ನಟಿ ಶ್ರೀದೇವಿಯ ಮೂರನೇ ಮಗಳು ಈಗ ಪಾಕಿಸ್ತಾನದ ಭಾರಿ ಸಂಭಾವನೆಯ ನಟಿ!
ಈ ಹೆಡ್ಡಿಂಗ್ ನೋಡಿ ನಿಮಗೆ ಗೊಂದಲ ಆಗಿರಬಹುದು. ಶ್ರೀದೇವಿಗೆ ಇಬ್ಬರೇ ಹೆಣ್ಣುಮಕ್ಕಳಲ್ವಾ? ಒಬ್ಳು ಜಾನ್ವಿ ಕಪೂರ್ ಮತ್ತೊಬ್ಬಳು ಖುಷಿ ಕಪೂರ್. ಮೂರನೇಯವಳು ಎಲ್ಲಿಂದ ಬಂದಳು ಅಂತ. ಅವಳ ಕತೇನೇ ಹೇಳ್ತೀವಿ ಕೇಳಿ.
ಪಾಕಿಸ್ತಾನಿ ಚಲನಚಿತ್ರೋದ್ಯಮದ ಅನೇಕ ನಟಿಯರು ತಮ್ಮ ಅತ್ಯುತ್ತಮ ಅಭಿನಯ ಮತ್ತು ಉತ್ತಮ ನಟನಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಜಗತ್ತಿನ ಚಿತ್ರರಸಿಕರ ಗಮನವನ್ನು ಸೆಳೆದಿದ್ದಾರೆ ಮತ್ತು ಅವರ ಪ್ರತಿಭೆಗೆ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅವರ ಅಭಿನಯ ಹಾಗೂ ಸೌಂದರ್ಯದಿಂದ ಮಂತ್ರಮುಗ್ಧರಾಗುವವರು ತುಂಬಾ ಮಂದಿ. ಅಂತಹ ಸೆಲೆಬ್ರಿಟಿಗಳಲ್ಲಿ ಒಬ್ಬಾಕೆ ಸಾಜಲ್ ಅಲಿ. 30 ವರ್ಷ ಪ್ರಾಯದ ಈಕೆ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಅವರು 'ನಾದನಿಯಾನ್' ಫಿಲಂನೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಜನಪ್ರಿಯ ಟಿವಿ ಡ್ರಾಮಾಗಳಾದ 'ಸಿನ್ಫ್-ಎ-ಆಹಾನ್', 'ಇಷ್ಕ್-ಎ-ಲಾ', 'ಯೇ ದಿಲ್ ಮೇರಾ', 'ಯಾಕೀನ್ ಕಾ ಸಫರ್', ಮತ್ತು 'ಕುಚ್ ಅಂಕಹಿ'ಗಳಲ್ಲಿ ಚಂದದ ಪಾತ್ರಗಳನ್ನು ಮಾಡಿದಳು.
ಅದು ಸರಿ, ಈಕೆಗೂ ಶ್ರೀದೇವಿಗೂ ಏನು ಸಂಬಂಧ? ಇದೆ. 2017ರಲ್ಲಿ ಬಾಲಿವುಡ್‌ನಲ್ಲಿ 'ಮಾಮ್' ಚಿತ್ರ ಬಂತು. ಅದರಲ್ಲಿ ನಟಿ ಶ್ರೀದೇವಿ ಮತ್ತು ಅದ್ನಾನ್ ಸಿದ್ದಿಕಿ ಪ್ರಧಾನ ಪಾತ್ರಗಳಲ್ಲಿದ್ದರು. ಇದರಲ್ಲಿ ಸಾಜಲ್ ಅಲಿ ಪದಾರ್ಪಣೆ ಮಾಡಿದಳು. ಅದರಲ್ಲಿ ಆಕೆ ಶ್ರೀದೇವಿಯ ಮಗಳಾಗಿ ನಟಿಸಿದಳು. ಚಿತ್ರದ ಶೂಟಿಂಗ್ ಸೆಟ್‌ಗಳಲ್ಲಿ ಸಾಜಲ್ ಅಲಿ ಅವರೊಂದಿಗಿನ ಶ್ರೀದೇವಿಯ ಬಾಂಧವ್ಯವು ಬಲವಾಯಿತು. ಅವರು ಸೆಟ್‌ಗಳಲ್ಲಿ ತುಂಬ ಆತ್ಮೀಯರಾಗಿದ್ದರು. ಶ್ರೀದೇವಿಯ ಇಬ್ಬರು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ನಮಗೆಲ್ಲರಿಗೂ ಗೊತ್ತು. ಮೀಡಿಯಾ ಕಾರ್ಯಕ್ರಮವೊಂದರಲ್ಲಿ ಶ್ರೀದೇವಿ, ಸಾಜಲ್ ಅಲಿಯನ್ನು "ನನ್ನ ಮೂರನೇ ಮಗಳು" ಎಂದು ಪರಿಚಯಿಸಿದಳು. ಸಜಲ್ ‘ಮಾಮ್’ ಚಿತ್ರದಲ್ಲಿ ಶ್ರೀದೇವಿಯ ಸ್ಕ್ರೀನ್ ಮಗಳಾಗಿ ಮಾತ್ರವಲ್ಲದೆ ಅವಳ ನಿಜವಾದ ಮಗಳಂತೆಯೂ ಆಕೆ ಹೊಂದಿಕೊಂಡಿದ್ದಳು. ಆ ಸಮಯದಲ್ಲಿ 53 ವರ್ಷ ವಯಸ್ಸಿನ ಶ್ರೀದೇವಿ ಅವರು 23ರ ಸಾಜಲ್ ಅನ್ನು ತುಂಬ ಇಷ್ಟಪಡುತ್ತಿದ್ದರು. ‘ಮಾಮ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಶ್ರೀದೇವಿ ಮಾಧ್ಯಮದವರೊಂದಿಗೆ ಮಾತನಾಡಿ, “ಸಜಲ್ ನನ್ನ ಮೂರನೇ ಮಗುವಿನಂತೆ. ಈಗ, ನನಗೆ ಇನ್ನೂ ಒಬ್ಬ ಮಗಳು ಇದ್ದಾಳೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದರು.
