Asianet Suvarna News Asianet Suvarna News

ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ; ವೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ನಟಿ

ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಶಿಲ್ಪಾ ಶೆಟ್ಟಿ ಕಾಲಿಗೆ ಬಲವಾದ ಏಟು ಬಿದ್ದಿದೆ. ಬಳಿಕ ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ಧಾವಿಸಿದ್ದು ಚಿಕಿತ್ಸೆ ಪಡೆದಿದ್ದಾರೆ. ವೀಲ್ ಚೇರ್ ನಲ್ಲೇ ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Actress Shilpa Shetty gets badly injured while Indian police force shooting set sgk
Author
Bengaluru, First Published Aug 10, 2022, 4:49 PM IST

ಬಾಲಿವುಡ್ ಸ್ಟಾರ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಶಿಲ್ಪಾ ಶೆಟ್ಟಿ ಕಾಲಿಗೆ ಬಲವಾದ ಏಟು ಬಿದ್ದಿದೆ. ಬಳಿಕ ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ಧಾವಿಸಿದ್ದು ಚಿಕಿತ್ಸೆ ಪಡೆದಿದ್ದಾರೆ. ವೀಲ್ ಚೇರ್ ನಲ್ಲೇ ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಶಿಲ್ಪಾ ಶೆಟ್ಟಿ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಇಂಡಿಯನ್ ಪೊಲೀಸ್ ಫೋರ್ಸ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆ ವೇಳೆ ಶಿಲ್ಪಾ ಕಾಲಿಗೆ ಏಟಾಗಿದೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ವೀಲ್ ಚೇರ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿರುವ ನಟಿ ಶಿಲ್ಪಾ ಶೆಟ್ಟಿ ನಗು ಬೀರುತ್ತ ವಿಕ್ಟರ್ ಸಿಂಬಲ್ ತೋರಿಸಿದ್ದಾರೆ. ಡೆನಿಮ್ ಪ್ಯಾಂಟ್ ಮತ್ತು ಡೆನಿಮ್ ಶರ್ಟ್ ಧರಿಸಿರುವ ಶಿಲ್ಪಾ ಫೋಟೋ ಶೇರ್ ಮಾಡಿ ಅವಘಡ ಹೇಗಾಯಿತು ಎಂದು ವಿವರಿಸಿದ್ದಾರೆ. 'ರೋಲ್, ಕ್ಯಾಮರಾ ಆಕ್ಷನ್ ಎಂದು ಕಾಲು ಮುರಿದುಕೊಳ್ಳುವಂತೆ ಹೇಳಿದರು. ನಾನು ನಿಜಕ್ಕೂ ಕಾಲು ಮುರಿದುಕೊಂಡೆ' ಎಂದು ಹೇಳಿದರು. ಇನ್ನು 6 ವಾರಗಳ ಕಾಲ ಕೆಲಸ ಮಾಡುವ ಹಾಗಿಲ್ಲ ಎಂದು ಶಿಲ್ಪಾ ಶೆಟ್ಟಿ ಬಹಿರಂಗ ಪಡಿಸಿದರು.  

'6 ವಾರಗಳ ಕಾಲ ಕೆಲಸಮಾಡುವ ಹಾಗಿಲ್ಲ. ಆದರೆ ನಾನು ಶೀಘ್ರದಲ್ಲೇ ಇನ್ನು ಸ್ಟ್ರಾಂಗ್ ಆಗಿ ಮತ್ತು ಉತ್ತಮವಾಗಿ ಹಿಂತಿರುಗುತ್ತೇನೆ. ಅಲ್ಲಿಯವರೆಗೂ ನಿಮ್ಮ ಪ್ರಾರ್ಥನೆ ನನಗಿರಲಿ. ಪ್ರಾರ್ಥನೆಗಳು ಯಾವಾಗಲೂ ಕೆಲಸ ಮಾಡುತ್ತವೆ. ಕೃತಜ್ಞತೆಯಿಂದ ಶಿಲ್ಪಾ ಶೆಟ್ಟಿ
ಕುಂದ್ರಾ'ಎಂದು ಪೋಸ್ಟ್ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಶೀಘ್ರ ಗುಣಮುಖರಾಗಿ ಎಂದು ಹೇಳಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಸಹೋದರಿ ಕಾಮೆಂಟ್ ಮಾಡಿ ಸ್ಟ್ರಾಂಗೆಸ್ಟ್ ಎಂದು ಹೇಳಿದ್ದಾರೆ.

ಕಾರಿಂದ ಇಳಿದು ಓಡುತ್ತಿದ್ದ ಶಿಲ್ಪಾ ಪ್ಯಾಪರಾಜಿಗಳಿಂದ ಈ ಮಾತು ಕೇಳಿ ಶಾಕ್ ಆಗಿದ್ದಾರೆ!

ನಿರ್ದೇಶಕ ರೋಹಿತ್ ಶೆಟ್ಟಿ ತನ್ನ ಚೊಚ್ಚಲ ವೆಬ್ ಸರಣಿಯ ಫೈಟ್ ಸೀಕ್ವೆನ್ಸ್‌ನ ವೀಡಿಯೊವನ್ನು ಶೇರ್ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ, ರೋಹಿತ್, ಶಿಲ್ಪಾ, ನಿಕಿತಿನ್ ಧೀರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಇತರರ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಕ್ಲಿಪ್ ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವುದನ್ನು ತೋರಿಸಿದೆ.  ಸಿದ್ಧಾರ್ಥ್ ಖಳನಾಯಕರನ್ನು ಹೊಡೆದು ನೀರಿನ ಟ್ಯಾಂಕರ್‌ನಲ್ಲಿ ಎಸೆಯುವುದರೊಂದಿಗೆ ವೀಡಿಯೊ ಪ್ರಾರಂಭವಾಯಿತು. ನಂತರ ಶಿಲ್ಪಾ, ನಿಕಿತಿನ್ ಬರುವವರೆಗೂ ಗೂಂಡಾಗಳ ಗುಂಪಿನೊಂದಿಗೆ ಹೋರಾಡಿ ಗಾಜಿನ ಗೋಡೆಯನ್ನು ಒಡೆದುಹಾಕುವ ದೃಶ್ಯವಾಗಿತ್ತು. ಇದನ್ನು ಶೇರ್ ಮಾಡಿ ರೋಹಿತ್, ಪಕ್ಕಾ ಹಿಂದೂಸ್ತಾನಿ ಆಕ್ಷನ್ ದೃಶ್ಯ ಎಂದು ಕ್ಯಾಪ್ಷನ್ ನೀಡಿದ್ದರು. 

ಶಿಲ್ಪಾ ಶೆಟ್ಟಿ ಪುತ್ರ, ಸನ್ನಿ ಲಿಯೋನಿ ಪುತ್ರಿ ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ; ವಿಡಿಯೋ ವೈರಲ್!

ಇಂಡಿಯನ್ ಪೊಲೀಸ್ ಫೋರ್ಸ್ ರೌಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ವೆಬ್ ಸರಣಿಯಾಗಿದೆ. ಟೈಟಲ್ ಹೇಳುವ ಹಾಗೆ ಇದು ಪೊಲೀಸ್ ಪಡೆಯ ಬಗ್ಗೆ ಇರುವ ಸಿನಿಮಾವಾಗಿದೆ. ಈ ಸರಣಿಯಲ್ಲಿ ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸರಣಿ ರಿಲೀಸ್ ಆಗುತ್ತಿದೆ.   

Follow Us:
Download App:
  • android
  • ios