ಶಾರುಖ್ ಖಾನ್ ಜಾಗತಿಕವಾಗಿ ಟಾಪ್ 10 ಶ್ರೀಮಂತ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ  ಎಷ್ಟಿದೆ ಅಂತ ನೀವೇ ನೋಡಿ. ಜೊತೆಗೆ ಇತರ ಯಾವ ಯಾವ ಜಾಗತಿಕ ನಟರನ್ನು ಹಿಂದಿಕ್ಕಿದ್ದಾರೆ ಎಂಬುದನ್ನೂ ನೋಡಿ. 

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ತಮ್ಮ ಭಾರತೀಯ ಸಮಕಾಲೀನ ನಟರನ್ನು ಮೀರಿಸಿದ್ದು ಮಾತ್ರವಲ್ಲದೆ, ಸಂಪತ್ತಿನ ವಿಷಯದಲ್ಲಿ ಹಲವಾರು ಪ್ರಮುಖ ಹಾಲಿವುಡ್ ನಟರನ್ನೂ ಹಿಂದಿಕ್ಕಿದ್ದಾರೆ. ಇತ್ತೀಚೆಗೆ ಬ್ಯುಸಿನೆಸ್‌ ಮ್ಯಾಗಜಿನ್‌ ಒಂದು ಪ್ರಕಟಿಸಿದ ಪಟ್ಟಿಯ ಪ್ರಕಾರ, ಖಾನ್ ಜಾಗತಿಕವಾಗಿ ಟಾಪ್ 10 ಶ್ರೀಮಂತ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ, ಬ್ರಾಡ್ ಪಿಟ್, ಜಾರ್ಜ್ ಕ್ಲೂನಿ ಮತ್ತು ರಾಬರ್ಟ್ ಡಿ ನಿರೋ ಅವರಂತಹ ಘಟಾನುಘಟಿ ನಟರನ್ನೇ ಶಾರುಖ್‌ ಹಿಂದಿಕ್ಕಿದ್ದಾರೆ.

ಶಾರುಖ್ ಖಾನ್ ಅವರ ಗಳಿಕೆ ಕೇವಲ ಸಿನಿಮಾದಿಂದಲ್ಲ. ಅವರ ಸಮೃದ್ಧ ನಟನಾ ವೃತ್ತಿಜೀವನದ ಜೊತೆಗೆ, ಅವರು ಮಾಡಿದ ಜಾಣತನದ ಹೂಡಿಕೆಗಳು, ಅವರು ಪ್ರಮೋಟ್‌ ಮಾಡಿದ ಬ್ರಾಂಡ್ ಜಾಹೀರಾತುಗಳು ಮತ್ತು ಅವರು ಸ್ಥಾಪಿಸಿದ ವ್ಯಾಪಾರ ಉದ್ಯಮಗಳ ಮೂಲಕ ಅಸಾಧಾರಣ ಬಂಡವಾಳವನ್ನು ನಿರ್ಮಿಸಿದ್ದಾರೆ. ಅವರ ಹಣಕಾಸಿನ ಯಶಸ್ಸು ಮನರಂಜನೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸಾಕಷ್ಟು ದುಡಿದದ್ದರ ಪ್ರತಿಫಲ. 

ಶಾರುಖ್‌ ಆಸ್ತಿ ಮೌಲ್ಯ $ 876.5 ಮಿಲಿಯ (ಸುಮಾರು ರೂ. 7,400 ಕೋಟಿ) ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರ ಚಲನಚಿತ್ರಗಳಾದ ಪಠಾಣ್ ಮತ್ತು ಜವಾನ್‌ನ ಭಾರಿ ಯಶಸ್ಸು ಪಡೆದು ಶಾರುಖ್‌ಗೆ ಚಿನ್ನದ ಗಣಿ ಎನಿಸಿದವು. ಈ ಬ್ಲಾಕ್‌ಬಸ್ಟರ್‌ಗಳು ಒಟ್ಟಾರೆಯಾಗಿ ರೂ. 2,000 ಕೋಟಿಗೂ ಹೆಚ್ಚು ಗಳಿಸಿ, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಗಟ್ಟಿಗೊಳಿಸಿದವು.

