ನೇರ ಹೃದಯರೇಖೆಯವರು ಶಾಂತ, ಸ್ಥಿರ, ಪ್ರಾಯೋಗಿಕ, ನಿಷ್ಠಾವಂತರು. ತಾರ್ಕಿಕ, ಚಿಂತನಶೀಲರಾಗಿ, ಹಠಾತ್‌ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕಠಿಣ ಪರಿಶ್ರಮಿಗಳು, ನಾಯಕತ್ವ, ಸೃಜನಶೀಲತೆ, ಸೇವಾ ಮನೋಭಾವ ಹೊಂದಿರುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರ ಚೀನಾ, ಭಾರತ ಮೂಲದ್ದಾಗಿದ್ದು, ಜಗತ್ತಿನಾದ್ಯಂತ ಪ್ರಚಲಿತವಾಗಿದೆ.

ಜ್ಯೋತಿಷ್ಯದ ಪ್ರಕಾರ, ಮಾನವ ಜೀವನದ ಮೇಲೆ ಪರಿಣಾಮ ಬೀರುವ ಅನೇಕ ರೀತಿಯ ರೇಖೆ ಮತ್ತು ಗುರುತುಗಳು ಅಂಗೈಯಲ್ಲಿ ಮಾಡಲ್ಪಟ್ಟಿದೆ. ವ್ಯಕ್ತಿಯ ಭವಿಷ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೈಯ ರೇಖೆಗಳು ಮತ್ತು ವಿವಿಧ ರೀತಿಯ ಚಿಹ್ನೆಗಳಿಂದ ಗುರುತಿಸಬಹುದು. ಅಂಗೈ ರೇಖೆ ನೋಡಿ ಹೇಳುವ ಭವಿಷ್ಯಕ್ಕೆ ಹಸ್ತ ಸಾಮುದ್ರಿಕ ಶಾಸ್ತ್ರ ಎಂದು ಹೇಳಲಾಗುತ್ತದೆ. ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯುತ್ತಾರೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹಸ್ತ ಸಾಮುದ್ರಿಕರು, ಹಸ್ತ ಓದುಗರು, ಕೈ ಓದುಗರು, ಹಸ್ತ ವಿಶ್ಲೇಷಕರು,ಅಥವಾ ಕೈರೊಲೊಜಿಸ್ಟ್‌ಗಳು ಎಂದು ಕರೆಯಲಾಗುತ್ತದೆ.

ಅವುಗಳಲ್ಲಿ ಒಂದು ರೇಖೆಯ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಅದು ನೇರ ಹೃದಯ ರೇಖೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಇರುವಂತೆ ನಿಮ್ಮ ಕೈಯಲ್ಲಿ ನೇರವಾಗಿ ಈ ರೇಖೆ ಇದ್ದರೆ (ಅದನ್ನು ಹೃದಯ ಸ್ಥಾನ ಎಂದು ಕರೆಯಲಾಗುತ್ತದೆ) ಅಂಥವರು, ಶಾಂತ, ಸ್ಥಿರ ಮತ್ತು ಅತ್ಯಂತ ಪ್ರಾಯೋಗಿಕರಾಗಿರುತ್ತಾರೆ. ನಿಮ್ಮನ್ನು ಮೆಚ್ಚಿಸಲು ಸಾಮಾನ್ಯವಾಗಿ ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದರೆ ಒಮ್ಮೆ ನೀವು ಯಾರೊಂದಿಗಾದರೂ ಸಂಬಂಧ ಬೆಳೆಸಿಕೊಂಡರೆ, ನೀವು ನಿಷ್ಠೆಯಲ್ಲಿ ಅತ್ಯುತ್ತಮರು ಎಂದೇ ಸಾಬೀತು ಮಾಡಬಲ್ಲಿರಿ.!

80% ಮಹಿಳೆಯರು ಸಿಂಧೂರ ತಪ್ಪಾಗಿ ಹಚ್ತಾರೆ! ಸರಿಯಾದ ವಿಧಾನ ಹೇಗೆ? ಏನಿದರ ಮಹತ್ವ?

