ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಪುತ್ರ ವಿಹಾನ್ ರಾಜ್ ಕುಂದ್ರ ಬ್ಯುಸಿನೆನ್ ಪ್ರಾರಂಭಿಸಿದ್ದಾರೆ. 10ನೇ ವಯಸ್ಸಿನಲ್ಲೇ ವಿಹಾನ್ ವ್ಯವಹಾರಕ್ಕೆ ಇಳಿದಿರುವುದು ಬಾಲಿವುಡ್ ಮಂದಿಯ ಅಚ್ಚರಿಗೆ ಕಾರಣವಾಗಿದೆ.
ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಪುತ್ರ ವಿಹಾನ್ ರಾಜ್ ಕುಂದ್ರ ಬ್ಯುಸಿನೆನ್ ಪ್ರಾರಂಭಿಸಿದ್ದಾರೆ. 10ನೇ ವಯಸ್ಸಿನಲ್ಲೇ ವಿಹಾನ್ ವ್ಯವಹಾರಕ್ಕೆ ಇಳಿದಿರುವುದು ಬಾಲಿವುಡ್ ಮಂದಿಯ ಅಚ್ಚರಿಗೆ ಕಾರಣವಾಗಿದೆ. ಸ್ಟಾರ್ ಕಿಡ್ ಅಂದ್ಮೇಲೆ ಆರಾಮಾಗಿ ಸುತ್ತಾಡುತ್ತಾ, ತಂದೆ-ತಾಯಿ ಮಾಡಿದ ಹಣವನ್ನು ಖರ್ಚು ಮಾಡುತ್ತಾ ಎಂಜಾಯ್ ಮಾಡುವರೇ ಜಾಸ್ತಿ. ಹೀಗಿರುವಾಗ ಚಿಕ್ಕ ಮಯಸ್ಸಿನಲ್ಲೇ ವಿಹಾನ್ ಬ್ಯುಸಿನೆಸ್‌ಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ. ಮಗನ ಬ್ಯುಸಿನೆಸ್ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದರು. ಅಂದಹಾಗೆ ವಿಹಾನ್ ಸ್ನೇಕರ್ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ. 'ವಿಆರ್ ಕಿಕ್ಸ್' ಹೆಸರಿನಲ್ಲಿ ಶೂ ಬ್ಯುಸಿನೆಸ್ ಆರಂಭಿಸಿದ್ದಾರೆ. ತಾಯಿಗಾಗಿ ಕಸ್ಟಮೈಸ್ ಮಾಡಿದ ಸ್ನೀಕರ್ ಅನ್ನು ತನ್ನ ತಾಯಿಗೆ ನೀಡಿದ್ದಾರೆ. ಟೈಗರ್ ಚಿತ್ರ ವಿರುವ ಶೋಗಳು ಆಕರ್ಷವಾಗಿವೆ. ಅಂದಹಾಗೆ ಇದರ ಬೆಲೆ ಕೂಡ ದುಬಾರಿಯಾಗಿದ್ದು 4999ರಿಂದನೇ ಪ್ರಾರಂಭವಾಗಲಿದೆ.
ಮಗನ ಬ್ಯುಸಿನೆಸ್ ಬಗ್ಗೆ ಶಿಲ್ಪಾ ಶೆಟ್ಟಿ ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ನನ್ನ ಮಗ ವಿಹಾನ್ ರಾಜ್‌ನ ಮೊದಲ ಬ್ಯುಸಿನೆಸ್. ವಿಆರ್ ಕಿಕ್ಸ್ ಕಸ್ಟಮೈಸ್ ಸ್ನೇಕರ್ ಮಾಡುವುದು. ಚಿಕ್ಕ ಮಕ್ಕಳ ದೊಡ್ಡ ಕನಸುಗಳನ್ನು ಯಾವಾಗಲೂ ಪ್ರೋತ್ಸಾಹಿಸಬೇಕು. ಇದರ ಐಡಿಯಾ, ಕಾನ್ಸೆಪ್ಟ್, ಡಿಸೈನ್ ಮತ್ತು ಈ ವಿಡಿಯೋದ ಐಡಿಯಾ ಎಲ್ಲವೂ ಅವನದ್ದೇ. ಉದ್ಯಮಿ ಮತ್ತು ನಿರ್ದೇಶಕ ಅಮೇಜಿಂಗ್. ಇಷ್ಟು ಪುಟ್ಟ ವಯಸ್ಸಿನಲ್ಲಿ ಬಂದ ಆದಾಯದ ಸ್ವಲ್ಪ ಹಣವನ್ನು ಚಾರಿಟಿಗೆ ದಾನ ಮಾಡುವುದಾಗಿ ಭರವಸೆ ನೀಡಿದ್ದಾನೆ. ಅವನಿಗೆ ಕೇವಲ 10 ವರ್ಷ. ಅಮ್ಮನಿಗೆ ತುಂಬಾ ಅಚ್ಚರಿಯಾಗಿದೆ. ಹೆಮ್ಮೆಯ ತಾಯಿ. ಒಳ್ಳೆಯದಾಗಲಿ ಮಗನೆ' ಎಂದು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಪುತ್ರನ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಅಭಿಮಾನಿಗಳು ಮತ್ತು ಬಾಲಿವುಡ್ ಸೆಲೆಟ್ರಿಗಳು ಸಹ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ನಿಟ, ನಿರ್ದೇಶಕಿ ಫರ್ರಾ ಖಾನ್ ಕಾಮೆಂಟ್ ಮಾಡಿ ಕಾನ್ಫಿಡೆಂಟ್ ಎಂದು ಹೇಳಿ ಇಮೋಜಿ ಹಾಕಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಸಹೋದರಿ ಕೂಡ ಕಾಮೆಂಟ್ ಮಾಡಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಮುಖ ಮುಚ್ಕೊಂಡೇ ಮನೆಗೆ ಗಣೇಶನ ತಂದ ರಾಜ್ ಕುಂದ್ರ; ಗಣಪನ ಬರಮಾಡಿಕೊಂಡ ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ ನವೆಂಬರ್ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಜೊತೆ ಹಸೆಮಣಎ ಏರಿದರು. 2012 ರಲ್ಲಿ ತಮ್ಮ ಮೊದಲ ಮಗು ವಿಹಾನ್ ಅವರನ್ನು ಸ್ವಾಗತಿಸಿದರು. ನಂತರ, ಅವರು ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ಪಡೆದರು. ಶಿಲ್ಪಾ ಆಗಾಗ ತನ್ನ ಮಕ್ಕಳೊಂದಿಗೆ ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡುತ್ತಿರುತ್ತಾರೆ. ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.
ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ; ವೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ನಟಿ
ಇನ್ನು ಶಿಲ್ಪಾ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೇ ರೋಹಿತ್ ಶೆಟ್ಟಿ ಅವರ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಸಿದ್ದಾರ್ಥ್ ಮಲ್ಹೋತ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಒಟಿಟಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ವೆಬ್ ಸೀರಿಸ್ ಚಿತ್ರೀಕರಣ ವೇಳೆ ಶಿಲ್ಪಾ ಶೆಟ್ಟಿಕಾಲಿಗೆ ಏಟು ಮಾಡಿಕೊಂಡು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
