ಪ್ಲೀಸ್ ಯಾರಿಗೂ ಹೇಳ್ಬೇಡಿ ಆಯ್ತಾ, 90ರ ದಶಕದ ಹುಡುಗರ ಈ ಗುಟ್ಟು!
ಇಂದಿಗೂ ಕೂಡ ಗಣೇಶನ ಮದುವೆ, ಗಣೇಶನ ಗಲಾಟೆ ಮುಂತಾದ ಸಿನಿಮಾಗಳನ್ನು ಜನರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. 90ರಲ್ಲಿ ಹುಟ್ಟಿದ ಕಿಡ್ಸ್‌ಗಳು ಮಾತ್ರವಲ್ಲ, ಅವರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗ ಅಪ್ಪ-ಅಮ್ಮಂದಿರು, ಚಿಕ್ಕಪ್ಪ, ದೊಡ್ಡಪ್ಪ, ಮಾವಂದಿರು, ಜೊತೆಗಿದ್ದ ತಾತ-ಅಜ್ಜಿ ...

ಅದು ತೊಂಬತ್ತರ ದಶಕ. ಕನ್ನಡ ಸಿನಿಮಾರಂಗದಲ್ಲಿ ಹತ್ತುಹಲವು ಪ್ರಯೋಗಗಳಿಗೆ ದಾರಿ ಮಾಡಿಕೊಟ್ಟ ದಶಕವದು. ಹಲವು ಹಾಸ್ಯ ಉಕ್ಕಿಸುವ ಸಿನಿಮಾಗಳು ಈ ಕಾಲದಲ್ಲಿ ಬಂದಿದೆ. ಅವುಗಳಲ್ಲಿ ಮುಖ್ಯವಾದವು ನಟ ಅನಂತ್ ನಾಗ್ (Anant Nag) ನಟನೆಯ ಕಾಮಿಡಿ ಸಿನಿಮಾಗಳು. ಅದರಲ್ಲೂ ಅನಂತ್ ನಾಗ್ ಹಾಗೂ ಫಣಿ ರಾಮಚಂದ್ರ ಜೋಡಿಯ ಚಿತ್ರಗಳು ಸಖತ್ ಸದ್ದು ಮಾಡಿದ್ದವು. ಅನಂತ್ ನಾಗ್, ವಿನಯಾ ಪ್ರಸಾದ್ ಜೋಡಿ, ಅನಂತ್‌ನಾಗ್-ವಿನಯಾ ಪ್ರಸಾದ್ ಜೋಡಿ ಹೀಗೆ ಬಂದ ಚಿತ್ರಗಳು ಶತದಿನೋತ್ಸವ ಆಚರಿಸಿ ಸೂಪರ್ ಹಿಟ್ ಎನಿಸಿದ್ದವು.
ನಟ ಅನಂತ್ ನಾಗ್ ಅವರ ನಟನೆಯಲ್ಲಿ ಗೌರಿ ಗಣೇಶ, ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯ ಹಾಗೂ ಯಾರಿಗೂ ಹೇಳ್ಬೇಡಿ ಮುಂತಾದ ಸಿನಿಮಾಗಳನ್ನು ಅಂದಿನ ಹುಡುಗರು ನೋಡಿ ಎಂಜಾಯ್ ಮಾಡಿದ್ದರು. ಕಾರಣ, ಅಂದು ಬಂದಿದ್ದ ಅನಂತ್ ನಾಗ್ ನಟನೆಯ ಆ ಎಲ್ಲ ಸಿನಿಮಾಗಳೂ ಮಕ್ಕಳಿಂದ ಮುದುಕರವರೆಗೆ ನೋಡುವಂಥ ಚಿತ್ರಗಳಾಗಿದ್ದವು. ಮನೆಮಂದಿಯೆಲ್ಲರೂ ಒಟ್ಟಿಗೇ ಕುಳಿತು ನೋಡುವಂಥ ಆ ಸಿನಿಮಾಗಳನ್ನು ಅಂದಿನ ಕಿಡ್‌ಗಳು ಎಂಜಾಯ್ ಮಾಡಿದ್ದರು.