 ಇಂಥವರ ಸ್ವಭಾವ ತಾರ್ಕಿಕ ಮತ್ತು ತರ್ಕಬದ್ಧವಾಗಿರುತ್ತದೆ. ಇಂಥ ರೇಖೆ ಇರುವವರು ಯೋಚಿಸಿ ಮತ್ತು ಅರ್ಥಮಾಡಿಕೊಂಡ ನಂತರವೇ ಎಲ್ಲವನ್ನೂ ನಿರ್ಧರಿಸುತ್ತಾರೆ, ಅವರು ಎಂದಿಗೂ ಹಠಾತ್ ಪ್ರವೃತ್ತಿಯವರಲ್ಲ. ಅವರ ವೃತ್ತಿಜೀವನದಲ್ಲಿ ಅವರು ಕಷ್ಟಪಟ್ಟು ದುಡಿಯುವವರು ಮತ್ತು ವಿಶ್ವಾಸಾರ್ಹರು. ಅದು ನಾಯಕತ್ವವಾಗಿರಲಿ, ಸೃಜನಶೀಲ ಪಾತ್ರಗಳಾಗಲಿ ಅಥವಾ ಸೇವಾ ಕೆಲಸಗಳಾಗಲಿ - ಇವು ಎಲ್ಲೆಡೆ ಹೊಂದಿಕೊಳ್ಳುತ್ತವೆ. ಇಂಥವರು ಶಾಂತರು, ಆತ್ಮವಿಶ್ವಾಸ ಮತ್ತು ಸ್ಥಿರತೆಯಿಂದ ತುಂಬಿರುವವರೂ ಆಗಿದ್ದು ನಿಜವಾದ ಮೋಡಿಗಾರರಾಗಿರುತ್ತಾರೆ. ಹಸ್ತ ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಈ ಜನರು ನಿಜವಾಗಿಯೂ ನಿಷ್ಠಾವಂತ ಮತ್ತು ತರ್ಕಬದ್ಧ ಜನರಾಗಿರುತ್ತಾರೆ.

ಇನ್ನು, ಹಸ್ತ ಸಾಮುದ್ರಿಕ ಶಾಸ್ತ್ರದ ಒಂದಿಷ್ಟು ಇತಿಹಾಸ ನೋಡುವುದಾದರೆ, ಇದರ ಮೂಲ ಚೈನೀಸ್‌ ಯೀಜಿಂಗ್. ಭಾರತದಲ್ಲಿನ ಜ್ಯೋತಿಷ್ಯಶಾಸ್ತ್ರ ಮತ್ತು ರೋಮಾ (ಜಿಪ್ಸಿ) ಎಂಬ ಹೆಸರಿನ ಕಣಿ ಹೇಳುವವರು ಸಿಗುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರವು ಭಾರತದಿಂದ ಚೀನಾ, ಟಿಬೆಟ್, ಈಜಿಪ್ಟ್, ಪರ್ಷಿಯಾ ಹಾಗೂ ಯೂರೋಪಿನ ಇತರೆ ದೇಶಗಳಿಗೆ ಹರಡಿಕೊಂಡಿದೆ. ಚೀನಾದಿಂದ ಗ್ರೀಸ್ ದೇಶಕ್ಕೆ ಬಂದ ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ಅನಾಕ್ಸಾಗೊರಸ್ ಎಂಬುವವನು ಅಭ್ಯಾಸ ಮಾಡಿದ. ಆದರೂ, ಆಧುನಿಕ ಹಸ್ತ್ರ ಸಾಮುದ್ರಿಕ ಶಾಸ್ತ್ರಜ್ಞರು ಪಾರಂಪರಿಕ ಊಹಾತಂತ್ರಗಳೊಂದಿಗೆ ಮನಃ ಶಾಸ್ತ್ರ, ಸಮಗ್ರ ಗುಣಮುಖ ವಿಧಾನ, ಮತ್ತು ಪರ್ಯಾಯ ವಿಧಾನವಾದ ಕಣಿ ಹೇಳುವುದನ್ನೂ ಸಹ ಮಿಶ್ರ ಮಾಡುತ್ತಾರೆ.

ಈ 6 ನಕ್ಷತ್ರಗಳ ಯುವತಿಯರ ಮದ್ವೆಯಾದ್ರೆ ಯಶಸ್ಸು, ಸಂಪತ್ತು ವೃದ್ಧಿ ಕಟ್ಟಿಟ್ಟದ್ದೇ!