- Home
- Entertainment
- Cine World
- ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!
ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!
Thalapathy Vijay: ಟಿವಿಕೆ ಮುಖ್ಯಸ್ಥ ಹಾಗೂ ದಳಪತಿ ನಟ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣಾ ಹೊತ್ತಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣೆ ಗೆಲ್ಲಬೇಕು, ನಾಡಿನ ಕಷ್ಟಗಳನ್ನು ಪರಿಹಾರ ಮಾಡಬೇಕು ಎಂದುಕೊಳ್ಳುತ್ತಿದ್ದ ದಳಪತಿ ವಿಜಯ್ ಅವರ ಮನೆಯಲ್ಲಿ ಸಮಸ್ಯೆ ಶುರುವಾಗಿದೆ.

ಡಿವೋರ್ಸ್ ಅರ್ಜಿ ಸಲ್ಲಿಸಿದ್ರು
ದಳಪತಿ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಪತ್ನಿ ಸಂಗೀತಾರಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
ಡಿವೋರ್ಸ್‌ಗೆ ಕಾರಣ ಏನು?
ವಿಜಯ್ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ಹಿಂದಿನಿಂದಲೂ ಕೂಡ ವಿಜಯ್ ಅವರು ನಟಿಯೋರ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್ ಇತ್ತು.
ತ್ರಿಶಾ ಮನೆಯಿಂದ ಹೊರಬರಲಿ
ಕೆಲ ದಿನಗಳ ಹಿಂದೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಎನ್ ನಾಗೇಂದ್ರನ್ ಅವರು ಕೂಡ ನಟಿ ತ್ರಿಶಾ ಮನೆಯಿಂದ ವಿಜಯ್ ಅವರು ಹೊರಗಡೆ ಬಂದು, ಸಮಸ್ಯೆ ನೋಡಲಿ ಎಂದು ಕಾಮೆಂಟ್ ಮಾಡಿದ್ದರು. ಆಮೇಲೆ ಪಶ್ಚಾತ್ತಾಪಪಟ್ಟಿದ್ದರು.
ಪರಿಚಯ ಹೇಗಾಯ್ತು?
ಆಗಸ್ಟ್ 1999 ರಲ್ಲಿ ಸಂಗೀತಾ ಹಾಗೂ ವಿಜಯ್ ಮದುವೆಯಾಗಿತ್ತು. ವಿದೇಶದಲ್ಲಿದ್ದ ಸಂಗೀತಾ ಅವರು ವಿಜಯ್ ಅಭಿಮಾನಿಯಾಗಿದ್ದರು. ಹಾಗಾಗಿ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಬಂದಿದ್ದರು.
ಹಿಂದು, ಕ್ರಿಶ್ಚಿಯನ್ ಮದುವೆ
ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ, ಮದುವೆಯಾಗಿದ್ದರು. ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ರೂ ಕೂಡ ಹಿಂದು ಧರ್ಮದಂತೆ ಮದುವೆಯಾಗಿದ್ದು, ವಿಶೇಷ. ಆ ಬಳಿಕ ಕ್ರಿಶ್ಚಿಯನ್ ಸಮುದಾಯದಂತೆ ಮದುವೆಯಾದರು. ಜಾಸೋನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಮಕ್ಕಳಿದ್ದಾರೆ.
ಮಕ್ಕಳು ಯಾರು?
ಜಾಸೋನ್ ಸಂಜಯ್ ಅವರು ನಿರ್ದೇಶಕರಾಗಲು ತಯಾರಿ ಮಾಡುತ್ತಿದ್ದಾರೆ. ಸಂಗೀತಾ ಅವರು ಅಷ್ಟಾಗಿ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗೋದಿಲ್ಲ, ಅಂದಹಾಗೆ ಇವರ ಮಗಳ ಮುಖವನ್ನು ಕೂಡ ಎಲ್ಲಿಯೂ ರಿವೀಲ್ ಮಾಡಲಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

