Pawan Kalyan: ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಾನಂತ ಭಯವಿತ್ತು ಎಂದ ಅಣ್ಣ ಚಿರಂಜೀವಿ!

'ಪವರ್ ಸ್ಟಾರ್' ಪವನ್ ಕಲ್ಯಾಣ್​ ನಟನಾಗದೇ ಹೋಗಿದ್ದರೆ ಅವರು ನಕ್ಸಲ್​ ಆಗ್ತಿದ್ರಾ? ಅಣ್ಣ ಚಿರಂಜೀವಿ ಹೇಳಿದ್ದೇನು?
 

Chiranjeevi reveals he once feared Pawan Kalyan would become a Naxal

ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ ಕೋನಿಡೇಲಾ ಕಲ್ಯಾಣ್ ಬಾಬು ಅರ್ಥಾತ್​ 'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan) ಯಾರಿಗೆ ತಾನೇ ಗೊತ್ತಿಲ್ಲ? ನಟನೆ ಜೊತೆಗೆ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯವಾಗಿಯೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ, ನಟನೆಗೆ ಬರದಿದ್ದರೆ ನಕ್ಸಲ್​ ಆಗಿಬಿಡ್ತಿದ್ರಾ? ಇದೆಂಥ ಸುದ್ದಿ ಎನ್ನುತ್ತೀರಾ? ಹೀಗಂತೆ ಹೇಳಿದ್ದು, ಯಾರ್ಯಾರೋ ಅಲ್ಲ, ಬದಲಿಗೆ ಖುದ್ದು ಅವರ ಅಣ್ಣ , ನಟ ಚಿರಂಜೀವಿಯವರೇ (Chiranjeevi) ಇದನ್ನು ಹೇಳಿದ್ದು. ಪವನ್ ಕಲ್ಯಾಣ್ ಬಗ್ಗೆ ಅಣ್ಣ ಚಿರಂಜೀವಿ ಶಾಕಿಂಗ್ ಸಂಗತಿಯನ್ನು ಹೇಳಿದ್ದಾರೆ.
 
ಪವನ್ ಕಲ್ಯಾಣ್ ಅವರ ಬಾಲ್ಯ, ಯೌವ್ವನ ಸಾಕಷ್ಟು ಅಚ್ಚರಿ ವಿಷಯಗಳನ್ನು ಹೊಂದಿದೆ. ಈಚೆಗೆ ಟಾಕ್ ಶೋವೊಂದರಲ್ಲಿ 'ಮೆಗಾ ಸ್ಟಾರ್‌' ಚಿರಂಜೀವಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮನ ಕುರಿತು ಶಾಕಿಂಗ್​ ನ್ಯೂಸ್ ಹೇಳಿದ್ದಾರೆ.  'ನನ್ನ ತಮ್ಮ ಪವನ್ ಕಲ್ಯಾಣ್ ಎಲ್ಲಿ, ನಕ್ಸಲೈಟ್ (Naxalite) ಆಗಿಬಿಡ್ತಾನೋ ಅಂತ ಭಯಪಟ್ಟಿದ್ದೆ..' ಎಂದೂ ಅವರು  ಹೇಳಿಕೊಂಡಿದ್ದಾರೆ.  ನಟನೆಯ ಜೊತೆಗೆ ಜನಸೇನಾ ಪಕ್ಷವನ್ನು ಕಟ್ಟಿ ರಾಜಕೀಯವಾಗಿ ಹೆಸರು ಮಾಡಿರೋ ಪವನ್​ ಕಲ್ಯಾಣ್​ ಕುರಿತು ಅಣ್ಣ ಹಂಚಿಕೊಂಡಿರುವ ಇಂಟರೆಸ್ಟಿಂಗ್​ (interesting) ಸುದ್ದಿಗಳಲ್ಲಿ ಇದೂ ಒಂದು. ' ಪವನ್​ ಚಿಕ್ಕ ವಯಸ್ಸಿನಲ್ಲಿ ಯಾವಾಗಲೂ ನಕಲಿ ಗನ್ ಜೊತೆಗೆ ಆಡುತ್ತಿದ್ದನು. ಅವನಿಗೆ ಗನ್​ ಎಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲಿಯೇ ಸದಾ ಮುಳುಗಿರುತ್ತಿದ್ದ. ಆತ ವರ್ತಿಸುತ್ತಿದ್ದ ರೀತಿ ನೋಡಿ, ಎಲ್ಲಿ ನಕ್ಸಲರ ಜೊತೆ ಸೇರಿ ಬಿಡ್ತಾನೋ ಎಂದು ಭಯಗೊಂಡಿದ್ದೆವು' ಎಂದು ಚಿರಂಜೀವಿ ಹೇಳಿದ್ದಾರೆ.

ಮದ್ವೆ ಮಾಡ್ಕೊಂಡ್ರೆ ಅವಕಾಶ ಕಳೆದುಕೊಳ್ಳುವೆ; ನಟಿ ಸೌಂದರ್ಯಗಿದ್ದ ಭಯ ಇದಂತೆ

ಈ ಕುರಿತು ಒಂದು ಇಂಟರೆಸ್ಟಿಂಗ್​ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. 'ಒಮ್ಮೆ ನಾನು ಸಿಂಗಪೂರ್‌ಗೆ ಹೋಗಿದ್ದೆ. ಅಲ್ಲಿಂದ ಏನ್ ತರಬೇಕು ಎಂದು ಕೇಳಿದ್ದೆ. ಪವನ್  ಸೆಮಿ ಆಟೋಮ್ಯಾಟಿಕ್  ಗನ್ ತರ್ತಿಯಾ ಇಲ್ಲಿ ನನಗೆ ಸಿಗುತ್ತಿಲ್ಲ ಎಂದು ಕೇಳಿದ್ದ. ಇದರಿಂದ ನನಗೆ ಆದ ಶಾಕ್​  ಅಷ್ಟಿಷ್ಟಲ್ಲ' ಎಂದಿದ್ದಾರೆ. ಒಂದು ದಿನ ಆತ  ಡಮ್ಮಿ ಗನ್ ಇಟ್ಟುಕೊಂಡು  ಹೋಗುತ್ತಿದ್ದ.  ರೈಲ್ವೇ ಸ್ಟೇಷನ್‌ನಲ್ಲಿ (railway station) ಆತನನ್ನು ತಡೆದು ನಿಲ್ಲಿಸಲಾಗಿತ್ತು. ಆಮೇಲೆ ಅದು  ಡಮ್ಮಿ ಗನ್ (Dummy gun) ಎಂದು ತಿಳಿದ ಮೇಲೆ ಕಳುಹಿಸಿದ್ದರು. ಹೀಗೆ ಗನ್​ ಹುಚ್ಚು ನೋಡಿ ನಕ್ಸಲೈಟ್​ಗೆ ಸೇರುತ್ತಾನೆ ಎಂದು ಹೆದರಿಕೊಂಡಿದ್ದೆವು' ಎಂದಿದ್ದಾರೆ.  ಪವನ್ ಕಲ್ಯಾಣ್ ಚಿರಂಜೀವಿ ಮಕ್ಕಳಾದ ಸುಷ್ಮಿತಾ (Sushmitha) ಮತ್ತು ರಾಮ್ ಚರಣ್ ಮಧ್ಯೆ ಜಗಳ ತಂದು ಬಿಡುತ್ತಿದ್ದ. ಅವರು ಜಗಳ ಮಾಡುವಾಗ ಎಂಜಾಯ್ ಮಾಡುತ್ತಾ ಇದ್ದ. ಅವನ  ತುಂಟಾಟ ಅಷ್ಟಿಷ್ಟಲ್ಲ ಎಂದು ಬಾಲ್ಯದ ನೆನಪು ಮಾಡಿಕೊಂಡಿದ್ದಾರೆ.

'ಪವನ್‌ ಕಲ್ಯಾಣ್‌ ಮುಂದಿನ ದಿನಗಳಲ್ಲಿ ಒಬ್ಬ ದೊಡ್ಡ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ. ನೋವಿಗೆ ಸ್ಪಂದಿಸುವ ಆತನ ಗುಣ, ಏನಾದರೂ ಒಳ್ಳೆಯದು ಮಾಡಬೇಕೆಂಬ ಆತನ ಹಂಬಲವನ್ನು ನಾನು ನೋಡಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ಅದು ಆತನಲ್ಲಿದೆ. ಅವನಿಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅವರೆಲ್ಲಾ ಕೇವಲ ಫ್ಯಾನ್ಸ್ ಅಲ್ಲ, ಭಕ್ತರು. ಎಲ್ಲ ನಟರಿಗೂ ಫ್ಯಾನ್ಸ್ ಇದ್ದಾರೆ. ಆದರೆ ಪವನ್‌ ಕಲ್ಯಾಣ್‌ಗೆ ಭಕ್ತರಿದ್ದಾರೆ. ಪವನ್ ನಟನಾಗುವುದಕ್ಕಿಂತ ಉತ್ತಮ ರಾಜಕೀಯ ನಾಯಕ ಆಗುತ್ತಾರೆ ಎಂದು ಚಿರಂಜೀವಿ ಹೇಳಿದ್ದಾರೆ.

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ
 

Latest Videos
Follow Us:
Download App:
  • android
  • ios