ಖಾನ್ ಅವರ ಬ್ಯುಸಿನೆಸ್‌ಗಳು ಅವರ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿವೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಸಹ-ಮಾಲೀಕ. ಇದು ಸಾಕಷ್ಟು ಬ್ರಾಂಡ್‌ ವ್ಯಾಲ್ಯೂ ತಂದುಕೊಡುತ್ತದೆ. ಹಲವಾರು ಬಾಲಿವುಡ್ ಹಿಟ್‌ಗಳನ್ನು ನೀಡಿದ ಯಶಸ್ವಿ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಸ್ಥಾಪಿಸಿದವನು ಶಾರುಖ್.‌ ಉನ್ನತ ಶ್ರೇಣಿಯ ಹಲವು ಬ್ರ್ಯಾಂಡ್‌ಗಳೊಂದಿಗೆ ಇವನ ಜಾಹೀರಾತುಗಳು ವ್ಯಾಪಕ. ಇದು ಸಹ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತವೆ.

ಇನ್ನು ಈ ಟಾಪ್‌ ಟೆನ್‌ ನಟರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂದು ನೋಡುವುದಾದರೆ ಹೀಗಿದೆ:
ಆರ್ನಾಲ್ಡ್ ಶ್ವಾರ್ಜಿನೆಗ್ಗರ್ - $1.49 ಬಿಲಿಯನ್ (ರೂ. 12,814 ಕೋಟಿ)
ಡ್ವೇನ್ 'ದಿ ರಾಕ್' ಜಾನ್ಸನ್ - $1.19 ಬಿಲಿಯನ್ (ರೂ. 10,234 ಕೋಟಿ)
ಟಾಮ್ ಕ್ರೂಸ್ - $891 ಮಿಲಿಯನ್ (ರೂ. 7,662 ಕೋಟಿ)
ಶಾರುಖ್ ಖಾನ್ - $876.5 ಮಿಲಿಯನ್ (ರೂ. 7,400 ಕೋಟಿ)
ಜಾರ್ಜ್ ಕ್ಲೂನಿ - $742 ಮಿಲಿಯನ್ (ರೂ. 6,381 ಕೋಟಿ)
ರಾಬರ್ಟ್ ಡಿ ನಿರೋ - ರೂ. 6,321 ಕೋಟಿ
ಬ್ರಾಡ್ ಪಿಟ್ - ರೂ. 5,108 ಕೋಟಿ
ಜ್ಯಾಕ್ ನಿಕೋಲ್ಸನ್ - ರೂ. 5,074 ಕೋಟಿ
ಟಾಮ್ ಹ್ಯಾಂಕ್ಸ್ - ರೂ. 4,918 ಕೋಟಿ
ಜಾಕಿ ಚಾನ್ - ರೂ. 4,790 ಕೋಟಿ

ದೀಪಿಕಾ ಪಡುಕೋಣೆಗೆ ಇರುವಂತೆ ನಿಮ್ಮ ಕೈಯಲ್ಲಿಯೂ ಹೀಗೆ ಲೈನ್​ ಇದ್ಯಾ? ಹಾಗಿದ್ರೆ...

ಇನ್ನು ಬಾಲಿವುಡ್‌ನ ತ್ರಿಮೂರ್ತಿಗಳು- ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಒಂದೇ ಫಿಲಂನಲ್ಲಿ ನಟಿಸುವ ಕನಸಿಗೆ ಮುಹೂರ್ತ ಇಟ್ಟಾಗಿದೆ. ಇವರ ನಡುವೆ ಒಳ್ಳೆಯ ಗೆಳೆತನ ಮತ್ತು ಪರಸ್ಪರ ಗೌರವ ಇದೆ. ಈಗ ಈ ಮೂವರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 'ಸಿನಿಮಾ ಗೆದ್ದರೂ ಸರಿ, ಸೋತರೂ ಸರಿ, ಒಟ್ಟಿಗೆ ಕೆಲಸ ಮಾಡುವುದೇ ಸಂತೋಷ..' ಎಂದು ಆಮಿರ್ ಖಾನ್ ಹೇಳಿದ್ದಾರೆ. ಒಮ್ಮೆ ಈ ಮೂವರೂ ಒಂದೇ ಚಿತ್ರದಲ್ಲಿ ನಟಿಸಿದರೆ ಬಾಲಿವುಡ್ ಇತಿಹಾಸದಲ್ಲಿ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆ ಆಗಲಿದೆ. ಈ ಮೂವರನ್ನೂ ಒಂದೇ ತೆರೆಯ ಮೇಲೆ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

50ರಲ್ಲೂ ಸಿಂಗಲ್, 12 ಮಂದಿ ಜೊತೆ ಡೇಟಿಂಗ್: ಯಾರು ಆ ಇಬ್ಬರು ಮಕ್ಕಳ ನಟಿ!