ಪರ ನಿಂತಿದ್ದಾರೆ. 

ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ಸುಶ್ಮಿತಾ ಸೇನ್, ನಿಮ್ಮ ಸುಶ್ ಸಂಪೂರ್ಣವಾಗಿ ಚೆನ್ನಾಗಿದ್ದಾಳೆ ಎಂದು ಹೇಳಿದರು. ಸುಶ್ಮಿತಾ ಪೋಸ್ಟ್‌ಗೆ ಪ್ರಿಯಾಂಕಾ ಚೋಪ್ರಾ, ನೇಹಾ ದೂಪಿಯಾ, ರಣ್ವೀರ್ ಸಿಂಗ್ ಕಾಮೆಂಟ್ ಮಾಡಿದ್ದಾರೆ.


ಅವಳು ಹಣಕ್ಕೆ ಮಾರಾಟವಾಗಿದ್ದಾಳೆ; ಸುಶ್ಮಿತಾ ಸೇನ್ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್

 

ಗೋಲ್ಡ್ ಡಿಗ್ಗರ್ ಎಂದರೇನು?

ಗೋಲ್ಡ್ ಡಿಗ್ಗರ್ ಎಂದರೆ ಹಣವಂತ ಪುರುಷರನ್ನು ಹುಡುಕುತ್ತ ಇರುವ ಲಲನೆಯರು. ಈ ಪದ ಸೃಷ್ಟಿಯಾದದ್ದು ಹಾಲಿವುಡ್‌ನಲ್ಲಿ. ಇಲ್ಲಿ ಪ್ರತಿವರ್ಷ ಲಕ್ಷಾಂತರ ತರುಣಿಯರು ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಬಯಸಿ ಇಂಡಸ್ಟ್ರಿಗೆ ಬರುತ್ತಾರೆ. ತಮ್ಮನ್ನು ಸಾಕಬಲ್ಲ ಹಣವಂತರನ್ನು ಇವರು ಹುಡುಕುತ್ತಿರುತ್ತಾರೆ.  ಅದೇ ಕಾಲಕ್ಕೆ, ಇಂಥವರಿಗೆ ಒಂದು ಚಾನ್ಸ್ ಕೊಡಿಸಿ, ಅವರಿಂದ ತಮ್ಮ ಮೈಯ ತೀಟೆ ತೀರಿಸಿಕೊಳ್ಳಲು ಕೆಲವು ಶ್ರೀಮಂತರು ಕಾಯುತ್ತಿರುತ್ತಾರೆ. ಈ ಸೆಟಪ್‌ಗಳು ಬಗೆಬಗೆಯಾಗಿರುತ್ತವೆ. ಕೆಲವು ತಾತ್ಕಾಲಿಕ ಇರಬಹುದು, ಇನ್ನು ಕೆಲವು ಪರ್ಮನೆಂಟ್. ಕೆಲವರು ತಮ್ಮ ಶ್ರೀಮಂತ ಶುಗರ್ ಡ್ಯಾಡಿಗಳಿಗೇ ಪರ್ಮನೆಂಟಾಗಿ ಕಚ್ಚಿಕೊಳ್ಳುತ್ತಾರೆ. ಇಪ್ಪತ್ತು ವರ್ಷದ ಖತರ್‌ನಾಕ್ ತರುಣಿಯರು ತೊಂಬತ್ತು ವರ್ಷದ ಕುಬೇರರನ್ನು ಮದುವೆಯಾಗುವುದೂ ಉಂಟು. ಇವರೇನು ಸುಖ ಕೊಡುತ್ತಾರೋ, ಅವರೇನು ಸುಖ ಪಡೆಯುತ್ತಾರೋ ಅವರಿಗೇ ಗೊತ್ತು. ಇಲ್ಲವಾದರೆ  ಒಂದೆರಡು ವರ್ಷ ಸಂಸಾರ ನಡೆಸಿ, ಅವನ ಆಸ್ತಿಯಲ್ಲಿ ದೊಡ್ಡ ಪಾಲು ಪಡೆದು ವಿಚ್ಛೆದನ ಮಾಡಿಕೊಳ್ಳುತ್ತಾರೆ‌. 

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಟ್ರೋಲಿಗೆ ಲಲಿತ್ ಮೋದಿ ಪ್ರತಿಕ್ರಿಯೆ 

ಸುಶ್ಮೀತಾ ಸೇನ್ ಜೊತೆಗಿನ ರಿಲೇಷನ್‌ಶಿಪ್‌ನಿಂದ ಹಿಡಿದು, ಐಪಿಎಲ್ ಸೇರಿದಂತೆ ಎಲ್ಲಾ ಟ್ರೋಲ್‌ಗೆ ಉತ್ತರ ನೀಡಿದ್ದಾರೆ. ಎಲ್ಲಾ ಮಾಧ್ಯಗಳು ಡೋನಾಲ್ಡ್ ಟ್ರಂಪ್ ರೀತಿ ಸುಳ್ಳು ಸುದ್ದಿ ಹರಡುತ್ತಿದೆ. ಫೋಟೋ ಹಂಚಿಕೊಂಡಿದ್ದೇನೆ ಅದರಲ್ಲಿ ತಪ್ಪೇನು? ಲಂಚ ಪಡೆದು ವಿದೇಶಕ್ಕೆ ಪರಾರಿಯಾಗುವ ಅವಶ್ಯಕತೆ ನನಗಿಲ್ಲ. ನಾನು ಹುಟ್ಟುವಾಗಲೇ ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ. ನನಗ್ಯಾಕೆ ಬೇಕು ಲಂಚ ಎಂದು ಲಲಿತ್ ಮೋದಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳು ಯಾಕ ತಪ್ಪಾಗಿ ನನ್ನನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದೆ. ನಾನು ಇನ್‌ಸ್ಟಾದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. ಅದು ತಪ್ಪಲ್ಲ ಎಂದು ಭಾವಿಸುತ್ತೇನೆ.  ನಾವು ಇನ್ನೂ ಮಧ್ಯಯುಗದಲ್ಲಿ ವಾಸಿಸುತ್ತಿದ್ದೇವೆ. ಸ್ನೇಹಿತರಾಗಿರಲು ಸಾಧ್ಯವಿಲ್ಲವೇ, ಸ್ನೇಹಿತರ ನಡುವೆ ಕೆಮೆಸ್ಟ್ರಿ ಚೆನ್ನಾಗಿದ್ದರೆ, ಸಮಯವೂ ಸರಿಯಾಗಿದ್ದರೆ ಮ್ಯಾಜಿಕ್ ನಡೆಯಬುಹುದು.  ಯಾರಿಗೂ ಯಾವುದೇ ಹೊಣೆಗಾರಿಗೆ ಇಲ್ಲ. ಭಾರತದಲ್ಲಿ ಎಲ್ಲರೂ ಅರ್ನಬ್ ಗೋಸ್ವಾಮಿ ಆಗಲು ಬಯಸುತ್ತಿದ್ದಾರೆ. ದೊಡ್ಡ ಕೋಡಂಗಿ ಆತ. ನನ್ನ ಸಲಹೆ ಅಂದರೆ ಇತರರನ್ನು ಬದುಕಲು ಬಿಡಿ ಎಂದು ಕಿಡಿ ಕಾರಿದ್ದರು. 

Follow Us:
Download App:
  • android
  • ios