Asianet Suvarna News Asianet Suvarna News

ಅವಳು ಹಣಕ್ಕೆ ಮಾರಾಟವಾಗಿದ್ದಾಳೆ; ಸುಶ್ಮಿತಾ ಸೇನ್ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್

ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಲೇಖಕಿ ತಸ್ಲೀಮಾ ನಸ್ರೀನ್ ಕಿಡಿಕಾರಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ತಸ್ಲೀಮಾ ನಸ್ರೀನ್, ಮಾಜಿ ವಿಶ್ವಸುಂದರಿಯನ್ನು ಭೇಟಿಯಾಗಿದ್ದ ನೆನಪನ್ನು ಸಹ ಹಂಚಿಕೊಂಡಿದ್ದಾರೆ. 

So she was sold to money Taslima Nasrin slams Sushmita Sen sgk
Author
Bengaluru, First Published Jul 17, 2022, 11:23 AM IST

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಸಂಬಂಧ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಲಿತ್ ಮೋದಿ ಟ್ವೀಟ್ ಮೂಲಕ ತನ್ನ ಮತ್ತು ಸುಶ್ಮಿತಾ  ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ ನಂತರ ಸಂಚಲನ ಮೂಡಿಸಿತ್ತು. ಮಾಜಿ ವಿಶ್ವಸುಂದರಿ ಜೊತೆಗಿನ ಲಲಿತ್ ಮೋದಿಯ  ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.  ಲಲಿತ್ ಮೋದಿ ಮತ್ತು ಸುಶ್ಮಿತಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಲೇಖಕಿ ತಸ್ಲೀಮಾ ನಸ್ರೀನ್ ಕಿಡಿಕಾರಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ತಸ್ಲೀಮಾ ನಸ್ರೀನ್, ಮಾಜಿ ವಿಶ್ವಸುಂದರಿಯನ್ನು ಭೇಟಿಯಾಗಿದ್ದ ನೆನಪನ್ನು ಸಹ ಹಂಚಿಕೊಂಡಿದ್ದಾರೆ. 

'ನಾನು ಸುಶ್ಮಿತಾ ಸೇನ್ ಅವರನ್ನು ಒಂದೇ ಬಾರಿ ಭೇಟಿಯಾಗಿದ್ದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದು. ಅವರು ನನ್ನನ್ನು ತಬ್ಬಿಕೊಂಡು ಐ ಲವ್ ಯೂ ಎಂದರು. ಆ ಪ್ರದೇಶದಲ್ಲಿ ನನಗಿಂತ ಎತ್ತರ ಯಾರೂ ಇಲ್ಲ, ಹಾಗಾಗಿ ನನ್ನ ಪಕ್ಕದಲ್ಲಿ ನಿಂತಿದ್ದ ನನಗೆ ಇದ್ದಕ್ಕಿದ್ದಂತೆ ಬಾಗಿದ ಅನುಭವವಾಯಿತು. ಅವಳ ಸೌಂದರ್ಯದಿಂದ ನನ್ನ ಮೋಹದ ಕಣ್ಣುಗಳನ್ನು ಸುಲಭವಾಗಿ ತೆಗೆದುಹಾಕಲು ನನಗೆ ಸಾಧ್ಯವಾಗಲಿಲ್ಲ' ಎಂದಿದ್ದಾರೆ.

'ನಾನು ಸುಶ್ಮಿತಾ ಸೇನ್ ಅವರ ವ್ಯಕ್ತಿತ್ವವನ್ನು ಹೆಚ್ಚು ಇಷ್ಟಪಟ್ಟೆ. ಚಿಕ್ಕ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ಅವರ ಪ್ರಾಮಾಣಿಕತೆ, ಶೌರ್ಯ, ಅರಿವು, ಸ್ವಾವಲಂಬನೆ ಇಷ್ಟವಾಯಿತು, ಅವರ ದೃಢತೆ, ನೇರತೆ ಇಷ್ಟವಾಯಿತು' ಎಂದು ಹಾಡಿಹೊಗಳಿದ್ದಾರೆ. 

