Asianet Suvarna News Asianet Suvarna News

Hum Aapke Hain Koun ಚಿತ್ರದ ಯಶಸ್ಸಿನ ಹಿಂದಿದೆ ಒಂದು ವಿಚಿತ್ರ ಸತ್ಯ!

90ರ ದಶಕದಲ್ಲಿ ಬ್ಲಾಕ್​ಬಸ್ಟರ್​ ಮೂವಿ ಎನಿಸಿದ್ದ ಹಮ್​ ಆಪ್​ ಕೆ ಹೈ ಕೌನ್​ ಚಿತ್ರ ತೋಪೆದ್ದು ಹೋಗಿತ್ತು. ಏಕಾಏಕಿ ಇದು ಬ್ಲಾಕ್​ಬಸ್ಟರ್​ ಆಗಿದ್ಹೇಗೆ?
 

Sooraj Barjatya reveals that Aditya Chopra support Hum Aapke Hain Koun when whole industry declared it disaster
Author
First Published Feb 17, 2023, 10:00 AM IST | Last Updated Feb 17, 2023, 10:00 AM IST

ಸುಮಾರು ನಾಲ್ಕೂವರೆ ಕೋಟಿ ರೂಪಾಯಿಗಳಲ್ಲಿ ತೆಗೆದ ಚಿತ್ರವೊಂದು ಬಾಕ್ಸ್​ ಆಫೀಸ್​ನಲ್ಲಿ (Box office) ಸುಮಾರು 250 ಕೋಟಿ  ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ಸುಲಭದ ಮಾತಲ್ಲ. ಅದೂ 30 ವರ್ಷಗಳ ಹಿಂದಿನ ಚಿತ್ರವೊಂದು ಇಷ್ಟೊಂದು ಸೂಪರ್​ ಹಿಟ್​ ಆಗಿ ಬ್ಲಾಕ್​ಬ್ಲಸ್ಟರ್​ (Blockbuster) ಸ್ಥಾನಕ್ಕೇರುವುದು ಎಂದರೆ ಇನ್ನೂ ಸ್ವಲ್ಪ ಕಷ್ಟವೇ. ಆದರೆ ಅಷ್ಟೊಂದು ಗಳಿಕೆ ಮಾಡಿರುವ ಚಿತ್ರವೆಂದರೆ ಹಮ್ ಆಪ್​ ಕೇ  ಹೈ ಕೌನ್. ಸಲ್ಮಾನ್​ ಖಾನ್​, ಮಾಧುರಿ ದೀಕ್ಷಿತ್​, ರೇಣುಕಾ ಶಹಾನೆ ನಟನೆಯ ಈ ಚಿತ್ರ ಬಿಡುಗಡೆಯಾಗಿ ಸುಮಾರು 30 ವರ್ಷ ಆಗುತ್ತಾ ಬಂದಿದೆ. 1994ರಲ್ಲಿ ಈ ಚಿತ್ರ ಸಿನಿ ರಂಗದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿತ್ತು. ಸಲ್ಮಾನ್​ (Salman Khan) ಮತ್ತು ಮಾಧುರಿ (Madhuri Dixit) ಜೋಡಿ ಸೂಪರ್​ಹಿಟ್​ ಆಯಿತು. ಇವರಿಬ್ಬರ ಜೊತೆ ನಟಿ ರೇಣುಕಾ ಶಹಾನೆ ಅವರ ಅದೃಷ್ಟವೂ  ಬದಲಾಯಿಸಿತು. ಚಿತ್ರವು ದಾಖಲೆಗಳ ಮೇಲೆ ದಾಖಲೆ ಬರೆದು  ಥಿಯೇಟರ್‌ಗಳಲ್ಲಿ ಹೆಚ್ಚು ಕಾಲ ಓಡಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 

ಇನ್ನೇನು ಕೆಲವೇ ತಿಂಗಳು ಕಳೆದರೆ ಈ ಚಿತ್ರ ಬಿಡುಗಡೆಯಾಗಿ 30 ವರ್ಷ ಕಳೆಯುತ್ತದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಸೂರಜ್​ ಬರ್ಜತ್ಯಾ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಿದ ಯಶ್ ರಾಜ್ (Yash Raj) ಫಿಲ್ಮ್ಸ್ ಜರ್ನಿ ಆಧಾರಿತ ದಿ ರೊಮ್ಯಾಂಟಿಕ್ಸ್‌ನಲ್ಲಿ ಸೂರಜ್ ಬರ್ಜತ್ಯಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕುತೂಹಲದ ಅಂಶವೊಂದನ್ನು ಹೇಳಿದ್ದಾರೆ. ಅದೇನೆಂದರೆ ಹಮ್​ ಆಪ್​ ಕೆ ಹೈ ಕೌನ್​ (Hum Apke Hai koun) ಚಿತ್ರ ಆರಂಭದಲ್ಲಿ ಚೆನ್ನಾಗಿ ಓಡಲೇ ಇಲ್ವಂತೆ. ಆದರೆ ನಿರ್ದೇಶಕ ಆದಿತ್ಯ ಚೋಪ್ರಾ ಅವರು ನೀಡಿದ ಒಂದೇ ಒಂದು ಸಲಹೆಯಿಂದ ಅದು ಬ್ಲಾಕ್​ಬಸ್ಟರ್​ ಆಯಿತು ಎಂದಿದ್ದಾರೆ. ಈ ಚಿತ್ರ ಚೆನ್ನಾಗಿ ಓಡಲಿಲ್ಲ ಎಂದರೆ ಜನರು ಈಗಲೂ ನಂಬುವುದಿಲ್ಲ. ಆದರೆ ನಿಜ ಏನೆಂದರೆ, ನಿಜವಾಗಿಯೂ ಈ ಚಿತ್ರ ಓಡಿಯೇ ಇರಲಿಲ್ಲ ಎನ್ನುವ ಸತ್ಯ ಕೆಲವರಿಗೆ ಮಾತ್ರ ಗೊತ್ತು ಎನ್ನುತ್ತಾರೆ ಸೂರಜ್​.

