ಡ್ರಾಮಾದಲ್ಲಿ ರಾಖಿಯನ್ನೇ ಮೀರಿಸಿದ ಶೆರ್ಲಿನ್;​ ಆದಿಲ್​ ಕೈ ಹಿಡಿದ ರಾಖಿ ಬೆಸ್ಟ್​ ಫ್ರೆಂಡ್​!

ನಟಿ ರಾಖಿ ಸಾವಂತ್​ ಮತ್ತು ಆದಿಲ್ ಖಾನ್​ ವಿವಾದ ತಾರಕಕ್ಕೇರಿದ್ದು, ಇದೀಗ ರಾಖಿ ಸಾವಂತ್​ ಸ್ನೇಹಿತೆ ಜಯಶ್ರೀ ಆದಿಲ್​ ಪರ ನಿಂತಿದ್ದರೆ, ಶೆರ್ಲಿನ್​ ಚೋಪ್ರಾ ರಾಖಿಯನ್ನು ಟೀಕಿಸಿದ್ದಾರೆ. 
 

Sherlyn  and Jayashree take a dig at Rakhi at a press conference suc

ಬಾಲಿವುಡ್​ ನಟಿ ರಾಖಿ ಸಾವಂತ್​ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಇವರ ಮದುವೆಯ ಗಲಾಟೆ ಬೀದಿಗೆ ಬಂದಿದೆ. ಇವರಿಬ್ಬರ ನಡುವಿನ ಜಟಾಪಟಿ ಈಗ ಎಲ್ಲೆಡೆ ಹಲ್​ಚಲ್​ ಸೃಷ್ಟಿಸುತ್ತಿದೆ. ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ.  ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ. 

ಬಿಡುಗಡೆಗೊಂಡ ಬೆನ್ನಲ್ಲೇ ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಮಾಡಿದ ಆದಿಲ್​ ಖಾನ್​, ರಾಖಿ ಸಾವಂತ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಪದೇ ಪದೇ ರಾಖಿ ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದುದಾಗಿ ಆದಿಲ್​ ಖಾನ್​ ಹೇಳಿದ್ದರು.  ಮದುವೆಯಾದ ಮೇಲೂ ಆಕೆ  ರಿತೇಶ್​ (Ritesh) ಎನ್ನುವವನ ಜೊತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದು ಆದಿಲ್​ ಖಾನ್​ ಗಂಭೀರ ಆರೋಪ ಮಾಡಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದರು. ಇದೇ ವೇಳೆ, ಆಕೆ ಗರ್ಭಕೋಶವನ್ನು ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ. ಈ ವಿಷಯವನ್ನೂ ನನ್ನಿಂದ ಮುಚ್ಚಿಟ್ಟಿದ್ದಾಳೆ ಎಂಬ ಗಂಭೀರ ಆರೋಪ ಮಾಡಿದ್ದರು. ಹೀಗೆ ಆರೋಪ ವೈರಲ್​ ಆಗುತ್ತಿದ್ದಂತೆಯೇ, ನೇರವಾಗಿ ವೈದ್ಯೆಯನ್ನು ಭೇಟಿಯಾಗಿದ್ದ  ರಾಖಿ ಸಾವಂತ್​,  ಅವರ ಜೊತೆ ಲೈವ್​ನಲ್ಲಿ ಬಂದಿದ್ದರು. 

ಗರ್ಭಕೋಶದಲ್ಲಿ ಸಮಸ್ಯೆಯಾಗಿತ್ತು. ಆದರೆ ಆಪರೇಷನ್​ (Operation) ಮಾಡಿಸಿಕೊಂಡೆ. ಆದಿಲ್​ ಖಾನ್​ನಿಂದ ನನಗೆ ಮಗುವನ್ನು ಪಡೆಯಬೇಕಿತ್ತು. ಅದಕ್ಕಾಗಿ ಗರ್ಭಕೋಶದಲ್ಲಿದ್ದ ಸಮಸ್ಯೆಗಾಗಿ ಆಪರೇಷನ್​ ಮಾಡಿಸಿಕೊಂಡಿದ್ದೆ. ಆದರೆ ಗರ್ಭಕೋಶವನ್ನೇ ತೆಗೆಸಿಕೊಂಡಿರುವುದಾಗಿ ಆದಿಲ್​  ಖಾನ್​ ಎಲ್ಲರ ಎದುರು ಸುಳ್ಳು ಹೇಳುತ್ತಿದ್ದಾರೆ ಎಂದು ವೀರಾವೇಶವಾಗಿ ರಾಖಿ ಹೇಳಿದ್ದರು. ರಾಖಿ ಹೇಳುತ್ತಿರುವುದು ನಿಜ ಎಂದು ವೈದ್ಯೆ ಹೇಳಿದ್ದರು.

