Asianet Suvarna News Asianet Suvarna News

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಹಣಕಾಸಿನ ಫೇವರ್ ಪಡೆಯುವ ಹಾಗೂ ಶುಗರ್ ಡ್ಯಾಡಿಗೆ ಸೆಕ್ಸ್ ಸುಖ ನೀಡುವ ಸ್ತ್ರೀಯನ್ನು ಶುಗರ್ ಬೇಬಿ ಅಂತ ಕರೆಯುತ್ತಾರೆ. ಸಿನೆಮಾ ಇಂಡಸ್ಟ್ರಿಯಲ್ಲಿ ಹೊಸದಾಗಿ ಬರುವ ನಟಿಯರಲ್ಲಿ ಹಲವು ಮಂದಿ ಇಂಥ ಶುಗರ್ ಬೇಬಿಗಳಾಗುತ್ತಾರೆ. ಪ್ರಭಾವಿ ನಿರ್ದೇಶಕರು, ಶ್ರೀಮಂತ ನಿರ್ಮಾಪಕರು, ರಾಜಕಾರಣಿಗಳು ಇವರಿಗೆ ಶುಗರ್ ಡ್ಯಾಡಿಯ ಪಾತ್ರ ನಿರ್ವಹಿಸುತ್ತಾರೆ.

Sugar daddy Sugar baby Gold digger meaning and who are they
Author
Bengaluru, First Published Oct 5, 2020, 4:58 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿ ನಡೀತಿರೋ ತನಿಖೆಯ ಲೇಟೆಸ್ಟ್ ಕೊಂಡಿ ಅಂದ್ರೆ ನಟಿ, ಆಂಕರ್ ಅನುಶ್ರೀ. ಈ ಅನುಶ್ರೀಗೆ ಸಂಬಂಧಿಸಿ ಪ್ರಶಾಂತ್‌ ಸಂಬರಗಿ ಅನ್ನುವವನು, ಈಕೆಯನ್ನು ಯಾವ ಶುಗರ್ ಡ್ಯಾಡಿ ರಕ್ಷಿಸ್ತಾ ಇದಾನೆ ಅಂತ ಕೇಳಿದಾನೆ. ಶುಗರ್ ಡ್ಯಾಡಿ ಅನ್ನೋ ಪದಕ್ಕೆ ಒಳ್ಳೆಯ ಮೀನಿಂಗೇನೂ ಇಲ್ಲ. ಶುಗರ್ ಡ್ಯಾಡಿ ಥರವೇ ಇನ್ನೊಂದು ಪದ ಶುಗರ್ ಬೇಬಿ. ಹಾಗೇ ಇನ್ನೊಂದು ಪದ ಗೋಲ್ಡ್ ಡಿಗ್ಗರ್. ಈ ಪದಗಳ ಬಗ್ಗೆ ತಿಳಿಯುವುದೇ ತುಂಬ ಕುತೂಹಲಕಾರಿ.

ಶುಗರ್ ಡ್ಯಾಡಿ ಅಂದರೆ ಶ್ರೀಮಂತ ವ್ಯಕ್ತಿ, ಅಧಿಕಾರಿ ಅಥವಾ ಪ್ರಭಾವಿ ರಾಜಕಾರಣಿ- ಯಾರೂ ಇರಬಹುದು. ಈತ ಎಳೆಯ ಪ್ರಾಯದ ಹೆಣ್ಣುಗಳನ್ನು ಹುಡುಕುತ್ತಾ ಇರುತ್ತಾನೆ. ಅವರಿಗೆ ಗಿಫ್ಟ್ ಕೊಡುತ್ತಾನೆ. ಹಣ, ಬಂಗಾರ ಬೇಕಿದ್ದರೆ ಅದನ್ನೂ ಕೊಡುತ್ತಾನೆ. ಆಫೀಸ್‌ನಲ್ಲಿ ದೊಡ್ಡ ಹುದ್ದೆ, ಕಾರು, ಅಪಾರ್ಟ್‌ಮೆಂಟ್ ಎಲ್ಲ ಕೊಡುತ್ತಾನೆ. ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತಾನೆ. ಸಿನಿಮಾ ಫ್ಲಾಪ್ ಆದ್ರೂ ಆಕೆಗೆ ಬರುವ ಹಣಕ್ಕೆ ಮೋಸ ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಅವನು ಪಡೆಯುವುದೇನು? ಬೇರೇನಲ್ಲ, ಆ ಹುಡುಗಿಯಿಂದ ಸೆಕ್ಸ್. ಆತ ಬಯಸಿದಾಗ ಅವನ ಮಂಚಕ್ಕೆ ಹೋಗಲು ಆಕೆ ರೆಡಿ ಇರಬೇಕು.