ಶಂಕರ್ ನಾಗ್ ಸಾವು ಪೂರ್ವ ನಿರ್ಧಾರಿತ, ಅವ್ರು ಮುನ್ಸೂಚನೆ ಕೊಟ್ಟಿದ್ದರು: ಅನಂತ್ ನಾಗ್!
ಇಂದಿಗೂ ಕೂಡ ಗಣೇಶನ ಮದುವೆ, ಗಣೇಶನ ಗಲಾಟೆ ಮುಂತಾದ ಸಿನಿಮಾಗಳನ್ನು ಜನರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. 90ರಲ್ಲಿ ಹುಟ್ಟಿದ ಕಿಡ್ಸ್‌ಗಳು ಮಾತ್ರವಲ್ಲ, ಅವರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗ ಅಪ್ಪ-ಅಮ್ಮಂದಿರು, ಚಿಕ್ಕಪ್ಪ, ದೊಡ್ಡಪ್ಪ, ಮಾವಂದಿರು, ಜೊತೆಗಿದ್ದ ತಾತ-ಅಜ್ಜಿ ಎಲ್ಲರೂ ಆ ಸಿನಿಮಾಗಳನ್ನು ಖಂಡಿತ ಮರೆಯಲು ಸಾಧ್ಯವೇ ಇಲ್ಲ ಬಿಡಿ. ಸಿಂಗಲ್ ಮಿನಿಂಗ್ ಬೆರೆತ ಕಚಗುಳಿ ಇಡುವ ಆ ಸಂಭಾಷಣೆಗಳು, ನಗು ಉಕ್ಕಿಸುವ ಹಾಸ್ಯ ಸನ್ನಿವೇಶಗಳು ಅಂದಿನ ಅನಂತ್ ನಾಗ್ ಚಿತ್ರಗಳ ವಿಶೇಷತೆಗಳು ಎನ್ನಿಸಿದ್ದವು.
ಅದರಲ್ಲೂ ಫಣಿ ರಾಮಚಂದ್ರ ಹಾಗೂ ಅನಂತ್ ನಾಗ್ ಜೋಡಿಯ ಚಿತ್ರಗಳನ್ನು ಜನರು ಅದೆಷ್ಟು ಇಷ್ಟಪಟ್ಟಿದ್ದರು ಎಂದರೆ, ಆ ಚಿತ್ರಗಳ ಸಂಭಾಷಣೆಗಳನ್ನು ಜನರು ಮನೆಮನೆಯಲ್ಲಿ ಹೇಳತೊಡಗಿದ್ದರು. ಆದರೆ ಇಂದು ಅವೆಲ್ಲವೂ ಮರೆತ ಮಾವಿನಕಾಯಿ ಆಗಿದೆ. 'ಕಾಲಾಯ ತಸ್ಮೈ ನಮಃ' ಎನ್ನಲೇಬೇಕು. ಇಂದು ಬರುವ ಸಿನಿಮಾಗಳು ತಮ್ಮ ರೂಪವನ್ನು ಬದಲಿಸಿಕೊಂಡಿವೆ. ಇದು ಸರಿ-ತಪ್ಪು ಹುಡುಕುವ ಪ್ರಶ್ನೆಯಲ್ಲ, ಬದಲಿಗೆ ಬದಲಾವಣೆಯನ್ನು ಅರಿತು ಒಪ್ಪಿಕೊಂಡು ನಡೆಯಬೇಕಾದ ಕಾಲ ಎನ್ನಬೇಕಷ್ಟೇ!
ಯಂಗ್ ಹುಡುಗರು ಬಂದು ನಟಿ ಸುಧಾರಾಣಿ ಹತ್ರ ಹಂಗಾ ಕೇಳೋದು!?