ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ವಿವಾಹದ ಸ್ವೀಟ್ಸ್ ವಾಪಸ್ ಕಳಿಸಿದರಂತೆ ಈ ಸ್ಟಾರ್!
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆಯ ನಂತರ ಕಳಿಸಿದ ಸಿಹಿತಿಂಡಿಗಳನ್ನು ಈ ಸ್ಟಾರ್ ಹಿಂದಿರುಗಿಸಿದ್ದರು. ಮದುವೆಗೆ ಆಮಂತ್ರಣ ನೀಡದ ಕಾರಣಕ್ಕೆ ಅವರಿಗೆ ಸಿಟ್ಟು ಬಂದಿತ್ತು. ಆಮಂತ್ರಣ ನೀಡದಿದ್ದುದಕ್ಕೂ ಕಾರಣವಿತ್ತು.

ಅಭಿಷೇಕ್ ಬಚ್ಚನ್ (Abhishek Bchchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai) ವೈಯಕ್ತಿಕ ಜೀವನ ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತದೆ. ಅವರಿಗೆ ಬೇಕೋ ಬೇಡವೋ, ಅವರ ಸುದ್ದಿಗಳಿಗಂತೂ ಬರವಿಲ್ಲ. ಅವರಿಬ್ಬರ ನಡುವೆ ಅಂತರ ಹೆಚ್ಚುತ್ತಿದೆ ಎಂಬುದು ಸಾಕಷ್ಟು ಸ್ಪಷ್ಟವಾಗಿದೆ ಎಂದು ಮೀಡಿಯಾಗಳು ಹೇಳುತ್ತಿವೆ. ಅದು ಇತ್ತೀಚೆಗೆ ಹೆಚ್ಚು ಪಬ್ಲಿಕ್ ಆಗಲು ಆರಂಭಿಸಿದೆ. ಅಭಿಷೇಕ್ ಮತ್ತು ಐಶ್ವರ್ಯಾ ಇಬ್ಬರೂ ಸ್ವಲ್ಪ ಸಮಯದಿಂದ ಒಟ್ಟಿಗೆ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಯಾವುದೇ ಕಾರ್ಯಕ್ರಮಕ್ಕೆ, ಪಾರ್ಟಿಗೆ ಜೊತೆಯಾಗಿ ಹೋಗಿಲ್ಲ. ಇದೆಲ್ಲ ಅವರ ಸಂಬಂಧದ ಸುತ್ತಲಿನ ವದಂತಿಗಳಿಗೆ ಕಾರಣವಾಗಿದೆ.
ಅದಿರಲಿ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ಮದುವೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವೀಡಿಯೊಗಳಿವೆ. ಅವರ ಮದುವೆಗೆ ಸಂಬಂಧಿಸಿದ ಆಸಕ್ತಿದಾಯಕ ಘಟನೆಯೊಂದನ್ನು ಇಲ್ಲಿ ನೋಡಬಹುದು. ಅದೇನೆಂದರೆ, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಮದುವೆಯ ನಂತರ ಹಲವಾರು ಬಾಲಿವುಡ್ ತಾರೆಯರ ಮನೆಗೆ ಸ್ವೀಟ್ ಬಾಕ್ಸ್‌ಗಳನ್ನು ಕಳಿಸಲಾಗಿತ್ತು. ಎಲ್ಲರೂ ಸ್ವೀಕರಿಸಿದ್ದರು. ಆದರೆ ಆಗಿನ ಬಾಲಿವುಡ್‌ನ ಹಿರಿಯ ಸ್ಟಾರ್ ಒಬ್ಬರು ತಮ್ಮಲ್ಲಿಗೆ ಕಳುಹಿಸಿದ ಸಿಹಿತಿಂಡಿಗಳನ್ನು ಹಿಂದಿರುಗಿಸಿದರು!
ಅದು ಬೇರೆ ಯಾರೂ ಅಲ್ಲ, ಶತ್ರುಘ್ನ ಸಿನ್ಹಾ (Shatrughan Sinha). ಬಚ್ಚನ್ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಟಾರ್ ಶತ್ರುಘ್ನ ಸಿನ್ಹಾ. ಶತ್ರುಘ್ನ ಮತ್ತು ಅಮಿತಾಭ್ ಬಚ್ಚನ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದರೂ ಬರಬರುತ್ತಾ ಅವರಿಬ್ಬರೂ ಪ್ರತಿಸ್ಪರ್ಧಿಗಳು ಎಂದು ಬಾಲಿವುಡ್ ಪರಿಗಣಿಸಿತ್ತು. ಅಭಿ- ಐಶ್ ಮದುವೆಗೆ ಬಾಲಿವುಡ್‌ನಲ್ಲಿ ಹಲವರನ್ನು ಕರೆಯಲಾಗಿತ್ತು, ಕೆಲವರನ್ನು ಆಹ್ವಾನಿಸಿರಲಿಲ್ಲ. ಶತ್ರುಘ್ನ ಅವರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಶತ್ರುಘ್ನ ಹಾಗೂ ಅವರ ಕುಟುಂಬಕ್ಕೆ ಅಸಮಾಧಾನವಾಗಿತ್ತು. ಹೀಗಾಗಿ ಸ್ವೀಟ್ ಬಾಕ್ಸ್ ವಾಪಸ್ ಹೋಯಿತು.
