Suhana Khan: ದೀಪಿಕಾ ಪಡುಕೋಣೆ ಸ್ಥಾನ ಗಿಟ್ಟಿಸಿಕೊಂಡ ಶಾರುಖ್​ ಪುತ್ರಿ, ಏನಿದು ಗುಟ್ಟು?

ನಟ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಅವರನ್ನು ಈಗ ಮುಂದಿನ ದೀಪಿಕಾ ಪಡುಕೋಣೆ ಎನ್ನುತ್ತಿದ್ದಾರೆ. ಇದಕ್ಕೆ  ಕಾರಣವೇನು? 
 

Suhana Khan becomes Maybelline Brand Ambassador before bollywood debut fans get crazy

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ತಮ್ಮ ಸ್ಟೈಲ್ ಮತ್ತು ಲುಕ್‌ನಿಂದ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಸದ್ಯ ಸುದ್ದಿಯಲ್ಲಿ ಇದ್ದುದು  ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ವಿಷಯದಲ್ಲಿ. ಇತ್ತೀಚೆಗಷ್ಟೇ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡು, ವಿದೇಶಕ್ಕೂ ಒಟ್ಟಿಗೇ ಹಾರಿ, ಫ್ಲೈಯಿಂಗ್​ ಕಿಸ್​ ಮಾಡುವ ಮೂಲಕ  ಬಚ್ಚನ್​ ಮತ್ತು ಖಾನ್​ ಇಬ್ಬರೂ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆಯೇ  ಇದೀಗ ಸುಹಾನಾ ಖಾನ್​ ಕುರಿತು ಒಂದೊಳ್ಳೆ ಸುದ್ದಿ ಹೊರಬಂದಿದೆ. ಆಕೆ ಪವಾಡವನ್ನೇ ಮಾಡಿದ್ದಾರೆ ಎನ್ನಲಾಗುತ್ತಿದೆ!

ಹೌದು.  ಸುಹಾನಾ  ಪವಾಡ ಮಾಡಿದ್ದಾರೆ  ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವಾಸ್ತವವಾಗಿ, ಸುಹಾನಾ ನ್ಯೂಯಾರ್ಕ್‌ನ ಸೌಂದರ್ಯ ಬ್ರ್ಯಾಂಡ್ ಮೇಬೆಲಿನ್‌ನ ಬ್ರಾಂಡ್ ಅಂಬಾಸಿಡರ್ (Brand Ambassador) ಆಗಿದ್ದಾರೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಅದರಲ್ಲಿ ಸುಹಾನಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕೆಂಪು ಉಡುಪಿನಲ್ಲಿ ತನ್ನ ಕರ್ವಿ ಫಿಗರ್ ಅನ್ನು ಪ್ರದರ್ಶಿಸುತ್ತಿರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆಕೆಯ ಲುಕ್ ಜೊತೆಗೆ ಆಕೆಯ ಬಾಸಿಸಮ್​ ಸ್ಟೈಲ್ ಅನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಕೆಲವರು ಆಕೆಯನ್ನು ಮುಂದಿನ ದೀಪಿಕಾ ಪಡುಕೋಣೆ ಎಂದೂ ಕರೆಯುತ್ತಿದ್ದಾರೆ.  ಬ್ರ್ಯಾಂಡ್ ಈವೆಂಟ್‌ನಲ್ಲಿ ಸುಹಾನಾ ಅವರ  ಮಾದಕ ನೋಟದಿಂದ ಅಭಿಮಾನಿಗಳು ಸಾಕಷ್ಟು ಪ್ರಭಾವಿತರಾಗಿದ್ದಾರೆ.  ಸುಹಾನಾರನ್ನು ಪ್ಯಾನ್ಸ್​ ಹಾಡಿ ಹೊಗಳಿದ್ದಾರೆ. ಈಕೆ ತುಂಬಾ ಸೊಗಸಾದ ಮತ್ತು ಸುಂದರವಾದ ನಟಿ ಎಂದು ಕೊಂಡಾಡಿದ್ದಾರೆ. ಹಲವರು ಸುಹಾನಾ ಖಾನ್ (Suhana Khan) ಅವರನ್ನು ಮುಂದಿನ ದೀಪಿಕಾ ಪಡುಕೋಣೆ ಎಂದು ಕರೆದಿದ್ದಾರೆ.  

ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

ಸುಹಾನಾ ಖಾನ್ ಬಾಲ್ಯದಿಂದಲೂ ತಮ್ಮ ತಂದೆಯಂತೆ ನಟನಾ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸಿದ್ದರು.  ಅವರು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ನಟನಾ ಕೋರ್ಸ್ ಕೂಡ ಮಾಡಿದ್ದಾರೆ. ಸುಹಾನಾ ಈಗ ಬಾಲಿವುಡ್‌ಗೆ ಕಾಲಿಡಲಿದ್ದಾರೆ. ನಿರ್ದೇಶಕ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಅವರು ತಮ್ಮ ಮೊದಲ ನಟನೆಯನ್ನು ಮಾಡುತ್ತಿದ್ದಾರೆ. ಚಿತ್ರವು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ, ಅವರು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್, ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಇತರ ಸ್ಟಾರ್ ಮಕ್ಕಳು ಜೊತೆಯಲ್ಲಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಪುತ್ರಿ, ನನ್ನನ್ನು ಸದಾ ಹಾಸ್ಯ (Comedy) ಮಾಡುತ್ತಿದ್ದಳು ಎಂದು ಶಾರುಖ್​ ಖಾನ್​ ಹೇಳಿಕೊಂಡಿದ್ದರು.   2015ರಲ್ಲಿ ನಡೆದ ಶಾರುಖ್​ ಅವರ ಸಂದರ್ಶನ ಈಗ ಸಕತ್​ ವೈರಲ್​ ಆಗುತ್ತಿದೆ.  ಮಗಳ ಜೊತೆ ಹೋದಾಗಲೆಲ್ಲ ತಾವು ಅಂದು ಅನುಭವಿಸುತ್ತಿರುವ ಪೇಚಿನ ಕುರಿತಾಗಿ ಮಗಳು ಸುಹಾನಾ ಸದಾ ತಮ್ಮನ್ನು ಗೇಲಿ ಮಾಡುತ್ತಾಳೆ ಎಂದು ಶಾರುಖ್​ ಹೇಳಿದ್ದಾರೆ.  ಪ್ರತಿ ಬಾರಿಯೂ ಮಗಳನ್ನು ಕರೆದುಕೊಂಡು ಹೋಗುವಾಗ  ಸಾರ್ವಜನಿಕವಾಗಿ (Public) ಕರೆದೊಯ್ಯುವಂತೆಯೇ ಇರಲಿಲ್ಲ. ಜನರು ಸದಾ ಕಣ್ಣಿಡುವ ಹಿನ್ನೆಲೆಯಲ್ಲಿ ಯಾರಾದರೂ ಹತ್ತಿರ ಬಂದರೆ ನಾನು ಓಡಿಹೋಗಬೇಕಿತ್ತು. ಇದರ ಹೊರತಾಗಿಯೂ ಜನರು ನನ್ನ ನಡಿಗೆಯ ಶೈಲಿನಲ್ಲಿ ಗುರುತಿಸುತ್ತಿದ್ದರು. ಆದ್ದರಿಂದ ಸುಹಾನಾ ಸದಾ ನನ್ನ ನಡಿಗೆಯ ಶೈಲಿಯನ್ನು ತೋರಿಸಿ ಗೇಲಿ ಮಾಡುತ್ತಾಳೆ ಎಂದು ಶಾರುಖ್​ ಹೇಳಿದ್ದಾರೆ. 

ಈ ವಿಷಯಕ್ಕೆ ಶಾರುಖ್​ರನ್ನ ಗೇಲಿ ಮಾಡ್ತಿದ್ರಂತೆ ಮಗಳು ಸುಹಾನಾ ಖಾನ್​!

 

 
 
 
 
 
 
 
 
 
 
 
 
 
 
 

A post shared by @varindertchawla

Latest Videos
Follow Us:
Download App:
  • android
  • ios