Pawan Kalyan: ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಾನಂತ ಭಯವಿತ್ತು ಎಂದ ಅಣ್ಣ ಚಿರಂಜೀವಿ!

ಅಷ್ಟಕ್ಕೂ ಈ ಪರಿ ಮ್ಯಾಜಿಕ್​ ಸಂಭವಿಸಿದ್ದು ಹೇಗೆ? ಓಡದ ಚಿತ್ರ ಒಂದೇ ಬಾರಿ ಸರ್ರನೆ ಓಡಲು ಕಾರಣವೇನು ಎಂಬ ಕಾರಣವೂ ಅಷ್ಟೇ ಕುತೂಹಲವಾದದ್ದು. 'ಮೈನೆ ಪ್ಯಾರ್​ ಕಿಯಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ  ಅಸಮಾಧಾನಗೊಂಡೆ. ನಂತರ ನಾನು  ಆದಿತ್ಯ ಚೋಪ್ರಾ ಅವರಿಂದ ಸಲಹೆ ಕೇಳಿದೆ. ಅವರು ಒಂದೇ ಒಂದು ಸಲಹೆ ಕೊಟ್ಟರು. ಅದು ಸಾಧ್ಯವೇ ಎಂದು ನನಗೆ ಎನಿಸಿಯೂ ಇರಲಿಲ್ಲ. ಆದರೆ ಆ ಕ್ಷಣದಲ್ಲಿ ಚಿತ್ರ ಓಡಲು ಏನು ಬೇಕಾದರೂ ಮಾಡಲು ಸಿದ್ಧನಿದ್ದೆ. ಅವರು ಕೊಟ್ಟ ಸಲಹೆ ಬಹಳ ಸುಲಭದ್ದಾಗಿತ್ತು. ಅದನ್ನು ಮಾಡಿದೆ. ಚಿತ್ರ ಬ್ಲಾಕ್​ಬಸ್ಟರ್​ ಆಯಿತು. 250 ಕೋಟಿ ರೂಪಾಯಿ ಆಗಿನ ಕಾಲದಲ್ಲಿಯೇ ಸಂಪಾದನೆ ಮಾಡಿತು ಎಂದಿದ್ದಾರೆ.

ಅಷ್ಟಕ್ಕೂ  ಆದಿತ್ಯ ಚೋಪ್ರಾ (Adithya Chopra) ಅವರು ಕೊಟ್ಟಿದ್ದ ಸಲಹೆ ಎಂದರೆ ಚಿತ್ರದಲ್ಲಿನ ಒಂದೋ, ಎರಡೋ ಹಾಡನ್ನು ತೆಗೆದುಹಾಕು ಎನ್ನುವುದು. ಅದರಂತೆ ಆದಿತ್ಯ ಚೋಪ್ರಾ ನಡೆದುಕೊಂಡರು. ಚಿತ್ರದ ಎರಡು ಹಾಡಿಗೆ ಕತ್ತರಿಹಾಕಿದರು. ಈ ಮೂಲಕ ಚಿತ್ರದ ರನ್​ಟೈಮ್​ ಕಡಿತಗೊಳಿಸಿದರು. ಅದೇನು ಮ್ಯಾಜಿಕ್ಕೋ ಗೊತ್ತಿಲ್ಲ. ಚಿತ್ರ ಒಂದೇ ಸಮನೆ ಏರುಗತಿಯಲ್ಲಿ ಓಡತೊಡಗಿದಂತೆ. ಅಂದಹಾಗೆ ಈ ಚಿತ್ರವು ಬಹು ತಾರಾಗಣದ ಚಿತ್ರ. ಚಿತ್ರದಲ್ಲಿ ಮೊಹ್ನಿಶ್ ಬೆಹ್ಲ್, ಅಲೋಕ್ ನಾಥ್, ರೀಮಾ ಲಾಗೂ, ಅನುಪಮ್ ಖೇರ್, ರೇಣುಕಾ ಶಹಾನೆ, ಬಿಂದು, ಲಕ್ಷ್ಮೀಕಾಂತ್ ಬೆರ್ಡೆ, ಸತೀಶ್ ಶಾ, ಹಿಮಾನಿ ಶಿವಪುರಿ, ಅಜಿತ್ ವಚನಿ ಸೇರಿದಂತೆ ಇತರ ತಾರೆಯರು ಇದ್ದಾರೆ. 

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

Latest Videos
Follow Us:
Download App:
  • android
  • ios