ಈ ಕುರಿತು ಮಿಡ್ ಡೇಗೆ ಸಂದರ್ಶನ ನೀಡಿದಾಗ ಶತ್ರುಘ್ನ ಸಿನ್ಹಾ ಅದರ ಕಾರಣ ಹೇಳಿದ್ದರು. "ಮದುವೆಗೆ ಆಹ್ವಾನಿಸದವರನ್ನು ಸ್ನೇಹಿತರೆಂದು ಪರಿಗಣಿಸಲಾಗುವುದಿಲ್ಲ ಎಂದು ಅಮಿತಾಭ್ ಒಮ್ಮೆ ನನ್ನಲ್ಲಿ ಹೇಳಿದ್ದರು. ಅಭಿ- ಐಶ್ ಮದುವೆಗೆ ನಮ್ಮನ್ನು ಅವರು ಆಮಂತ್ರಿಸಿರಲಿಲ್ಲ. ಹೀಗಾಗಿ ಅವರನ್ನು ಸ್ನೇಹಿತರೆಂದು ತಿಳಿಯುವುದಾದರೂ ಹೇಗೆ? ಆಮಂತ್ರಣ ಇಲ್ಲದ ಮದುವೆಗೆ ಯಾರೂ ಹೋಗುವುದಿಲ್ಲ ತಾನೆ? ಮದುವೆಗೆ ಆಹ್ವಾನಿಸದ ಮೇಲೆ ಸಿಹಿತಿಂಡಿಗಳನ್ನು ನಂತರ ಕಳುಹಿಸುವುದಾದರೂ ಯಾಕೆ?" ಎಂದು ಶತ್ರುಘ್ನ ರೇಗಿದ್ದರು. ಅವರ ಸಿಟ್ಟು ಸಹಜವೇ ಆಗಿತ್ತು.
ಹಾಗಾದರೆ ಯಾಕೆ ಶತ್ರುಘ್ನ ಅವರನ್ನು ಆಹ್ವಾನಿಸಿರಲಿಲ್ಲ? "ಕಾಫಿ ವಿತ್ ಕರಣ್" ಶೋನಲ್ಲಿ ಇದಕ್ಕೆ ಕಾರಣವನ್ನು ಅಭಿಷೇಕ್ ಬಚ್ಚನ್ ಅವರು ತಿಳಿಸಿದ್ದರು. ತಮ್ಮ ಮದುವೆಯ ಸಂದರ್ಭದಲ್ಲಿ ತಮ್ಮ ಅಜ್ಜಿ ಅಂದರೆ ಅಮಿತಾಭ್ ಅವರ ಅಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಹೀಗಾಗಿ ಕಡಿಮೆ ಜನರನ್ನು ಮದುವೆಗೆ ಆಹ್ವಾನಿಸಲಾಗಿತ್ತು. ನಂತರ ಎಲ್ಲರ ಆಶೀರ್ವಾದ ಪಡೆಯಲು ಸಿಹಿತಿಂಡಿಗಳನ್ನು ಕಳುಹಿಸಲಾಯಿತು. ಆದರೆ ಶತ್ರುಘ್ನ ಚಿಕ್ಕಪ್ಪ ಅವುಗಳನ್ನು ಹಿಂದಿರುಗಿಸಿದ್ದರು" ಎಂದು ಅಭಿಷೇಕ್ ನೆನಪಿಸಿಕೊಂಡಿದ್ದರು.
₹31 ಕೋಟಿ ಮನೆ ಖರೀದಿಸಿದ ₹83 ಕೋಟಿಗೆ ಮಾರಿದ ಅಮಿತಾಬ್, 3 ವರ್ಷದಲ್ಲಿ ದುಪ್ಪಟ್ಟು ಲಾಭ
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ನ ಸಂಸದರಾಗಿ ಶತ್ರುಘ್ನ ಸಿನ್ಹಾ ಆಯ್ಕೆಯಾಗಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದರು. ಜೊತೆಗೆ ಇತ್ತೀಚೆಗೆ ಅವರ ಮಗಳು ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಅವರನ್ನು ಅಂತರ್ಧರ್ಮೀಯ ವಿವಾಹವಾದರು. ಶತ್ರುಘ್ನ ಸಿನ್ಹಾ ಅವರ ತವರೂರಾದ ಪಾಟ್ನಾದಲ್ಲಿ ಹಿಂದೂ ಶಿವವಾಹನಿ ಸೇನೆಯು ಇದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಅಂತರ್ ಧರ್ಮೀಯ ವಿವಾಹವನ್ನು 'ಲವ್ ಜಿಹಾದ್' ಎಂದು ಕರೆದಿತ್ತು. ಸೋನಾಕ್ಷಿ ಸಿನ್ಹಾ ಅವರಿಗೆ ಬಿಹಾರಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿತ್ತು. ಈ ಪ್ರತಿಭಟನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಶತ್ರುಘ್ನ ಸಿನ್ಹಾ, ತಮ್ಮ ಮಗಳು ಯಾವುದೇ ಅಕ್ರಮ ಮಾಡಿಲ್ಲ . ದ್ವೇಷ ಹರಡುವ ಕೆಲಸ ಮಾಡಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದರು.
ಪ್ಲೀಸ್ ಯಾರಿಗೂ ಹೇಳ್ಬೇಡಿ ಆಯ್ತಾ, 90ರ ದಶಕದ ಹುಡುಗರ ಈ ಗುಟ್ಟು!