Asianet Suvarna News Asianet Suvarna News

ನನ್ನ ಭಾವನೆ ಜೊತೆ ಆಟವಾಡಿದ, ಜೀವನ ನರಕ ಮಾಡಿದ; ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ಜಾಕ್ವೆಲಿನ್ ಆಕ್ರೋಶ

ನನ್ನ ಭಾವನೆ ಜೊತೆ ಆಟವಾಡಿದ, ಜೀವನ ನರಕ ಮಾಡಿದ ಎಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧ ಕಿಡಿ ಕಾರಿದ್ದಾರೆ.  

Sukesh Chandrashekhar played with my emotions, ruined my career Jacqueline Fernandez says in court
Author
First Published Jan 19, 2023, 11:17 AM IST

ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ನಡೆಸಿರುವ ಅತೀ ಗಣ್ಯ ವ್ಯಕ್ತಿಗಳ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಆರೋಪಿಯಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಇತ್ತೀಚೆಗಷ್ಟೆ ದೆಹಲಿಯ ಪಟಿಯಾಲ ಕೋರ್ಟ್‌ಗೆ ಹಾಜರಾಗಿದ್ದ ನಟಿ ಜಾಕ್ವೆಲಿನ್ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಜನವರಿ 16 ರಂದು ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ನಟಿ ಸಲ್ಲಿಸಿದ ಹೊಸ ಮನವಿಯ ಕುರಿತು ನ್ಯಾಯಾಲಯ ಜಾರಿ ನಿರ್ದೇಶನಾಲಯದಿಂದ ಪ್ರತಿಕ್ರಿಯೆಯನ್ನು ಕೇಳಿತು. ವಿಚಾರಣೆ ವೇಳೆ ಜಾಕ್ವೆಲಿನ್ ಫರ್ನಾಂಡಿಸ್ 7 ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. 

ಜಾಕ್ವೆಲಿನ್ ಫರ್ನಾಂಡಿಸ್ ನೀಡಿದ 7 ಆಘಾತಕಾರಿ ಹೇಳಿಕೆಗಳು 

ಭಾವನೆಗಳ ಜೊತೆ ಆಟವಾಡಿದ 

ಜಾಕ್ವೆಲಿನ್ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ, ಸುಕೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿದ. ನನ್ನ ಜೀವನವನ್ನು ನರಕ ಮಾಡಿದ' ಎಂದು ಹೇಳಿದ್ದಾರೆ. 'ಸುಕೇಶ್ ನನ್ನನ್ನು ದಾರಿ ತಪ್ಪಿಸಿದ, ನನ್ನ ವೃತ್ತಿ ಮತ್ತು ನನ್ನ ಜೀವನ ಹಾಳುಮಾಡಿದ' ಎಂದು ಅವರು ಹೇಳಿದರು.

ಸರ್ಕಾರಿ ಅಧಿಕಾರಿ ಎಂದು ಸುಕೇಶ್ ಪರಿಚಯಮಾಡಿಕೊಂಡಿದ್ದ  

ಪಿಂಕಿ ಇರಾನಿ ಸುಕೇಶ್ ಅವರನ್ನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿದರು ಮತ್ತು ಯಾರೋ ತನಗೆ ವಂಚನೆ ಮಾಡುತ್ತಿದ್ದಾರೆ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾಳೆ. ತಮ್ಮ ಭೇಟಿಯ ಬಗ್ಗೆ ಬಹಿರಂಗ ಪಡಿಸಿದ ಜಾಕ್ವೆಲಿನ್ ಪಿಂಕಿ ತನ್ನ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್‌ಗೆ ಸುಕೇಶ್ ಗೃಹ ಸಚಿವಾಲಯದ ಪ್ರಮುಖ ಅಧಿಕಾರಿ ಎಂದು ಹೇಳಿದ್ದ. ನಂತರ ಇಬ್ಬರೂ ಮಾತನಾಡಲು ಪ್ರಾರಂಭಿಸಿದೆವು ಎಂದು ಜಾಕ್ವೆಲಿನ್ ಹೇಳಿದರು.

ಜೆ.ಜಯಲಲಿತಾ ತಮ್ಮ ಚಿಕ್ಕಮ್ಮ ಎಂದು ಸುಕೇಶ್ ಹೇಳಿದ್ದ

ತನ್ನನ್ನು ತಾನು ಸನ್ ಟಿವಿ ಮಾಲೀಕ ಎಂದು ಪರಿಚಯಿಸಿಕೊಂಡಿದ್ದ ಮತ್ತು ಜೆ ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಎಂದು ಜಾಕ್ವೆಲಿನ್ ಹೇಳಿದರು. ಚಂದ್ರಶೇಖರ್ ಅವರು ದೊಡ್ಡ ಅಭಿಮಾನಿ ಎಂದು ಹೇಳಿದರು ಮತ್ತು ನಾನು ದಕ್ಷಿಣ ಭಾರತದಲ್ಲೂ ಚಲನಚಿತ್ರಗಳನ್ನು ಮಾಡಬೇಕು, ಸನ್ ಟಿವಿಯ ಮಾಲೀಕರಾಗಿ, ಅವರು ಅನೇಕ ಯೋಜನೆಗಳನ್ನು ಹೊಂದಿದ್ದರು. ನಾವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಡೋಣ ಎಂದು ಹೇಳಿದ್ದ ಎಂದು ಜಾಕ್ವೆಲಿನ್ ಹೇಳಿದರು. 

