ನಾನು ಅಮ್ಮನಾಗ್ತೇನೆ: ವೈದ್ಯೆ ಜೊತೆ ಬಂದು ಆದಿಲ್​ ಖಾನ್​ಗೆ ತಿರುಗೇಟು ನೀಡಿದ ರಾಖಿ ಸಾವಂತ್!

ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಸಮರ ತಾರಕಕ್ಕೇರಿದೆ. ರಾಖಿ ಗರ್ಭಕೋಶ ತೆಗೆದುಹಾಕಿದ್ದಾಳೆ ಎಂದು ಆದಿಲ್​ ಹೇಳಿದ್ದರಿಂದ ವೈದ್ಯೆಯನ್ನೇ ಕರೆತಂದು ಸಾಕ್ಷಿ ಹೇಳಿಸಿದ್ದಾರೆ ರಾಖಿ ಸಾವಂತ್​. 
 

Rakhi Sawant shares video from gynecologists  she can conceive suc

ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್​ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯ ಗಲಾಟೆ ಬೀದಿಗೆ ಬಂದಿದೆ. ಇವರಿಬ್ಬರ ನಡುವಿನ ಜಟಾಪಟಿ ಈಗ ಎಲ್ಲೆಡೆ ಹಲ್​ಚಲ್​ ಸೃಷ್ಟಿಸುತ್ತಿದೆ. ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ.  ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ. 

ಬಿಡುಗಡೆಗೊಂಡ ಬೆನ್ನಲ್ಲೇ ಪತ್ರಿಕಾಗೋಷ್ಠಿ ಮಾಡಿದ ಆದಿಲ್​ ಖಾನ್​ ರಾಖಿ ಸಾವಂತ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪದೇ ಪದೇ ರಾಖಿ ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದುದಾಗಿ ಆದಿಲ್​ ಖಾನ್​ ಹೇಳಿದ್ದಾರೆ. ನಮ್ಮದು ಮುಸ್ಲಿಂ ಫ್ಯಾಮಿಲಿ ಆಗಿದ್ದರಿಂದ ಕೂಡಲೇ ಮದುವೆ ಕಷ್ಟ ಎಂದೆ. ಆದರೆ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವುದಾಗಿ ಹೇಳಿದ ರಾಖಿ ಮುಸ್ಲಿಂ ಧರ್ಮದ ಕುರಿತು ಒಂದೊಂದೇ ವಿಷಯಗಳನ್ನು ತಿಳಿದುಕೊಳ್ಳಲು ಶುರು ಮಾಡಿದಳು. ಇದರ ಆಚರಣೆ ಕಲಿತುಕೊಂಡಳು. ಇದಾದ ಮೇಲೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇಷ್ಟೆಲ್ಲಾ ಒತ್ತಾಯ ಮಾಡಿದ ಮೇಲೆ ಮದುವೆಯಾದೆವು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ ಆಕೆ ರಿತೇಶ್​ (Ritesh) ಜೊತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದು ಆದಿಲ್​ ಖಾನ್​ ಗಂಭೀರ ಆರೋಪ ಮಾಡಿದ್ದಾರೆ. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದಾರೆ.

ಮುಸ್ಲಿಂ ಧರ್ಮ ಸ್ವೀಕರಿಸಿ ಗಂಡನನ್ನೇ ಟ್ರ್ಯಾಪ್​ ಮಾಡಿದ್ರಾ ರಾಖಿ? ಮಾಜಿ ಪತಿ ಹೇಳಿದ್ದೇನು?

ಇದೇ ವೇಳೆ, ಆಕೆ ಗರ್ಭಕೋಶವನ್ನು ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ. ಈ ವಿಷಯವನ್ನೂ ನನ್ನಿಂದ ಮುಚ್ಚಿಟ್ಟಿದ್ದಾಳೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಹೇಳಿಕೇಳಿ ಅವರು ರಾಖಿ ಸಾವಂತ್​, ಸುಮ್ಮನೆ ಬಿಟ್ಟಾರೆಯೆ? ನೇರವಾಗಿ ವೈದ್ಯೆಯನ್ನು ಭೇಟಿ ಮಾಡಿ ಇರುವ ವಿಷಯವನ್ನು ತಿಳಿಸಿದ್ದಾರೆ. ಗರ್ಭಕೋಶದಲ್ಲಿ ಸಮಸ್ಯೆಯಾಗಿತ್ತು. ಆದರೆ ಆಪರೇಷನ್​ ಮಾಡಿಸಿಕೊಂಡೆ. ಆದಿಲ್​ ಖಾನ್​ನಿಂದ ನನಗೆ ಮಗುವನ್ನು ಪಡೆಯಬೇಕಿತ್ತು. ಅದಕ್ಕಾಗಿ ಗರ್ಭಕೋಶದಲ್ಲಿದ್ದ ಸಮಸ್ಯೆಗಾಗಿ ಆಪರೇಷನ್​ ಮಾಡಿಸಿಕೊಂಡಿದ್ದೆ. ಆದರೆ ಗರ್ಭಕೋಶವನ್ನೇ ತೆಗೆಸಿಕೊಂಡಿರುವುದಾಗಿ ಆದಿಲ್​  ಖಾನ್​ ಎಲ್ಲರ ಎದುರು ಸುಳ್ಳು ಹೇಳುತ್ತಿದ್ದಾರೆ ಎಂದು ವೀರಾವೇಶವಾಗಿ ರಾಖಿ ಹೇಳಿದ್ದಾರೆ.

ಅಲ್ಲಿಯೇ ವೈದ್ಯೆಯನ್ನೂ ಕರೆಸಿರುವ ರಾಖಿ, ಅವರ ಬಾಯಿಯಿಂದಲೇ ಈ ಮಾತನ್ನು ಹೇಳಿದ್ದಾರೆ. ವೈದ್ಯೆ ವೀಣಾ ಕೂಡ ರಾಖಿ ಸಾವಂತ್​ ಗರ್ಭಕೋಶ ಸರಿಯಾಗಿಯೇ ಇದೆ, ಆಕೆ ಮಕ್ಕಳನ್ನು ಹೆರಬಹುದು. ಅವರಿಗೆ ಮಾಸಿಕ ಋತುಸ್ರಾವ ಎಲ್ಲವೂ ಸರಿಯಾಗುತ್ತಿದ್ದು, ತಾಯಿಯಾಗಲು ಎಲ್ಲ ಅರ್ಹತೆ ಪಡೆದಿದ್ದಾರೆ. ಅವರ ಗರ್ಭಕೋಶ ತೆಗೆಯಲಿಲ್ಲ, ಅದರಲ್ಲಿರುವ ಫೈಬ್ರೋಟ್ಸ್​ ತೆಗೆದಿದ್ದೇವೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios