ನಿನ್ನಂಥವರಿಂದಲೇ ಮುಸ್ಲಿಮರು ಕುಖ್ಯಾತರಾಗ್ತಿರೋದು: ರಾಖಿಯಿಂದ ಆದಿಲ್ ಖಾನ್ ಹಿಗ್ಗಾಮುಗ್ಗಾ ತರಾಟೆ!
ನಟಿ ರಾಖಿ ಸಾವಂತ್ ಪತ್ರಿಕಾಗೋಷ್ಠ ಕರೆದು ಮಾಜಿ ಪತಿ ಆದಿಲ್ ಖಾನ್ರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಹೇಳಿದ್ದೇನು?
ಬಾಲಿವುಡ್ ನಟಿ ರಾಖಿ ಸಾವಂತ್ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್ ಖಾನ್ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಇವರ ಮದುವೆಯ ಗಲಾಟೆ ಬೀದಿಗೆ ಬಂದಿದೆ. ಇವರಿಬ್ಬರ ನಡುವಿನ ಜಟಾಪಟಿ ಈಗ ಎಲ್ಲೆಡೆ ಹಲ್ಚಲ್ ಸೃಷ್ಟಿಸುತ್ತಿದೆ. ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ. ಆದಿಲ್ ಖಾನ್ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ.
ಬಿಡುಗಡೆಗೊಂಡ ಬೆನ್ನಲ್ಲೇ ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಮಾಡಿದ ಆದಿಲ್ ಖಾನ್, ರಾಖಿ ಸಾವಂತ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಪದೇ ಪದೇ ರಾಖಿ ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದುದಾಗಿ ಆದಿಲ್ ಖಾನ್ ಹೇಳಿದ್ದರು. ಮದುವೆಯಾದ ಮೇಲೂ ಆಕೆ ರಿತೇಶ್ (Ritesh) ಎನ್ನುವವನ ಜೊತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದು ಆದಿಲ್ ಖಾನ್ ಗಂಭೀರ ಆರೋಪ ಮಾಡಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್ ಮಾಡಿದಳು ಎಂದೆಲ್ಲಾ ಹೇಳಿದ್ದರು. ಇದೇ ವೇಳೆ, ಆಕೆ ಗರ್ಭಕೋಶವನ್ನು ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ. ಈ ವಿಷಯವನ್ನೂ ನನ್ನಿಂದ ಮುಚ್ಚಿಟ್ಟಿದ್ದಾಳೆ ಎಂಬ ಗಂಭೀರ ಆರೋಪ ಮಾಡಿದ್ದರು. ಹೀಗೆ ಆರೋಪ ವೈರಲ್ ಆಗುತ್ತಿದ್ದಂತೆಯೇ, ನೇರವಾಗಿ ವೈದ್ಯೆಯನ್ನು ಭೇಟಿಯಾಗಿದ್ದ ರಾಖಿ ಸಾವಂತ್, ಅವರ ಜೊತೆ ಲೈವ್ನಲ್ಲಿ ಬಂದಿದ್ದರು. ಗರ್ಭಕೋಶದಲ್ಲಿ ಸಮಸ್ಯೆಯಾಗಿತ್ತು. ಆದರೆ ಆಪರೇಷನ್ ಮಾಡಿಸಿಕೊಂಡೆ. ಆದಿಲ್ ಖಾನ್ನಿಂದ ನನಗೆ ಮಗುವನ್ನು ಪಡೆಯಬೇಕಿತ್ತು. ಅದಕ್ಕಾಗಿ ಗರ್ಭಕೋಶದಲ್ಲಿದ್ದ ಸಮಸ್ಯೆಗಾಗಿ ಆಪರೇಷನ್ ಮಾಡಿಸಿಕೊಂಡಿದ್ದೆ. ಆದರೆ ಗರ್ಭಕೋಶವನ್ನೇ ತೆಗೆಸಿಕೊಂಡಿರುವುದಾಗಿ ಆದಿಲ್ ಖಾನ್ ಎಲ್ಲರ ಎದುರು ಸುಳ್ಳು ಹೇಳುತ್ತಿದ್ದಾರೆ ಎಂದು ವೀರಾವೇಶವಾಗಿ ರಾಖಿ ಹೇಳಿದ್ದರು. ರಾಖಿ ಹೇಳುತ್ತಿರುವುದು ನಿಜ ಎಂದು ವೈದ್ಯೆ ಹೇಳಿದ್ದರು.