ಮೊದಲು ಸುಶ್ಮಿತಾ ಅವರನ್ನು ಹಾಡಿಹೊಗಳಿದ ತಸ್ಲೀಮಾ ಬಳಿಕ ಮಾಜಿ ವಿಶ್ವಸುಂದರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 'ಆದರೆ ಸುಶ್ಮಿತಾ ಈಗ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿರುವ ಅತ್ಯಂತ ಕೆಟ್ಟ ವ್ಯಕ್ತಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ. ಏಕೆಂದರೆ ಆ ವ್ಯಕ್ತಿ ತುಂಬಾ ಶ್ರೀಮಂತ? ಆದ್ದರಿಂದ ಅವಳು ಹಣಕ್ಕೆ ಮಾರಾಟವಾಗಿದ್ದಾಳೆ?' ಎಂದಿದ್ದಾರೆ. ಅದೇ ಸಮಯದಲ್ಲಿ ಲೇಖಕಿ, 'ಬಹುಶಃ ಅವಳು ಪುರುಷನನ್ನು ಪ್ರೀತಿಸುತ್ತಿರಬಹುದು. ಆದರೆ ಅವಳು ಪ್ರೀತಿಯಲ್ಲಿದ್ದಾರೆ ಎಂದು ನಂಬಲು  ಸಾಧ್ಯವಿಲ್ಲ. ಹಣದ ಪ್ರೀತಿಯಲ್ಲಿ ಬೀಳುವವರಿಂದ ನಾನು ಬೇಗನೆ ಗೌರವವನ್ನು ಕಳೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ. 

Not ಮದುವೆ, No ಉಂಗುರ ಸಾಕಿಷ್ಟು ಕ್ಲಾರಿಟಿ: ಮದುವೆ ವದಂತಿಗೆ ಸುಶ್ಮಿತಾ ಸೇನ್ ರಿಯಾಕ್ಷನ್

ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಸುಶ್ಮಿತಾ ಪೋಸ್ಟ್ 

'ತುಂಬಾ ಸಂತೋಷವಾಗಿರುವ ಸ್ಥಳದಲ್ಲಿದ್ದೇವೆ. ಮದುವೆ ಆಗಿಲ್ಲ ಉಂಗುರ ಹಾಕಿಲ್ಲ. ಅಪಾರ ಪ್ರೀತಿ ಕೊಡುವ ಜನರ ನಡುವೆ ಇರುವೆ. ನಿಮಗೆ ಸಾಕಿಷ್ಟು ನನ್ನ ಸ್ಪಷ್ಟನೆ. ಈಗ ಜೀವನ ನಡೆಯಬೇಕು ಕೆಲಸ ಮುಂದುವರೆಸಬೇಕು. ನನ್ನ ಸಂತೋಷಗಳಲ್ಲಿ ಸದಾ ಭಾಗಿಯಾಗುವುದಕ್ಕೆ ಧನ್ಯವಾದಗಳು. ಮಿಕ್ಕವರಿಗೆ ಇದು none of your business. ಏನೇ ಇರಲಿ ಐ ಲವ್‌ ಯು' ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ಫೆರಾರಿಯಿಂದ ಬೆಂಟ್ಲಿವರೆಗೆ ಲಲತ್‌ ಮೋದಿ ಲಕ್ಷುರಿಯಸ್‌ ಕಾರುಗಳ ಕಲೆಕ್ಷನ್‌ ಇವು

ಲಲಿತ್ ಮೋದಿ ಪೋಸ್ಟ್ 

'ಮಾಲ್ಡೀವ್ಸ್‌ ಗ್ಲೋಬಲ್ ಟೂರ್‌ ಮುಗಿಸಿ ಲಂಡನ್‌ಗೆ ಹಿಂತಿರುಗಿದ್ದೀವಿ ನಮ್ಮ ಕುಟುಂಬದ ಜೊತೆ. ಹೇಳುವುದನ್ನು ಮರೆಯಬಾರದು ನನ್ನ ಬೆಟರ್‌ಹಾಫ್‌ ನನ್ನ ಜೊತೆಗಿದ್ದಾರೆ- ಸುಶ್ಮಿತಾ ಸೇನ್. ಹೊಸ ಜೀವನ. ಚಂದ್ರನ ಮೇಲಿರುವಷ್ಟೇ ಸಂತೋಷವಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇಬ್ಬರ ಸಂಬಂಧ ಎಲ್ಲಾ ಕಡೆ ಸದ್ದು ಮಾಡುವಂತೆ ಮಾಡಿದೆ. 

Follow Us:
Download App:
  • android
  • ios