No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

ಸಿನಿಮಾಗಳಲ್ಲಿ ಕಿಸ್ಸಿಂಗ್​ ಸನ್ನಿವೇಶವನ್ನು ಮಾಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ ಕೆಲವು ನಟ, ನಟಿಯರು. ಅವರ್ಯಾರು ಬಲ್ಲಿರಾ?
 

Top celebs who follow a No Kissing On screen policy

ಚುಂಬನ, ಪ್ರಯಣ, ಕಿಸ್ಸಿಂಗು, ರೊಮಾನ್ಸಿಂಗು... (Romance) ಇವೆಲ್ಲವೂ ಸಿನಿಮಾದಲ್ಲಿ ಮಾಮೂಲು. ಇದು ಇಂದು ನಿನ್ನೆಯ ವಿಷಯವಲ್ಲ... ಸಿನಿಮಾ ಆರಂಭವಾದಾಗಿನಿಂದಲೂ ಇವೆಲ್ಲಾ ಇದ್ದದ್ದೇ. ಆದರೆ ಮಿತಿಗಳು ಮಾತ್ರ ಕಾಲಕ್ರಮೇಣ ಬದಲಾಗುತ್ತಾ ಬಂದಿವೆಯಷ್ಟೇ. ಆದರೆ ಇತ್ತೀಚೆಗೆ ನಟಿ ರವೀನಾ ಟಂಡನ್​ ತಾವು ಅನುಭವಿಸಿದ್ದ ಕೆಲವು ಕಹಿ ಘಟನೆಗಳ ಬಗ್ಗೆ ವಿವರಿಸಿದ್ದ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಕಿಸ್ಸಿಂಗ್​ ವಿಚಾರ ಮುನ್ನೆಲೆಗೆ ಬಂದಿದೆ. ನಾನು ಸ್ವಿಮ್ ಸೂಟ್ ಧರಿಸುತ್ತಿರಲಿಲ್ಲ, ನಾನು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಅತ್ಯಾಚಾರದ ದೃಶ್ಯ, ಬಟ್ಟೆ ಹರಿದ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ಏಕೈಕ ನಟಿ ನಾನು ಎಂದು ಅವರು ಹೇಳಿಕೊಂಡಿದ್ದು, ಇದೇ ಕಾರಣಕ್ಕೆ ನನ್ನನ್ನು ದುರಂಕಾರಿ ಎನ್ನುತ್ತಿದ್ದರು ಎಂದೂ ತಿಳಿಸಿದ್ದರು. ಆದರೆ ಚುಂಬನದ (kissing) ವಿಷಯಕ್ಕೆ ಬಂದರೆ ನಟರೂ ಸೇರಿದಂತೆ ಕೆಲವು ನಟಿಯರು ಇದರಿಂದ ದೂರವೇ ಉಳಿದಿದ್ದಾರೆ. ಅರ್ಥಾತ್​ ಸಿನಿಮಾದಲ್ಲಿ ದೀರ್ಘ ಚುಂಬನ ದೃಶ್ಯವನ್ನೆಲ್ಲಾ ಮಾಡುವುದಿಲ್ಲ ಎಂದು ತಿಳಿದಿರುವುದೂ ಮಾತ್ರವಲ್ಲದೇ ಇದುವರೆಗೆ ಅಂಥ ದೃಶ್ಯಗಳಲ್ಲಿ ನೇರವಾಗಿ ಕಾಣಿಸಿಕೊಂಡಿಲ್ಲ. ಅವರು ಯಾರು ಯಾರು ಇರಬಹುದು ಎಂಬ ಕುತೂಹಲ ಇರಬೇಕಲ್ಲವೆ? 

ಸಲ್ಮಾನ್​ ಖಾನ್​ (Salman Khan)
ತುಂಬಾ ಕುತೂಹಲದ ಸಂಗತಿಯೆಂದರೆ ಬಾಲಿವುಡ್​ನ ಎವರ್​ಗ್ರೀನ್​ ಬ್ಯಾಚ್ಯುಲರ್​ ಎಂದು ಪ್ರಸಿದ್ಧಿ ಪಡೆದಿರುವ, ಇದಾಗಲೇ ಹಲವಾರು ಮಂದಿಯ ಜೊತೆ ಡೇಟಿಂಗ್​ ಮಾಡಿ ವಿವಾದಕ್ಕೂ ಕಾರಣರಾಗಿರುವ ನಟ ಸಲ್ಮಾನ್​ ಖಾನ್​ ಕಿಸ್ಸಿಂಗ್​ ದೃಶ್ಯವನ್ನು ತೆರೆಯ ಮೇಲೆ ಇನ್ನೂ ಒಪ್ಪಿಕೊಂಡಿಲ್ಲವಂತೆ!  ಡ್ರಾಮಾ, ಆ್ಯಕ್ಷನ್, ಕಾಮಿಡಿ ಸೇರಿದಂತೆ ಎಲ್ಲ ದೃಶ್ಯಗಳನ್ನೂ ಮಾಡುವ ಸಲ್ಲುಭಾಯಿ,  ತೆರೆಯ ಮೇಲೆ ಮುತ್ತು ಕೊಡುವುದು  ಪಟ್ಟಿಯಲ್ಲಿಯೇ ಇಲ್ಲ. ಅವರು ಈ ನಿಯಮವನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.  