ಸುಕೇಶ್ ಜೈಲಿನಿಂದ ತನಗೆ ಕರೆ ಮಾಡುತ್ತಿದ್ದರು 

ನಾನು ಮತ್ತು ಸುಕೇಶ್ ದಿನಕ್ಕೆ ಕನಿಷ್ಠ ಮೂರು ಬಾರಿ ಫೋನ್ ಮತ್ತು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು ಎಂದು ಜಾಕ್ವೆಲಿನ್ ಬಹಿರಂಗಪಡಿಸಿದ್ದಾರೆ. ಅವಳು ಹೇಳಿದಳು, ‘ಅವನು ಬೆಳಿಗ್ಗೆ ನನ್ನ ಚಿತ್ರೀಕರಣ ಆರಂಭದಕ್ಕೂ ಮೊದಲು, ನಂತರ ಮತ್ತು ರಾತ್ರಿ ಮಲಗುವ ಮೊದಲು ಕರೆ ಮಾಡುತ್ತಿದ್ದನು’. ‘ಅವನು ಜೈಲಿನಿಂದನೂ ಕರೆ ಮಾಡುತ್ತಿದ್ದ ಆದರೆ ಜೈಲಿನಲ್ಲಿದ್ದನೆಂದು ಅವನು ಎಂದಿಗೂ ಹೇಳಿಲ್ಲ. ಅವರು ಒಂದು ಮೂಲೆಯಿಂದ ಪರದೆ ಮತ್ತು ಸೋಫಾ ಬಳಿಯಿಂದ ಕರೆ ಮಾಡುತ್ತಿದ್ದ' ಎಂದು ಜಾಕ್ವೆಲಿನ್ ಹೇಳಿದರು. 

ಕೊನೆಯದಾಗಿ ಆಗಸ್ಟ್ 8, 2021 ರಂದು ಮಾತನಾಡಿದ್ವಿ 

ಆಗಸ್ಟ್ 8, 2021 ರಂದು ನಾನು ಮತ್ತು ಕಾನ್‌ಮ್ಯಾನ್ ಸುಕೇಶ್ ಕೊನೆಯ ಬಾರಿಗೆ ಫೋನ್ ನಲ್ಲಿ ಮಾತನಾಡಿದ್ದೇವೆ. ಆ ದಿನದ ನಂತರ ಅವನು ತನ್ನನ್ನು ಸಂಪರ್ಕಿಸಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. 'ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಹಿರಿಯ ಸರ್ಕಾರಿ ಅಧಿಕಾರಿಯ ಸೋಗು ಹಾಕಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ನನಗೆ ನಂತರ ತಿಳಿಯಿತು' ಎಂದು ಜಾಕ್ವೆಲಿನ್ ಹೇಳಿದ್ದಾರೆ.

Nora Fatehi V/s Jacqueline; ಸ್ಟಾರ್ ನಟಿಯರ ಕಿತ್ತಾಟ, ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನೋರಾ

ಪಿಂಕಿ ಇರಾನಿಗೆ ಎಲ್ಲಾ ಗೊತ್ತಿತ್ತು 

ಸುಕೇಶ್ ಮತ್ತು ಪಿಂಕಿ ಯಾವಾಗಲೂ ತನಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ಜಾಕ್ವೆಲಿನ್.‘ಶೇಖರ್ ನಿಂದ ನಾನು ಮೋಸ ಹೋದೆ. ಶೇಖರ್‌ನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ನನಗೆ ತಿಳಿದ ಸಮಯದಲ್ಲಿ, ಅವನ ನಿಜವಾದ ಹೆಸರು ಸುಕೇಶ್ ಎಂದು ನನಗೆ ಗೊತ್ತಾಯಿತು' ಎಂದು ಜಾಕ್ವೆಲಿನ್ ಹೇಳಿದರು. ಪಿಂಕಿಗೆ ಸುಕೇಶ್‌ನ ಹಿನ್ನೆಲೆ ಮತ್ತು ಎಲ್ಲದರ ಬಗ್ಗೆ ತಿಳಿದಿತ್ತು ಆದರೆ ಅವಳು ಅದನ್ನು ಎಂದಿಗೂ ಬಹಿರಂಗಪಡಿಸಲಿಲ್ಲ ಎಂದು ಆರೋಪಿಸಿದರು. 

ವಂಚನೆ ಪ್ರಕರಣ ಈವರೆಗೂ ಜಾಕ್ವೆಲಿನ್‌ ಬಂಧನ ಏಕಿಲ್ಲ?: ಕೋರ್ಟ್ ಪ್ರಶ್ನೆ

ಖಾಸಗಿ ಜೆಟ್‌ನಲ್ಲಿ ಪ್ರಯಾಣ

ಜಾಕ್ವೆಲಿನ್ ಕೇರಳಕ್ಕೆ ಪ್ರಯಾಣಿಸಬೇಕಾದಾಗ ಸುಕೇಶ್ ತನ್ನ ಖಾಸಗಿ ಜೆಟ್ ಅನ್ನು ಬಳಸಲು ಹೇಳಿದ್ದರು ಎಂದು ಬಹಿರಂಗಪಡಿಸಿದರು. ಆಕೆಗಾಗಿ ಕೇರಳದಲ್ಲಿ ಹೆಲಿಕಾಪ್ಟರ್ ರೈಡ್ ಕೂಡ ಏರ್ಪಡಿಸಿದ್ದ. ‘ನಾನು ಅವನನ್ನು ಚೆನ್ನೈನಲ್ಲಿ ಭೇಟಿಯಾದ ಎರಡು ಸಂದರ್ಭಗಳಲ್ಲಿ ಅವನ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದೆ’ ಎಂದು ಬಹಿರಂಗ ಪಡಿಸಿದರು. 


 

Follow Us:
Download App:
  • android
  • ios