Sugar daddy Sugar baby Gold digger meaning and who are theyಹೀಗೆ ಹಣಕಾಸಿನ ಫೇವರ್ ಪಡೆಯುವ ಹಾಗೂ ಶುಗರ್ ಡ್ಯಾಡಿಗೆ ಸೆಕ್ಸ್ ಸುಖ ನೀಡುವ ಸ್ತ್ರೀಯನ್ನು ಶುಗರ್ ಬೇಬಿ ಅಂತ ಕರೆಯುತ್ತಾರೆ. ಸಿನೆಮಾ ಇಂಡಸ್ಟ್ರಿಯಲ್ಲಿ ಹೊಸದಾಗಿ ಬರುವ ನಟಿಯರಲ್ಲಿ ಹಲವು ಮಂದಿ ಇಂಥ ಶುಗರ್ ಬೇಬಿಗಳಾಗುತ್ತಾರೆ. ಪ್ರಭಾವಿ ನಿರ್ದೇಶಕರು, ಶ್ರೀಮಂತ ನಿರ್ಮಾಪಕರು, ರಾಜಕಾರಣಿಗಳು ಇವರಿಗೆ ಶುಗರ್ ಡ್ಯಾಡಿಯ ಪಾತ್ರ ನಿರ್ವಹಿಸುತ್ತಾರೆ.

ಟಾಲಿವುಡ್‌ನಲ್ಲೂ ಬರುತ್ತಿದೆ Lust stories; ಹಸ್ತ ಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್? 

ಇಂಥದೇ ಇನ್ನೊಂದು ಪದ ಗೋಲ್ಡ್ ಡಿಗ್ಗರ್. ಗೋಲ್ಡ್ ಡಿಗ್ಗರ್ ಅಂದರೆ ಇಂಥ ಹಣವಂತ ಪುರುಷರನ್ನು ಹುಡುಕುತ್ತ ಇರುವ ಲಲನೆಯರು. ಈ ಪದ ಸೃಷ್ಟಿಯಾದದ್ದು ಹಾಲಿವುಡ್‌ನಲ್ಲಿ. ಇಲ್ಲಿ ಪ್ರತಿವರ್ಷ ಲಕ್ಷಾಂತರ ತರುಣಿಯರು ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಬಯಸಿ ಇಂಡಸ್ಟ್ರಿಗೆ ಬರುತ್ತಾರೆ. ತಮ್ಮನ್ನು ಸಾಕಬಲ್ಲ ಹಣವಂತರನ್ನು ಇವರು ಹುಡುಕುತ್ತಿರುತ್ತಾರೆ.  ಅದೇ ಕಾಲಕ್ಕೆ, ಇಂಥವರಿಗೆ ಒಂದು ಚಾನ್ಸ್ ಕೊಡಿಸಿ, ಅವರಿಂದ ತಮ್ಮ ಮೈಯ ತೀಟೆ ತೀರಿಸಿಕೊಳ್ಳಲು ಕೆಲವು ಶ್ರೀಮಂತರು ಕಾಯುತ್ತಿರುತ್ತಾರೆ. ಈ ಸೆಟಪ್‌ಗಳು ಬಗೆಬಗೆಯಾಗಿರುತ್ತವೆ. ಕೆಲವು ತಾತ್ಕಾಲಿಕ ಇರಬಹುದು, ಇನ್ನು ಕೆಲವು ಪರ್ಮನೆಂಟ್. ಕೆಲವರು ತಮ್ಮ ಶ್ರೀಮಂತ ಶುಗರ್ ಡ್ಯಾಡಿಗಳಿಗೇ ಪರ್ಮನೆಂಟಾಗಿ ಕಚ್ಚಿಕೊಳ್ಳುತ್ತಾರೆ. ಇಪ್ಪತ್ತು ವರ್ಷದ ಖತರ್‌ನಾಕ್ ತರುಣಿಯರು ತೊಂಬತ್ತು ವರ್ಷದ ಕುಬೇರರನ್ನು ಮದುವೆಯಾಗುವುದೂ ಉಂಟು. ಇವರೇನು ಸುಖ ಕೊಡುತ್ತಾರೋ, ಅವರೇನು ಸುಖ ಪಡೆಯುತ್ತಾರೋ ಅವರಿಗೇ ಗೊತ್ತು. ಗಂಡ ಬೇಗ ಸತ್ತಷ್ಟೂ ಇಂಥವರು ಬೇಗ ಶ್ರೀಮಂತರಾಗುತ್ತಾರೆ. ಇಲ್ಲವಾದರೆ  ಒಂದೆರಡು ವರ್ಷ ಸಂಸಾರ ನಡೆಸಿ, ಅವನ ಆಸ್ತಿಯಲ್ಲಿ ದೊಡ್ಡ ಪಾಲು ಪಡೆದು ವಿಚ್ಛೆದನ ಮಾಡಿಕೊಳ್ಳುತ್ತಾರೆ‌. ಫಾಯಿದೆ ಈ ಗೋಲ್ಡ್ ಡಿಗ್ಗರ್‌ಗಳಿಗೇ.

