3 ವರ್ಷದ ಹಿಂದೆ 31 ಕೋಟಿ ರೂಪಾಯಿಗೆ ಅಮಿತಾಬ್ ಬಚ್ಚನ್ ಮನೆ ಖರೀದಿಸಿದ್ದರು. ಇದೀಗ ಈ ಮನೆಯನ್ನು 83 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಮಿತಾಬ್ ಈ ಮನೆ ಮಾರಾಟದ ಬೆನ್ನಲ್ಲೇ ಕೆಲ ಅನುಮಾನಗಳ ಕುರಿತು ಚರ್ಚೆಯಾಗುತ್ತಿದೆ.
ಮುಂಬೈ(ಜ.20) ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಭಿನ್ನ ಪಾತ್ರ, ಅದ್ಭುತ ಅಭಿನಯದ ಮೂಲಕ ಸದಾ ಜನರ ಮನಸ್ಸು ಗೆಲ್ಲುತ್ತಾರೆ. ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮೂಲಕವೂ ಪ್ರತಿ ಮನೆಗೆ ಲಗ್ಗೆ ಇಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಸಿನಿಮಾ ಮೂಲಕ, ಟಿವಿ ಕಾರ್ಯಕ್ರಮದ ಮೂಲಕ ಆದಾಯಗಳಿಸುತ್ತಿದ್ದಾರೆ. ಇಷ್ಟೇ ಅಲ್ಲ ಇತರ ಕೆಲ ಮೂಲಗಳಿಂದಲೂ ಅಮಿತಾಬ್ ಬಚ್ಚನ್ ಆದಾಯಗಳಿಸುತ್ತಿದ್ದಾರೆ. ಇದೀಗ ಅಮಿತಾಬ್ ಬಚ್ಚನ್ ತಮ್ಮ ಮುಂಬೈನ ಅಂಧೇರಿಯಲ್ಲಿರುವ ಡುಪ್ಲೆಕ್ಸ್ ಮನೆ ಮಾರಾಟ ಮಾಡಿದ್ದಾರೆ. ವಿಶೇಷ ಅಂದರೆ 2021ರಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ 31 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ ಬರೋಬ್ಬರಿ 83 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಆದರೆ ಈ ಮನೆಯನ್ನು ಅಮಿತಾಬ್ ಬಚ್ಚನ್ ಮಾರಾಟ ಮಾಡಿದ್ದೇಕೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಅಮಿತಾಬ್ ಬಚ್ಚನ್ ಬೇರೆ ಮನೆ ಖರೀದಿಗೆ ಮುಂದಾಗಿದ್ದಾರ? ಅಥವಾ ಈ ಮೊತ್ತವನ್ನು ಬೇರೆ ಕಡೆ ಹೂಡಿಕೆ ಮಾಡುತ್ತಾರಾ? ಅನ್ನೋ ಚರ್ಚೆ ಜೋರಾಗಿದೆ. ಪ್ರಮುಖವಾಗಿ ಮುಂಬೈನಲ್ಲಿ ಸೆಲೆಬ್ರೆಟಿಗಳು ಹೆಚ್ಚು ಮನೆ ಖರೀದಿಸಲು ಮುಂದಾಗುತ್ತಾರೆ. ಹೀಗಿರುವಾಗ ಅಮಿತಾಬ್ ಬಚ್ಚನ್ ಮನೆ ಮಾರಾಟ ಮಾಡಿದ್ದೇಕೆ ಅನ್ನೋ ಹುಟ್ಟಿದೆ.
ಫೋನ್ ಮಾಡಲು ಸ್ವಲ್ಪ ದುಡ್ಡು ಕೊಡ್ತೀರಾ, ರತನ್ ಟಾಟಾ ಜೊತೆಗಿನ ಘಟನೆ ಬಿಚ್ಚಿಟ್ಟ ಅಮಿತಾಬ್!
ಸ್ಕ್ವೇರ್ ಯಾರ್ಡ್ಸ್‌ನಲ್ಲಿ ಅಮಿತಾಬ್ ಬಚ್ಚನ್ ಮನೆ ಮಾರಾಟದ ಮಾಹಿತಿಗಳು ಲಭ್ಯವಾಗಿದೆ. 5,185 ಚದರ ಅಡಿಯ ಮನೆ ಇದಾಗಿದೆ. ಅಂಧೇರಿಯಲ್ಲಿರುವ ಅಂಟ್ಲಾಟಿಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆ. ಡುಪ್ಲೆಕ್ಸ್ ಮನೆಯಾಗಿರುವ ಕಾರಣ 27 ಹಾಗೂ 28ನೇ ಮಹಡಿಯಲ್ಲಿದೆ. ಜನವರಿ 17ರಂದು ಈ ಮನೆ ಮಾರಾಟದ ನೋಂದಣಿ ಪ್ರಕ್ರಿಯೆ ನಡೆದಿದೆ. ಈ ಮಾರಾಟ ವ್ಯವಹಾರದಲ್ಲಿ 4.98 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ. ದಾಖಲೆ ಪ್ರಕಾರ ಅಮಿತಾಬ್ ಬಚ್ಚನ್ ಈ ಮನೆಯನ್ನು ವಿಜಯ್ ಸಿಂಗ್ ಠಾಕೂರ್ ಹಾಗೂ ಕಮಲ್ ವಿಜಯ್ ಠಾಕೂರ್ ಎಂಬುವವರಿಗೆ ಈ ಮನೆ ಮಾರಾಟ ಮಾಡಿದ್ದಾರೆ.
ಎಪ್ರಿಲ್ 2021ರಲ್ಲಿ ಅಮಿತಾಬ್ ಬಚ್ಚನ್ ಈ ಮನೆಯನ್ನು ಖರೀದಿಸಿದ್ದರು. ಈ ಮನೆಯನ್ನು 31 ಕೋಟಿ ರೂಪಾಯಿಗೆ ಖರೀದಿಸಿದ ಅಮಿತಾಬ್ ಬಚ್ಚನ್ 83 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಂದರೆ ಅಮಿತಾಬ್ ಮನೆ ಖರೀದಿಸಿದ ಬಳಿಕ ಇದರ ಮೌಲ್ಯ ಶೇಕಡಾ 168ರಷ್ಟು ಹೆಚ್ಚಾಗಿದೆ. ಈ ಮನೆ ಖರೀದಿಸಿದ ಬಾಲಿವುಡ್ ನಟಿ ಕೃತಿ ಸನೋನ್‌ಗೆ ಬಾಡಿಗೆ ನೀಡಲಾಗಿತ್ತು. ಪ್ರತಿ ತಿಂಗಳು 10 ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಿದ್ದರು.
ಸೋಲು ನಿಮ್ಮನ್ನು ಕಾಡುತ್ತಿದ್ದರೆ ಒಮ್ಮೆ ಅಮಿತಾಭ್ ಬಚ್ಚನ್ ಹೇಳಿದ್ದು ಕೇಳಿ, ಉದ್ಧಾರ ಆಗ್ತೀರಾ!