ನಾನು ಅಮ್ಮನಾಗ್ತೇನೆ: ವೈದ್ಯೆ ಜೊತೆ ಬಂದು ಆದಿಲ್​ ಖಾನ್​ಗೆ ತಿರುಗೇಟು ನೀಡಿದ ರಾಖಿ ಸಾವಂತ್!

ಇದೀಗ ರಾಖಿ ಸಾವಂತ್​ ಸ್ನೇಹಿತೆ ರಾಜಶ್ರೀ (Rajashree) ಎಂಬುವವರು ಆದಿಲ್​ ಖಾನ್​ ಪರ ಬ್ಯಾಟಿಂಗ್​ ಮಾಡಿದ್ದು, ರಾಖಿ ಸಾವಂತ್​ದ್ದೇ ತಪ್ಪಿದೆ ಎಂದು ಬಿಂಬಿಸಿದ್ದಾರೆ. ಪತ್ರಿಕಾಗೋಷ್ಠಿ ಕರೆದ ಅವರು, ರಾಖಿ ನನಗೆ ಬ್ಲ್ಯಾಕ್​ಮೇಲ್​  ಮಾಡುತ್ತಿದ್ದಳು. ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ. ಈ ಮೂಲಕ ರಾಖಿಯ ಬೆಸ್ಟ್​ ಫ್ರೆಂಡ್​ ಆಗಿದ್ದಾಕೆ ಈಗ ಆದಿಲ್​  ಖಾನ್​ ಕೈ ಹಿಡಿದಿದ್ದಾರೆ. ಅದೇ ಇನ್ನೊಂದೆಡೆ ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ ಕೂಡ ಆದಿಲ್​ ಖಾನ್​ ಪರ ವಹಿಸಿಕೊಂಡು ಬಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಅವರು, ರಾಖಿ ಸಾವಂತ್​ ಸಾಮಾನ್ಯವಾಗಿ ಮಾಡುವ ಡ್ರಾಮಾದಂತೆ ಆ್ಯಕ್ಟಿಂಗ್​ ಮಾಡಿದ್ದಾರೆ. ನೋಡು ರಾಖಿ ಇನ್ನು ಮುಂದೆ ಆ್ಯಕ್ಟಿಂಗ್​ ಮಾಡುವಾಗ ನಿನಗಿಂತಲೂ ನಾನೇ ಚೆನ್ನಾಗಿ ಮಾಡುತ್ತೇನೆ ಎನ್ನುವುದು ಗಮನದಲ್ಲಿ ಇರಲಿ ಎಂದಿದ್ದಾರೆ. ಒಟ್ಟಿನಲ್ಲಿ ರಾಖಿ ಸಾವಂತ್​ ಫ್ರೆಂಡ್ಸ್​ ಆಕೆಯ ಕೈತಪ್ಪುತ್ತಿದ್ದು, ಆದಿಲ್​ ಖಾನ್​ (Adil Khan) ಪರ ನಿಲ್ಲುತ್ತಿದ್ದಾರೆ. 

ನಿನ್ನಂಥವರಿಂದಲೇ ಮುಸ್ಲಿಮರು ಕುಖ್ಯಾತರಾಗ್ತಿರೋದು: ರಾಖಿಯಿಂದ ಆದಿಲ್​ ಖಾನ್ ಹಿಗ್ಗಾಮುಗ್ಗಾ ತರಾಟೆ!
 

Latest Videos
Follow Us:
Download App:
  • android
  • ios