'ಹಾಳಾಗೋದೆ’ ಕೇಳಿ ಚಂದನ್‌ ಶೆಟ್ಟಿಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ

ಗಾಯಕ ಚಂದನ್‌ ಶೆಟ್ಟಿಯವರು ನಟ ಪುನೀತ್‌ ರಾಜ್‌ಕುಮಾರ್‌ ಜೊತೆಗಿನ ಬಾಂಧವ್ಯದ ಕುರಿತು ಹೇಳಿದ್ದೇನು? 
 

singer Chandan Shetty say about his relationship with actor Puneeth Rajkumar and his behaviour suc

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಎರಡೂವರೆ ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಇದೀಗ ಗಾಯಕ ಚಂದನ್‌ ಶೆಟ್ಟಿಯವರು ಅಪ್ಪು ಸರ್‌ ಅವರನ್ನು ನೆನಪಿಸಿಕೊಂಡಿದ್ದಾರೆ.

ನಿರೂಪಕಿ ರ್‍ಯಾಪಿಡ್‌ ರಶ್ಮಿ ಅವರ ಜೊತೆಗಿನ ಸಂದರ್ಶನದಲ್ಲಿ ಚಂದನ್‌ ಶೆಟ್ಟಿಯವರು ಹಲವಾರು ವಿಷಯಗಳನ್ನು ಹೇಳಿಕೊಂಡಿದ್ದಾರೆ. ತಮ್ಮ ಲೈಫ್‌ ಜರ್ನಿಯ ಕುರಿತೂ ಮಾತನಾಡಿದ್ದಾರೆ. ಬಾಲ್ಯ, ಬಡತನದ ದಿನ, ಬೆಳೆದು ಬಂದ ರೀತಿ, ಅಪ್ಪನ ಬೈಕ್‌ ತೆಗೆದುಕೊಂಡು ಓಡಿಸಿದ್ದ ದಿನ ಸೇರಿದಂತೆ ಬಿಗ್‌ಬಾಸ್‌ನಿಂದ ಬದಲಾದ ಭಾಗ್ಯ, ಮದುವೆ ಇತ್ಯಾದಿಗಳ ಕುರಿತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪುನೀತ್‌ ರಾಜ್‌ಕುಮಾರ್‌ ಕುರಿತೂ ಮಾತನಾಡಿದ್ದಾರೆ.

ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್‌... ಚಂದನ್‌ ಶೆಟ್ಟಿ ಮನದಾಳದ ಮಾತು...

ರಶ್ಮಿ ಅವರು ಪುನೀತ್‌ ಮತ್ತು ಚಂದನ್‌ ಶೆಟ್ಟಿಯವರ ಬಾಂಧವ್ಯದ ಕುರಿತು ಕೇಳಿದ ಪ್ರಶ್ನೆಗೆ ಚಂದನ್‌ ಶೆಟ್ಟಿ ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡರು. ’ಹಾಳಾಗೋದೆ ಹಾಡನ್ನು ಅಪ್ಪು ಸರ್‌ ಕೇಳಿದರು. ಅವರನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಅದನ್ನು ಅಪ್ಪು ಸರ್‌ಗೆ ಕೇಳಿಸಿಕೊಂಡಿದ್ದರಂತೆ. ನಾನು ಅವರ ಮನೆಗೆ ಹೋಗಿರುವ ವಿಷಯ ತಿಳಿಯುತ್ತಲೇ ಖುದ್ದು ಅಪ್ಪು ಅವರೇ ಬಂದು ಮಾತನಾಡಿಸಿದರು. ಬಡ್ಡಿಮಗ ನನ್ನನ್ನು ಭೇಟಿಯಾಗದೇ ಹೋಗುತ್ತಿದ್ದಿಯಾ ಎಂದು ತಮಾಷೆ ಮಾಡಿದರು. ತಾವೇ ಮೊಬೈಲ್‌ನಿಂದ ಇಬ್ಬರ ಫೋಟೋ ಕ್ಲಿಕ್ಕಿಸಿಕೊಂಡರು’ ಎನ್ನುತ್ತ ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡತನದ ಕುರಿತು ಮಾತನಾಡಿದ್ದಾರೆ. 

ಕಳೆದ ವಾರ ಸ್ಯಾಂಡಲ್‌ವುಡ್‌ನಲ್ಲಿ ಬರಸಿಡಿಲು ಬಡಿದ ವಿಷಯ ಎಂದರೆ ನಟಿ ನಿವೇದಿತಾ ಗೌಡ ಮತ್ತು ಗಾಯಕ ಚಂದನ್‌ ಶೆಟ್ಟಿ ಡಿವೋರ್ಸ್ ಪ್ರಕರಣ. ಇಬ್ಬರೂ ಕೋರ್ಟ್‌ನಲ್ಲಿ ಕಾಣಿಸಿಕೊಂಡು ಶಾಕ್‌ ಮೂಡಿಸಿದ್ದರು. ಇವರು ವಿಚ್ಛೇದನ ಪಡೆದಿರುವುದು ನಿಜವೋ ಹೌದೋ ಅಲ್ಲವೋ ಎಂದು ಅಭಿಮಾನಿಗಳು ಇಂಟರ್‌ನೆಟ್‌ನಲ್ಲಿ ತಡಕಾಡುವ ಹೊತ್ತಿನಲ್ಲಿಯೇ ಒಂದೇ ದಿನದಲ್ಲಿ ಡಿವೋರ್ಸ್ ಕೂಡ ಆಗಿಹೋಗಿತ್ತು. ಇವರು ವಿಚ್ಛೇದನ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಥಹರೇವಾರಿ ಕಾರಣಗಳನ್ನು ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಕೊನೆಗೆ ಅವೆಲ್ಲವೂ ಸುಳ್ಳು ಎನ್ನುವ ಮೂಲಕ ಡಿವೋರ್ಸ್ ಬಳಿಕವೂ ಜೋಡಿ ಒಟ್ಟಾಗಿ ಬಂದು ಪತ್ರಿಕಾಗೋಷ್ಠಿ ನಡೆಸಿತ್ತು. ಅದಾದ ಬಳಿಕ ಇಬ್ಬರೂ ಪ್ರತ್ಯೇಕವಾಗಿ ತಮ್ಮ ಲೈಫ್‌ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಚಂದನ್‌ ಶೆಟ್ಟಿಯರು ಈ ಸಂದರ್ಶನದಲ್ಲಿ ಮದುವೆಯ ಕುರಿತೂ ಹೇಳಿಕೊಂಡಿದ್ದಾರೆ. 

ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್‌ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?

Latest Videos
Follow Us:
Download App:
  • android
  • ios