ನಾನು ಅಮ್ಮನಾಗ್ತೇನೆ: ವೈದ್ಯೆ ಜೊತೆ ಬಂದು ಆದಿಲ್ ಖಾನ್ಗೆ ತಿರುಗೇಟು ನೀಡಿದ ರಾಖಿ ಸಾವಂತ್!
ಇದೀಗ ಇನ್ನೊಂದು ಪತ್ರಿಕಾಗೋಷ್ಠಿ ಮಾಡಿರುವ ರಾಖಿ ಸಾವಂತ್, ನಾನು ಗರ್ಭಿಣಿಯಾಗಿದ್ದೆ (Pregnant). ನಂತರ ಆದಿಲ್ನಿಂದ ಗರ್ಭಪಾತವಾಗುವ ಹಾಗಾಯಿತು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ನಾನು ಅಪ್ಪಟ ಮುಸ್ಲಿಂ. ಹೌದು. ನಾನು ಮುಸ್ಲಿಂ ಧರ್ಮವನ್ನೇ ಪಾಲಿಸುತ್ತಿದ್ದೆ. ಆದರೆ ಆದಿಲ್ ಖಾನ್ ಹುಟ್ಟು ಮುಸ್ಲಿಂ ಆದರೂ ಮುಸ್ಲಿಂ ಧರ್ಮ ಪಾಲಿಸ್ತಾ ಇರಲಿಲ್ಲ. ನಾನೇ ಒತ್ತಾಯ ಮಾಡಿ ನಮಾಜ್ ಮಾಡುವಂತೆ ಆತನಿಗೆ ಹೇಳುತ್ತಿದ್ದೆ. ಇಂಥವರಿಂದಲೇ ಮುಸ್ಲಿಮರು ಇಂದು ಕುಖ್ಯಾತಿಗಳಿಸುತ್ತಿದ್ದಾರೆ. ಒಮ್ಮೆಯೂ ಮುಸ್ಲಿಮ್ ಧರ್ಮದವರಂತೆ ಆದಿಲ್ ನಡೆದುಕೊಳ್ಳಲಿಲ್ಲ ಎಂದು ಮಾಜಿ ಪತಿಯನ್ನು ರಾಖಿ ಹಿಗ್ಗಾಮುಗ್ಗ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ಜೊತೆ ಮದುವೆಯಾಗು ಎಂದಾಗ ಮದುವೆ (Marriage) ಆಗುವುದಿಲ್ಲ ಎಂದ. ಆದರೆ ಆಗಲೇ ನಾನು ಗರ್ಭಿಣಿಯಾಗಿದ್ದೆ. ಆತ ನನಗೆ ಇಷ್ಟು ಟಾರ್ಚರ್ ಕೊಟ್ಟ ಅದನ್ನು ಹೇಳಲು ಸಾಧ್ಯವಿಲ್ಲ. ಅದಾಗಲೇನಾನು ಬಿಗ್ಬಾಸ್ ಮನೆಯೊಳಕ್ಕೆ ಹೋಗಿದ್ದೆ. ಆಗಲೇ ಗರ್ಲ್ಫ್ರೆಂಡ್ ಜೊತೆ ಅಫೇರ್ ಶುರುಹಚ್ಚಿಕೊಂಡಿದ್ದ ಎಂದು ಆದಿಲ್ ಖಾನ್ ವಿರುದ್ಧ ರಾಖಿ ಆರೋಪ ಮಾಡಿದ್ದಾರೆ. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ತಾವು ಮತಾಂತರಗೊಂಡು ಅಲ್ಲಿಯ ಎಲ್ಲ ನಿಯಮಗಳನ್ನು ಪಾಲನೆ ಮಾಡುತ್ತಿದ್ದರೂ ಆತ ಮಾತ್ರ ಸ್ವಲ್ಪವೂ ತನ್ನ ಧರ್ಮಕ್ಕೆ ಮರ್ಯಾದೆ ಕೊಡುತ್ತಿರಲಿಲ್ಲ ಎಂದಿದ್ದಾರೆ ರಾಖಿ.
ಮದ್ವೆ ನನ್ ಜೊತೆ, ಸಂಬಂಧ ಅವ್ನ ಜೊತೆ: ರಾಖಿ ಕುರಿತು ಆದಿಲ್ ಖಾನ್ ಶಾಕಿಂಗ್ ಹೇಳಿಕೆ!