ರಾಮ್ ಚರಣ್​ಗೆ ಇಷ್ಟವಿಲ್ಲದಿದ್ರೂ ಲಿಪ್​ಲಾಕ್​ ಮಾಡಿದ್ರಾ ಸಮಂತಾ?

ತಮನ್ನಾ ಭಾಟಿಯಾ, ಸೋನಾಕ್ಷಿ ಸಿನ್ಹಾ (Tamanna Bhatia, Sonakshi Sinha)
ಬಾಲಿವುಡ್‌ನಲ್ಲಿ ನೆಲೆಸಿರುವ ಸೌತ್ ಸ್ಟಾರ್ ತಮನ್ನಾ ಭಾಟಿಯಾ ಕೂಡ ನೋ ಕಿಸ್ಸಿಂಗ್​  ನಿಯಮವನ್ನು ಅನುಸರಿಸುತ್ತಿದ್ದಾರೆ.  ತೆರೆಯ ಮೇಲೆ ಮುತ್ತು ಕೊಡಲು ಮತ್ತು ಚಿತ್ರಗಳಿಗೆ ಬಿಕಿನಿ ತೊಡಲು ನಾಚಿಕೆಪಡುತ್ತೇನೆ ಎನ್ನುತ್ತಾರೆ ಅವರು. ಸಲ್ಮಾನ್ ಖಾನ್ ಅವರ ದಬಾಂಗ್‌ನೊಂದಿಗೆ ಪದಾರ್ಪಣೆ ಮಾಡಿದ ನಟಿ ಸೋನಾಕ್ಷಿ ಸಿನ್ಹಾ ಸಹ ಪರದೆಯ ಮೇಲೆ ಮುತ್ತಿನ ದೃಶ್ಯವನ್ನು ಒಪ್ಪಿಕೊಳ್ಳುವುದಿಲ್ಲ. mensxp.com ವರದಿ ಮಾಡಿದಂತೆ ಪರದೆಯ ಮೇಲೆ ಚುಂಬಿಸಬಾರದು ಎಂಬ ನಿಯಮವನ್ನು ಇವರು ಇದುವರೆಗೂ ಅನುಸರಿಸುತ್ತಿದ್ದಾರೆ.  ತಮ್ಮ ಯಾವುದೇ ಚಿತ್ರಗಳಲ್ಲಿ ಲಿಪ್ ಲಾಕ್ (Liplock) ದೃಶ್ಯಗಳನ್ನು ಮಾಡಿಲ್ಲ.

ರಿತೀಶ್ ದೇಶಮುಖ್ , ಜನ್ನತ್ ಜುಬೇರ್, ಬಾಬಿ ಡಿಯೋಲ್ (Ritesh Deshmukh, Jannath Juber)
ಕಿರುತೆರೆ ನಟಿ ಜನ್ನತ್ ಜುಬೇರ್ ಕೂಡ ತೆರೆಯ ಮೇಲೆ ಕಿಸ್ ಮಾಡಲು ನಿರಾಕರಿಸಿದ್ದಾರೆ. ವರದಿಯ ಪ್ರಕಾರ, ಅವರು  ಟಿವಿ ಶೋಗಾಗಿ ಚುಂಬನದ ದೃಶ್ಯ ಮಾಡಬೇಕಿತ್ತು. ಆದರೆ ಆಕೆಯ ಪಾಲಕರು ಅದನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಜನ್ನತ್​ ಕೂಡ ಮುತ್ತಿನ ಪಾತ್ರವನ್ನು ಒಪ್ಪಿಕೊಳ್ಳುತ್ತಿಲ್ಲ. ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದರಲ್ಲಿ ನಂಬಿಕೆಯಿಲ್ಲದವರ ಪೈಕಿ ನಟ ರಿತೇಶ್ ದೇಶಮುಖ್ ಕೂಡ ಸೇರಿದ್ದಾರೆ. ಅವರು ಜೇನ್ ಕಹಾ ಸೆ ಆಯಿ ಹೈ ದೃಶ್ಯದಲ್ಲಿ ಬಾಬಿ ಡಿಯೋಲ್‌ ಜೊತೆ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಎಷ್ಟೇ ಹೇಳಿದರೂ ಅದನ್ನು ಅವರು  ನಿರಾಕರಿಸಿದರು. ಅದೇ ಇನ್ನೊಂದೆಡೆ  ಬಾಬಿ ಡಿಯೋಲ್ ಕೂಡ ಈ  ನಿಯಮವನ್ನು ಪಾಲನೆ ಮಾಡುತ್ತಿದ್ದಾರೆ. ಪರದೆಯ ಮೇಲೆ ನೋ ಕಿಸ್ಸಿಂಗ್​ ನೀತಿಯನ್ನು ಅವರು ಅನುಸರಿಸುತ್ತಿದ್ದಾರೆ.

Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!
 

Latest Videos
Follow Us:
Download App:
  • android
  • ios