ಅನುಶ್ರೀ 6 ಸಿಮ್ ರಹಸ್ಯ, 30 ಪ್ರಭಾವಿಗಳಿಗೆ ನಡುಕ! 

ಶುಗರ್ ಬೇಬಿಗಳಿಗೂ ಗೋಲ್ಡ್ ಡಿಗ್ಗರ್‌ಗಳಿಗೂ ವ್ಯತ್ಯಾಸವಿದೆ. ಶುಗರ್ ಬೇಬಿಗಳು ಇವರನ್ನು ಮದುವೆಯಾಗುವುದಿಲ್ಲ. ಗೋಲ್ಡ್ ಡಿಗ್ಗರ್‌ಗಳು ಚಪಲಚಿತ್ತರಾದ ಹಣವಂತರನ್ನು ಸದಾ ಹುಡುಕುತ್ತಾ ಇರುತ್ತಾರೆ. ಇಂಥ ದುರುದ್ದೇಶ ಶುಗರ್ ಬೇಬಿಗಳಿಗೆ ಇರಬೇಕು ಎಂದೇನಿಲ್ಲ. ಶುಗರ್ ಬೇಬಿಗಳಲ್ಲಿ ಪರಿಸ್ಥಿತಿ ಸನ್ನಿವೇಶಗಳಿಗೆ ಬಲಿಪಶು ಆದವರೂ ಇರಬಹುದು.ಹಾಗಿದ್ದರೆ ಸೆಕ್ಸ್ ವರ್ಕರ್‌ಗೂ ಇವರಿಗೂ ವ್ಯತ್ಯಾಸವೇನು? ತುಂಬಾ ವ್ಯತ್ಯಾಸವಿದೆ. ಸೆಕ್ಸ್ ವರ್ಕರ್‌ಗಳು ಕಾಸು ಕೊಡುವ ಯಾರ ಜೊತೆಗೇ ಆದರೂ ದೇಹ ಹಂಚಿಕೊಳ್ಳಬಲ್ಲರು. ಆದರೆ ಇವರು ಹಾಗಲ್ಲ. ಅಪ್ಸರೆಯರು ದೇವತೆಗಳ ಜೊತೆಗೆ ಮಾತ್ರ ದೇಹಸುಖ ಹಂಚಿಕೊಳ್ಳುವವರು, ಇಂದ್ರನ ಆಸ್ಥಾನ ನರ್ತಕಿಯರು.ಶುಗರ್ ಬೇಬಿಗಳು ಒಬ್ಬನೇ ಒಬ್ಬ ಶ್ರೀಮಂತನನ್ನು ಹಿಡಿದುಕೊಂಡು, ಆತನಿಗಾಗಿಯೇ ತಮ್ಮ ತಾರುಣ್ಯ ಅರ್ಪಿಸುವವರು. ಇವರೂ ಮುಂದೆ ಅದೇ ಹಣವಂತನನ್ನು ಮದುವೆಯಾಗಬಾರದು ಎಂದೇನಿಲ್ಲ. ಅಥವಾ ಇವನ ಕೈಬಿಟ್ಟು ಬೇರೊಬ್ಬನನ್ನು ಮದುವೆಯಾಗಲೂಬಹುದು.

"
ಬಾಲಿವುಡ್‌ನಲ್ಲೂ ಸ್ಯಾಂಡಲ್‌ವುಡ್‌ನಲ್ಲೂ ಹುಡುಕುತ್ತ ಹೋದರೆ ಇಂಥ ಅನೇಕ ಶುಗರ್ ಡ್ಯಾಡಿ, ಶುಗರ್ ಬೇಬಿ, ಗೋಲ್ಡ್ ಡಿಗ್ಗರ್‌ಗಳು ನಿಮಗೆ ಕಾಣಿಸಬಹುದು.

ಅನುಶ್ರೀ ಹಿಂದಿರುವ ಶುಗರ್ ಡ್ಯಾಡಿ, ಮಾಜಿ ಸಿಎಂ ಯಾರು? 

 

Follow Us:
Download App:
  • android
  • ios