ಈ ಕಾರಣಕ್ಕೆ ಕ್ರಿಶ್ಚಿಯನ್ನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ನಟಿ ನಯನತಾರಾ
ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ನಟಿ ನಯನತಾರಾ ಮುಂದೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರ ಈ ಮತಾಂತರಕ್ಕೆ ಕಾರಣವೇನು ಇಲ್ಲಿದೆ ಮಾಹಿತಿ
ನಟಿ ನಯನತಾರಾ, ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ನಯನತಾರಾ ಅವರ ಮೂಲ ಹೆಸರು ಡಯಾನಾ ಮರಿಯಂ ಕುರಿಯನ್. ಸಿನಿಮಾ ರಂಗಕ್ಕೆ ಪ್ರವೇಶಿಸಿದ ನಂತರ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು, ನಂತರ ಹಿಂದೂ ಧರ್ಮಕ್ಕೂ ಮತಾಂತರಗೊಂಡರು. ಮಾಧ್ಯಮ ವರದಿಗಳ ಪ್ರಕಾರ, 2011 ರಲ್ಲಿ ನಟಿ ನಯನತಾರಾ ಚೆನ್ನೈನಲ್ಲಿರುವ ಆರ್ಯ ಸಮಾಜದ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು, ಸ್ವಂತ ಇಚ್ಛೆಯಿಂದ ಅವರು ಮತಾಂತರಗೊಂಡರಂತೆ.
ಲೇಡಿ ಸೂಪರ್ಸ್ಟಾರ್ ನಯನತಾರಾ
ಇದರ ಬಗ್ಗೆ ಒಂದು ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ನಯನತಾರಾ, ಆ ಪ್ರಶ್ನೆಗೆ 'ಹೌದು, ನಾನು ಹಿಂದೂ, ಇದು ನನ್ನ ಸ್ವಂತ ನಿರ್ಧಾರ. ನಾನು ಸಂಪೂರ್ಣ ಪ್ರಕ್ರಿಯೆಯನ್ನು ಉತ್ಸಾಹ ಮತ್ತು ನಂಬಿಕೆಯಿಂದ ಮಾಡಿದ್ದೇನೆ' ಎಂದು ಹೇಳಿದ್ದಾರೆ. ನಟಿ ನಯನತಾರಾ ವಾಲ್ಟಾಕ್ಸ್ ರಸ್ತೆಯಲ್ಲಿರುವ ಆರ್ಯ ಸಮಾಜ ದೇವಸ್ಥಾನಕ್ಕೆ ಭೇಟಿ ನೀಡಿ, 'ಶುದ್ಧಿ ಕರ್ಮ' ಎಂಬ ವೈದಿಕ ಶುದ್ಧೀಕರಣ ವಿಧಿಯ ಎಲ್ಲಾ ಕ್ರಮಗಳನ್ನು ಭಕ್ತಿಯಿಂದ ಪಾಲಿಸಿದರು ಎಂದು ಆರ್ಯ ಸಮಾಜಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿವೆ.
ನಯನತಾರಾ, ಪ್ರಭುದೇವ
ಅದೇ ರೀತಿ, ಕೆಲವು ಮಾಹಿತಿಗಳ ಪ್ರಕಾರ, ನಯನತಾರಾ ಅವರ ಈ ನಿರ್ಧಾರದ ಹಿಂದೆ ಅವರ ಮಾಜಿ ಗೆಳೆಯ ನಟ ಪ್ರಭುದೇವ ಇದ್ದಾರೆ ಎಂದು ಹೇಳಲಾಗುತ್ತಿದೆ. ನಯನತಾರಾ ಪ್ರಭುದೇವ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಅವರನ್ನು ಮದುವೆಯಾಗುವ ಸಲುವಾಗಿಯೇ ನಟಿ ನಯನತಾರಾ, ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಲಾಗುತ್ತಿದೆ. ಆದರೆ ದುರದೃಷ್ಟವಶಾತ್, ಮದುವೆಗೆ ಮುನ್ನವೇ ಅವರ ಸಂಬಂಧ ಮುರಿದುಬಿತ್ತು. ಪ್ರಭುದೇವ ಅವರಿಂದ ಬೇರ್ಪಟ್ಟ ನಂತರವೂ, ನಯನತಾರಾ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ.
ವಿಘ್ನೇಶ್ ಶಿವನ್, ನಯನತಾರಾ
ಪ್ರಭುದೇವ ಅವರೊಂದಿಗಿನ ಬೇರ್ಪಡಿಕೆಯ ನಂತರ ವಿಘ್ನೇಶ್ ಶಿವನ್ ಜೊತೆ ಪ್ರೀತಿಯಲ್ಲಿ ಬಿದ್ದ ನಯನತಾರಾ, ಅವರನ್ನು ಸುಮಾರು 7 ವರ್ಷಗಳ ಕಾಲ ಪ್ರೀತಿಸಿ 2022 ರ ಜೂನ್ 10 ರಂದು ವಿವಾಹವಾದರು. ಮದುವೆಯಾದ 4 ತಿಂಗಳಲ್ಲಿಯೇ ಈ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾದರು. ಆ ಮಕ್ಕಳಿಗೆ ಉಯಿರ್, ಉಲಗಮ್ ಎಂದು ಹೆಸರಿಟ್ಟಿದ್ದಾರೆ ನಯನತಾರಾ. ಮಕ್ಕಳು ಹುಟ್ಟಿದ ನಂತರವೂ ಸಿನಿಮಾದಲ್ಲಿ ಬ್ಯುಸಿಯಾಗಿ ನಟಿಸುತ್ತಿದ್ದಾರೆ ನಯನತಾರಾ.