ಕಿರಿಯ ಮಗ ಅಬ್ರಾಮ್‌ ಹೆಸರಿನಲ್ಲಿ ರಾಮ್‌ಗೆ ಯಾಕೆ ಒತ್ತು ಕೊಡಲಾಗಿದೆ ಎಂಬ ಅಭಿಮಾನಿಯ ಪ್ರಶ್ನೆಗೆ ನಟ ಶಾರುಖ್‌ ಖಾನ್‌ ಹೇಳಿದ್ದೇನು?  

ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಸಾರ್ವಕಾಲಿಕ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು ಮತ್ತು ಎಲ್ಲರಿಗೂ ತಿಳಿದಿರುವಂತೆ ಲವ್ ಬರ್ಡ್ಸ್ ಮೂರು ಮಕ್ಕಳ ಹೆಮ್ಮೆಯ ಪೋಷಕರು. ಅವರ ಹಿರಿಯ ಮಗ ಆರ್ಯನ್ ಖಾನ್ 1997 ರಲ್ಲಿ ಜನಿಸಿದರೆ, ಮಗಳು ಸುಹಾನಾ ಖಾನ್ 2000 ರಲ್ಲಿ ಜನಿಸಿದರು. ಬಾಲಿವುಡ್ ಕಿಂಗ್ ಖಾನ್ ಅವರು ಮತ್ತು ಅವರ ಪತ್ನಿ ಮೂರನೇ ಮಗುವನ್ನು ಹೊಂದಲಿದ್ದಾರೆ ಎಂದಾಗ ಇಡೀ ಬಾಲಿವುಡ್‌ ಶಾಕ್‌ ಆಗಿತ್ತು. ಇದಕ್ಕೆ ಕಾರಣ, ಇಬ್ಬರು ಸ್ವಂತ ಮಕ್ಕಳು ಇರುವಾಗಲೂ ಮೂರನೆಯ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಜೋಡಿ ಪಡೆದುಕೊಂಡಿತು. 2013 ರಲ್ಲಿ ತಮ್ಮ ಮೂರನೇ ಮಗುವನ್ನು ಸ್ವಾಗತಿಸಿದರು. ಆತನಿಗೆ ಅಬ್ರಾಮ್‌ ಎಂದು ಹೆಸರು ಇಡಲಾಗಿದೆ.

ಈಗ ಅಬ್ರಾಮ್‌ಗೆ 11 ವರ್ಷ ವಯಸ್ಸು. ಕುತೂಹಲದ ವಿಷಯ ಏನೆಂದರೆ ಇಂಗ್ಲಿಷ್‌ನಲ್ಲಿ ಅಬ್ರಾಮ್ ಹೆಸರನ್ನು AbRam ಎಂದು ಬರೆಯಲಾಗುತ್ತದೆ. R ಅಕ್ಷರವನ್ನು ಕ್ಯಾಪಿಟಲ್‌ ಮಾಡುವ ಮೂಲಕ ರಾಮ್‌ಗೆ ಒತ್ತು ನೀಡಲಾಗಿದೆ. ಈ ಬಗ್ಗೆ ಅಭಿಮಾನಿಯೊಬ್ಬರು ಈ ಹಿಂದೆ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಶಾರುಖ್‌ ಖಾನ್‌ ನೀಡಿರುವ ಉತ್ತರ ಈಗ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಮೂರನೆಯ ಮಗು ಬೇಕು ಎನ್ನುವುದು ಗೌರಿಯ ಆಸೆಯಾಗಿತ್ತು. ಅದಕ್ಕಾಗಿಯೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಾಗಿದೆ ಎಂದು ಶಾರುಖ್‌ ಈ ಹಿಂದೆ ಹೇಳಿದ್ದರು.

ನಸುಕಿನ 3 ಗಂಟೆಗೆ ಗೆಳೆಯರ ಜೊತೆ.... ಮಿಡ್​ನೈಟ್​ ಸೀಕ್ರೇಟ್​ ಹೇಳಿದ ನಟಿ ಶ್ರುತಿ ಹಾಸನ್​!

ಇದೀಗ ಅಬ್ರಾಮ್‌ನಲ್ಲಿ ಆರ್‌ ಕ್ಯಾಪಿಟಲ್‌ ಯಾಕೆ ಎನ್ನುವ ಪ್ರಶ್ನೆಗೆ ಮೊದಲಿಗೆ ಹಾಸ್ಯದ ರೂಪದಲ್ಲಿ ಶಾರುಖ್‌ ಉತ್ತರ ಕೊಟ್ಟಿದ್ದಾರೆ. ಇವರ ಅಭಿಮಾನಿಯೊಬ್ಬ ಇದೊಂದು ರೀತಿಯಲ್ಲಿ ಹುಚ್ಚು ಪ್ರಶ್ನೆ ಎನ್ನುವುದು ನನಗೆ ಗೊತ್ತು, ಆದರೂ ಕೇಳುತ್ತಿದ್ದೇನೆ ಅಬ್ರಾಮ್‌ ಸ್ಪೆಲ್ಲಿಂಗ್‌ನಲ್ಲಿ ಆರ್‌ ಯಾಕೆ ಕ್ಯಾಪಿಟಲ್‌ ಎಂದು ಪ್ರಶ್ನಿಸಿದ್ದರು. ಆರಂಭದಲ್ಲಿ ಅದಕ್ಕೆ ಹಾಸ್ಯದ ರೂಪದಲ್ಲಿಯೇ ಉತ್ತರ ಕೊಟ್ಟ ಶಾರುಖ್‌, Rhythm ಶಬ್ದದ ಸ್ಪೆಲ್ಲಿಂಗೇ ಬೇರೆ ಉಚ್ಚಾರಣೆಯೇ ಬೇರೆ ಅಲ್ವಾ, ನನ್ನ ಮಗನ ಹೆಸರು ಕೂಡ ಅದೇ ಎಂದು ಹಾಸ್ಯದ ರೂಪದಲ್ಲಿ ಹೇಳಿದರು.

ಕೊನೆಗೆ ಈ ಹೆಸರಿನ ಸೀಕ್ರೇಟ್‌ ಬಿಚ್ಚಿಟ್ಟ ನಟ, ಆತನ ಹೆಸರನ್ನು ಪ್ರವಾದಿ ಇಬ್ರಾಹಿಂ ಪ್ರೇರಣೆಯಿಂದ ಬಂದಿದೆ. ಇದೊಂದು ರೀತಿಯಲ್ಲಿ ಜಾತ್ಯತೀತ ಹೆಸರು ಎಂದು ನಾನು ಇಷ್ಟಪಟ್ಟೆ. ನಿಮಗೆ ಗೊತ್ತಿರುವಂತೆ ನಮ್ಮದು ಹಿಂದೂ-ಮುಸ್ಲಿಂ ಕುಟುಂಬ. ಆದ್ದರಿಂದ ನನ್ನ ಮಕ್ಕಳು ಹೆಸರಿನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ಮಗನ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಎರಡೂ ಇದೆ. ಹಿಂದೂ ದೇವರಾದ ರಾಮನ ಹೆಸರು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದಿದ್ದಾರೆ. ಈ ಮಾತನ್ನು ಕೇಳಿ ಅಭಿಮಾನಿಗಳು ಸಂತಸದಿಂದ ಕುಣಿದಾಡಿದ್ದಾರೆ. 

'ಹಾಳಾಗೋದೆ’ ಕೇಳಿ ಚಂದನ್‌ ಶೆಟ್ಟಿಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ

Scroll to load tweet…