Asianet Suvarna News Asianet Suvarna News

ವಂಚನೆ ಪ್ರಕರಣ ಈವರೆಗೂ ಜಾಕ್ವೆಲಿನ್‌ ಬಂಧನ ಏಕಿಲ್ಲ?: ಕೋರ್ಟ್ ಪ್ರಶ್ನೆ

ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಹ-ಆರೋಪಿ, ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಅವರನ್ನು ಇದುವರೆಗೂ ಬಂಧಿಸದ ಜಾರಿ ನಿರ್ದೇಶನಾಲಯದ ಕ್ರಮವನ್ನು ಸ್ಥಳೀಯ ನ್ಯಾಯಾಲಯ ಪ್ರಶ್ನಿಸಿದೆ.

Why hasn't Jacqueline been arrested so far? Court question ED
Author
First Published Nov 11, 2022, 7:53 AM IST

ನವದೆಹಲಿ: ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಹ-ಆರೋಪಿ, ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಅವರನ್ನು ಇದುವರೆಗೂ ಬಂಧಿಸದ ಜಾರಿ ನಿರ್ದೇಶನಾಲಯದ ಕ್ರಮವನ್ನು ಸ್ಥಳೀಯ ನ್ಯಾಯಾಲಯ ಪ್ರಶ್ನಿಸಿದೆ.

ಗುರುವಾರ ಜಾಕ್ವೆಲಿನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ವಿಶೇಷ ನ್ಯಾಯಾಲಯ, ‘ಆಕೆ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಆಕೆ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದೀರಿ. ಆದರೆ ಆಕೆಯನ್ನು ಇದುವರೆಗೆ ಒಮ್ಮೆಯೂ ಬಂಧಿಸಿಲ್ಲ. ಇದೇ ಪ್ರಕರಣದ ಇತರೆ ಆರೋಪಿಗಳು ಜೈಲಿನಲ್ಲಿದ್ದರೂ ಆಕೆಯನ್ನು ಮಾತ್ರ ಸುಮ್ಮನೆ ಬಿಡಲಾಗಿದೆ. ಆರೋಪಿಗಳ ಬಂಧನದ ವಿಷಯದಲ್ಲೂ ಹೀಗೆ ತಾರತಮ್ಯ ಏಕೆ?’ ಎಂದು ಇ.ಡಿ.(Enforcement Directorate)ಯನ್ನು ತರಾಟೆಗೆ ತೆಗೆದುಕೊಂಡಿತು.

ಸುಲಿಗೆ ಪ್ರಕರಣದ ಜಾಮೀನು ವಿಚಾರಣೆಗಾಗಿ ಕೋರ್ಟ್‌ಗೆ ಜಾಕ್ವೆಲಿನ್ ಫರ್ನಾಂಡೀಸ್

ಇದೇ ವೇಳೆ ಜಾಮೀನು ಕೋರಿ ಜಾಕ್ವೆಲಿನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾದಿರಿಸಿತು.

ಸುಕೇಶ್‌ (Sukesh Chandrasekhar) ತನ್ನ ವಂಚನೆ ಹಾಗೂ ಸುಲಿಗೆಯ ದುಡ್ಡಿನಲ್ಲಿ ಜಾಕ್ವೆಲಿನ್‌ಗೆ (Jacqueline) ಕೋಟ್ಯಂತರ ರು. ಮೌಲ್ಯದ ವಸ್ತುಗಳನ್ನು ಉಡುಗೊರೆ ನೀಡಿದ್ದ. ಆತ ವಂಚಕ (fraud) ಎಂದು ಗೊತ್ತಿದ್ದರೂ ಜಾಕ್ವೆಲಿನ್‌ ಈ ಕಾಣಿಕೆ ಸ್ವೀಕರಿಸಿದ್ದಳು ಎಂಬುದು ಆರೋಪವಾಗಿದೆ.

ಸಾಕ್ಷ್ಯವನ್ನು ಹಾಳು ಮಾಡಿ, ದೇಶದಿಂದ ಓಡಿಹೋಗಲು ಜಾಕ್ವೆಲಿನ್ ಫರ್ನಾಂಡಿಸ್ ಪ್ರಯತ್ನ?

Follow Us:
Download App:
  • android
  • ios