Asianet Suvarna News Asianet Suvarna News

Nora Fatehi V/s Jacqueline; ಸ್ಟಾರ್ ನಟಿಯರ ಕಿತ್ತಾಟ, ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನೋರಾ

ಬಾಲಿವುಡ್‌ನಲ್ಲಿ ಸ್ಟಾರ್ ನಟಿಯರ ಕಿತ್ತಾಟ ಶುರುವಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Nora Fatehi files defamation lawsuit against Jacqueline Fernandez sgk
Author
First Published Dec 13, 2022, 12:05 PM IST

ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ನಡೆಸಿರುವ ಅತೀ ಗಣ್ಯ ವ್ಯಕ್ತಿಗಳ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ಆರೋಪಿಯಾಗಿರುವ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ದಿಲ್ಲಿಯ ಪಟಿಯಾಲಾ ಕೋರ್ಟಲ್ಲಿ ಮಾನಹಾನಿ ದಾವೆ ಹೂಡಿದ್ದಾರೆ. ಬಾಲಿವುಡ್‌ನಲ್ಲಿ ಈಗ ಈ ಇಬ್ಬರೂ ಸ್ಟಾರ್ ನಟಿಯರ ಕಿತ್ತಾಟ ಅಚ್ಚರಿ ಮೂಡಿಸಿದೆ. ಜಾಕ್ವೆಲಿನ್ ಫರ್ನಾಂಡಿಸ್​ ಅವರು ದುರುದ್ದೇಶಪೂರಿತ ಕಾರಣಗಳನ್ನು ನೀಡಿ ತನ್ನ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋರಾ ಫತೇಹಿ ಆರೋಪಿಸಿದ್ದಾರೆ.

‘ಸುಲಿಗೆ ಹಣದಲ್ಲಿ ಸುಕೇಶ್‌ನಿಂದ ಕಾಣಿಕೆ ಸ್ವೀಕರಿಸಿದ್ದೇನೆ ಎಂಬ ಆರೋಪ ಹೊರಿಸಿ ಪ್ರಕರಣದಲ್ಲಿ ನನ್ನನ್ನು ಆರೋಪಿ ಮಾಡಲಾಗಿದೆ. ಆದರೆ ಗಿಫ್ಟ್ ಸ್ವೀಕರಿಸಿದ್ದ ನೋರಾಗೆ ಆರೋಪಿ ಪಟ್ಟ ಏಕಿಲ್ಲ? ಆಕೆಯನ್ನು ಏಕೆ ಆರೋಪಿ ಮಾಡಿಲ್ಲ’ಎಂದು ಅಕ್ರಮ ಹಣ ವರ್ಗಾವಣೆ ಕುರಿತ ಕೋರ್ಚ್‌ನಲ್ಲಿ ಜಾಕ್ವೆಲಿನ್‌ ಇತ್ತೀಚೆಗೆ ವಾದಿಸಿದ್ದರು.

ಇದರಿಂದ ಕೆಂಡಾಮಂಡಲರಾಗಿರುವ ನೋರಾ ಫತೇಹಿ, ‘ನಾನು ಸುಕೇಶ್‌ನಿಂದ ಯಾವುದೇ ಗಿಫ್ಟ್ ಸ್ವೀಕರಿಸಿಲ್ಲ. ಆತ ನನಗೆ ನೇರವಾಗಿ ಪರಿಚಯ ಕೂಡ ಇಲ್ಲ. ಆತನ ಪತ್ನಿಯ ಮೂಲಕ ಸುಕೇಶ್‌ ಸಂಪರ್ಕಕ್ಕೆ ಬಂದಿದ್ದೆ ಅಷ್ಟೇ. ಆದರೆ ಜಾಕ್ವೆಲಿನ್‌ ಅವರು ಸ್ವಂತ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡುತ್ತಿದ್ದಾಳೆ. ನನ್ನದು-ಆಕೆಯದು ಒಂದೇ ವೃತ್ತಿ. ಹೀಗಾಗಿ ವೃತ್ತಿ ಹಗೆತನ ಸಾಧಿಸಲು ನನ್ನ ವಿರುದ್ಧ ಆಕೆ ಆರೋಪ ಮಾಡಿದ್ದಾಳೆ. ಆಕೆಯ ಆರೋಪಗಳಿಂದ ನನಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ’ ಎಂದು ಮಾನಹಾನಿ ದಾವೆಯಲ್ಲಿ ನೋರಾ ಆರೋಪಿಸಿದ್ದಾರೆ.

ವಂಚನೆ ಪ್ರಕರಣ ಈವರೆಗೂ ಜಾಕ್ವೆಲಿನ್‌ ಬಂಧನ ಏಕಿಲ್ಲ?: ಕೋರ್ಟ್ ಪ್ರಶ್ನೆ

ಸುಕೇಶ್​ ಚಂದ್ರಶೇಖರ್​ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು. ಸುಕೇಶ್​ ಚಂದ್ರಶೇಖರ್ ಅವರಿಂದ ನೋರಾ ಫತೇಹಿ ಕೂಡ ಗಿಫ್ಟ್​ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ನಟಿ ನೋರಾ ಫತೇಹಿ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಜೊತೆಗೆ ಈ ವಿಷಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಮಾತ್ರ ತನಗೆ ಪರಿಚಯವಿದ್ದು, ನೇರವಾಗಿ ಯಾವುದೇ ಸಂಪರ್ಕವಿಲ್ಲ ಎಂದು ಅವರು ಹೇಳಿದ್ದಾರೆ.

ಸುಲಿಗೆ ಪ್ರಕರಣದ ಜಾಮೀನು ವಿಚಾರಣೆಗಾಗಿ ಕೋರ್ಟ್‌ಗೆ ಜಾಕ್ವೆಲಿನ್ ಫರ್ನಾಂಡೀಸ್

ನೋರಾ ಫತೇಹಿ ಅವರು ಅತ್ಯುತ್ತಮ ಡ್ಯಾನ್ಸರ್​. ಹಿಂದಿ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕ ಅವರು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.  ನೋರಾ ಫತೇಹಿ ಅವರ ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಸಖತ್ ಆಗಿ ಹೆಜ್ಜೆ ಆಗುವ ನೋರಾ ಡಾನ್ಸ್‌ಗೆ ಫಿದಾ ಆಗದವರಿಲ್ಲ. ನೋರಾ ಫತೇಹಿ ಡಾನ್ಸ್ ಅಂದರೆ ಪಕ್ಕಾ ಹಿಟ್ ಆಗುತ್ತೆ ಎನ್ನುವ ಮಟ್ಟಕ್ಕೆ ಛಾಪು ಬೆಳೆಸಿಕೊಂಡಿದ್ದಾರೆ.  ಪ್ರತಿ ಹಾಡಿಗೆ ನೋರಾ ಫತೇಹಿ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನೂ ಸಿನಿಮಾ ಮಾತ್ರವಲ್ಲದೇ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

Follow Us:
Download App:
  • android
  • ios