1994ರಲ್ಲಿ ಲಾಹೋರ್‌ನಲ್ಲಿ ಜನಿಸಿದ ಸಜನ್ ಸಂದರ್ಶನವೊಂದರಲ್ಲಿ ಹೇಳಿದಳು: “ನನ್ನ ತಾಯಿ ಸತ್ತ ದಿನ, ಈ ಕೋಣೆ ಜನರಿಂದ ತುಂಬಿತ್ತು. ಎಲ್ಲವನ್ನೂ ಹೇಗೆ ಎದುರಿಸಲು ನಾನು ಶಕ್ತಿಯನ್ನು ಕಂಡುಕೊಂಡೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಅದನ್ನು ನಿಭಾಯಿಸಿದೆ" ಸಾಜಲ್ ಅಲಿಯ ನಿಜವಾದ ತಾಯಿ ಕ್ಯಾನ್ಸರ್‌ನಿಂದ ನಿಧನರಾದವರು. ಆ ಸಮಯದಲ್ಲಿ ಸಾಜಲ್, ಶ್ರೀದೇವಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು.
ಈ ಕಾರಣಕ್ಕೆ ಕ್ರಿಶ್ಚಿಯನ್‌ನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ನಟಿ ನಯನತಾರಾ
'ಮಾಮ್' ಸಜಲ್ ನಟಿಸಿದ ಏಕೈಕ ಹಿಂದಿ ಚಲನಚಿತ್ರ. ಆದರೆ ಹನು ರಾಘವಪುಡಿ ನಿರ್ದೇಶನದ ಮುಂಬರುವ ಚಲನಚಿತ್ರ 'ಫೌಜಿ'ಯಲ್ಲಿ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅವರೊಂದಿಗೆ ಅಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳಿವೆ. ಪಾಕಿಸ್ತಾನದ ಪ್ರಮುಖ ನಿಯತಕಾಲಿಕ ಈ ಸುದ್ದಿಯನ್ನು ಖಚಿತಪಡಿಸಿದೆ. ಫೌಜಿ ಡ್ರಾಮಾ ಫಿಲಂ. ಇದು ಭಾರತದ ಸ್ವಾತಂತ್ರ್ಯದ ಮೊದಲು ಸಂಗ್ರಾಮದ ಹಿನ್ನೆಲೆಯಲ್ಲಿ ವಿಶಿಷ್ಟವಾದ ಪ್ರೇಮಕಥೆಯನ್ನು ಚಿತ್ರಿಸುತ್ತದೆ.
ಸಾಜಲ್ ಅಲಿ ಪಾಕ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಜುಲೈ 2024 ರ ವರದಿಯ ಪ್ರಕಾರ, ಆಕೆ ಪಾಕಿಸ್ತಾನಿ ಮನರಂಜನಾ ಉದ್ಯಮದಲ್ಲಿ (ಲಾಲಿವುಡ್) ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಶ್ರೀಮಂತ ನಟಿಯರಲ್ಲಿ ಒಬ್ಬಳು. ತನ್ನ ಸೀರಿಯಲ್ ಪಾತ್ರಗಳಿಗಾಗಿ ಅವಳು ಪ್ರತಿ ಎಪಿಸೋಡ್‌ಗೆ ಲಕ್ಷಾಂತರ ಗಳಿಸುತ್ತಾಳೆ. ಅವಳ ಆಸ್ತಿಯ ನಿವ್ವಳ ಮೌಲ್ಯ 80 ಲಕ್ಷ ಡಾಲರ್ ಇದೆಯಂತೆ.
ನಾನೀಗ ಸಿಂಗಲ್, ಮಲೈಕಾ ಹೆಸರು ಕೇಳ್ತಿದ್ದಂತೆ ಬ್ರೇಕ್ ಅಪ್ ಗುಟ್ಟು ಬಿಚ್ಚಿಟ್ಟ ಅರ್ಜುನ್ ಕಪೂರ್