ಮುಖ ಮುಚ್ಕೊಂಡೇ ಮನೆಗೆ ಗಣೇಶನ ತಂದ ರಾಜ್ ಕುಂದ್ರ; ಗಣಪನ ಬರಮಾಡಿಕೊಂಡ ಶಿಲ್ಪಾ ಶೆಟ್ಟಿ
ಹಬ್ಬಗಳ ಆಚರಣೆ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಏನು ಹೊರತಾಗಿಲ್ಲ. ಎಲ್ಲಾ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಗಣಪತಿ ಹಬ್ಬ ಅಂದರೆ ಶಿಲ್ಪಾ ಕುಟುಂಬಕ್ಕೆ ತುಂಬಾ ಸ್ಪೆಷಲ್.
ಬಾಲಿವುಡ್ ಸೆಲೆಬ್ರಿಟಿಗಳು ಧರ್ಮ, ಜಾತಿ ಭೇದವಿಲ್ಲದೇ ಹಬ್ಬವನ್ನು ಸಂಭ್ರಮಿಸುತ್ತಾರೆ. ಬಾಲಿವುಡ್ ಖಾನ್‌ಗಳು ಅನೇಕ ಹಿಂದೂ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಗಣೇಶ ಹಬ್ಬವನ್ನು ಮತ್ತಷ್ಟು ಅದ್ದೂರಿಯಾಗಿ ಸಂಭ್ರಮಿಸುತ್ತಾರೆ.
ಹಬ್ಬಗಳ ಆಚರಣೆ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಏನು ಹೊರತಾಗಿಲ್ಲ. ಎಲ್ಲಾ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಗಣಪತಿ ಹಬ್ಬ ಅಂದರೆ ಶಿಲ್ಪಾ ಕುಟುಂಬಕ್ಕೆ ತುಂಬಾ ಸ್ಪೆಷಲ್. ಗಣಪನನ್ನು ಮನೆಗೆ ತಂದು ಅದ್ದೂರಿಯಾಗಿ ಹಬ್ಬ ಮಾಡುತ್ತಾರೆ.
ಇನ್ನೇನು ಗಣೇಶ ಹಬ್ಬ ಸಮೀಪಿಸುತ್ತಿದೆ. ಈಗಾಗಲೇ ಶಿಲ್ಪಾ ಶೆಟ್ಟಿ ಮನೆಗೆ ಗಣಪನ ಆಗಮವಾಗಿದೆ. ಹೌದು, ಪ್ರತಿ ವರ್ಷದಂತೆಈ ವರ್ಷವೂ ಶಿಲ್ಪಾ ಶೆಟ್ಟಿ ಮನೆಗೆ ಗಣಪನ ಮೂರ್ತಿ ಬಂದಿದೆ. ಯಾವಾಗಲೂ ಶಿಲ್ಪಾ ಶೆಟ್ಟಿ ಅವರೇ ಹೋಗಿ ಗಣೇಶನನ್ನು ಮನೆಗೆ ತರುತ್ತಿದ್ದರು. ಆದರೆ ಈ ಬಾರಿ ಪತಿ ರಾಜ್ ಕುಂದ್ರ ಗಣೇಶನನ್ನು ತಂದಿದ್ದಾರೆ.
ಶಿಲ್ಪಾ ಶೆಟ್ಟಿ ಚಿತ್ರೀಕರಣ ವೇಳೆ ಗಾಯಗೊಂಡಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಗಣಪನ ಮೂರ್ತಿ ತಂದಿದ್ದಾರೆ. ಮನೆಗೆ ಗಣೇಶ ತಂದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಯಾವಾಗಲೂ ಮುಖ ಮುಚ್ಚಿಕೊಂಡೆ ಓಡಾಡುತ್ತಾರೆ. ಗಣೇಶನನ್ನು ಮನೆಗೆ ತರುವಾಗಲೂ ಮುಖ ಮುಚ್ಚಿಕೊಂಡೆ ಬಂದಿದ್ದಾರೆ. ರಾಜ್ ಕುಂದ್ರ ಮುಖ ಮುಚ್ಚಿಕೊಂಡು ಗಣಪನ ತರುತ್ತಿರುವ ಫೋಟೋ ವೈರಲ್ ಆಗಿವೆ.
ಅಂದಹಾಗೆ ಕಳೆದ ವರ್ಷ 2021ರ ಗಣೇಶ ಹಬ್ಬದ ಸಮಯದಲ್ಲಿ ರಾಜ್ ಕುಂದ್ರ ಜೈಲು ಸೇರಿದ್ದರು. ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ರಾಜ್ ಕುಂದ್ರ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೂ ಮನೆಯಲ್ಲಿ ಗಣೇಶ ಹಬ್ಬ ಮಾಡಿದ್ದರು ಶಿಲ್ಪಾ ಶೆಟ್ಟಿ. ಸ್ವತಃ ಶಿಲ್ಪಾ ಶೆಟ್ಟಿಯೇ ಹೋಗಿ ಗಣಪನನ್ನು ಕರೆತಂದಿದ್ದರು. ಈ ಬಾರಿ ಶಿಲ್ಪಾ ಶೆಟ್ಟಿ ಕಾಲಿಗೆ ಏಟು ಮಾಡಿಕೊಂಡು ಮನೆಯಲ್ಲೇ ಇದ್ದಾರೆ. ಪತಿ ಗಣಪನನ್ನು ತಂದಿದ್ದಾರೆ.
ಅಂದಹಾಗೆ ಗಣೇಶ ಮೂರ್ತಿಯನ್ನು ಜುಹುವಿನ ಲಾಲ್‌ಬಾಗ್ ನಲ್ಲಿ ಖರೀದಿಸಿದ್ದಾರೆ. ರಾಜ್ ಕುಂದ್ರ ಅವರೇ ಮೂರ್ತಿ ಖರೀದಿಸಿ ಮನೆಗೆ ತಂದಿದ್ದಾರೆ. ಆಕರ್ಷವಾಗಿರುವ ಗಣೇಶ ಮೂರ್ತಿ ಗಮನಸೆಳೆಯುತ್ತಿದೆ. ಶಿಲ್ಪಾ ಶೆಟ್ಟಿ ಮನೆಯ ಹಬ್ಬದ ಸಂಭ್ರಮದಲ್ಲಿ ಇಡೀ ಕುಟುಂಬ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.