ತೈಮೂರ್ ಹುಟ್ಟಿದಾಗ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಕಾಮೆಂಟ್ ನೋಡಿ ಬೇಸರ ಮಾಡಿಕೊಂಡ ಶರ್ಮಿಳಾ ಟ್ಯಾಗೋರ್. 

ಹಿಂದಿ ಚಿತ್ರರಂಗದ ವರ್ಸಟೈಲ್ ನಟಿ ಶರ್ಮಿಳಾ ಟ್ಯಾಗೋರ್ ಮೊದಲ ಸಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿರುವ ಕಾಮೆಂಟ್‌ಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಮೊಮ್ಮಗ ತೈಮೂರ್‌ನ ಎಷ್ಟು ಜನ ಪ್ರೀತಿ ಮಾಡುತ್ತಾರೆ ಅಷ್ಟೇ ಮಂದಿ ನೆಗೆಟಿವ್ ಕಾಮೆಂಟ್ ಮಾಡುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಪರ್ಸನಲ್ ಲೈಫ್ ಮತ್ತು ವೃತ್ತಿ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಚರ್ಚೆ ಮಾಡಿ ಕರೀನಾಗೆ ಕಾಯಿಲೆ ಬರಬೇಕು ಎಂದು ಶಾಪ ಹಾಕಿದವನನ್ನು ನೆನಪಿಸಿಕೊಂಡಿದ್ದಾರೆ. 

2012ರಲ್ಲಿ ಕರೀನಾ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಮಗ ಸೈಫ್ ಅಲಿ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2016ರಲ್ಲಿ ಮೊದಲ ಮಗ ತೈಮೂರ್‌ನ ಬರ ಮಾಡಿಕೊಂಡರು. ವಯಸ್ಸಿಗೆ ಕೇರ್ ಮಾಡದೆ ಕರೀನಾ ಮಗು ಮಾಡಿಕೊಂಡಿರುವುದಕ್ಕೆ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ದೇ ಹೆಚ್ಚು. ಅದರಲ್ಲೂ ಕರೀನಾಗೆ ಝಿಕಾ ವೈರಸ್ ಬರಬೇಕಿತ್ತು ಎಂದು ಶಾಪ ಹಾಕಿರುವು ತುಂಬಾ ಬೇಸರ ತಂದಿದೆ. 

Sharmila Tagore: ಸೈಫ್​ ಅಲಿ ಅಮ್ಮನ ಬಿಕಿನಿ ಫೋಟೋ ನೋಡಿ ಪತಿಯ ರಿಯಾಕ್ಷನ್​ ಹೇಗಿತ್ತು?

ಪಬ್ಲಿಕ್ ಫಿಗರ್ ಆಗಿ ಗುರುತಿಸಿಕೊಂಡ ಮೇಲೆ ಜನರಿಂದ ಪ್ರೀತಿ ಎಷ್ಟು ಸಿಗುತ್ತದೆ ಅಷ್ಟೇ ತೊಂದರೆ ಹಿಂಸೆ ಪ್ರೀತಿ ಸಿಗುತ್ತದೆ ಕೆಲವೊಮ್ಮೆ ಮುಜುಗರ ಉಂಟುಮಾಡುತ್ತದೆ. 'ದಯವಿಟ್ಟು ನಮಗೆ ಪರ್ಸನಲ್ ಲೈಫ್‌ಗೆ ಜಾಗ ಕೊಡಬೇಕು. ಯಾಕೆ ನಮ್ಮ ಪರ್ಸನಲ್ ಜಾಗ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತೀರಾ? ನಾವು ಮತ್ತೊಬ್ಬರ ಸಲಹೆ ಮೇಲೆ ನಿರ್ಧಾರ ತೆಗೆದುಕೊಂಡರು ಜೀವನ ನಡೆಸುವುದಕ್ಕೆ ಆಗಲ್ಲ ನಮ್ಮ ಗೋಲ್ ಮತ್ತು ಆಸೆಗಳಿಗೆ ಅಡ್ಡವಾಗುತ್ತದೆ. ಪ್ರತಿಯೊಬ್ಬರು ಹೇಳುವುದನ್ನು ಕೇಳಿಸಿಕೊಂಡು ಕೂತರ ಬರೀ ನೋವು ಮತ್ತು ಕಷ್ಟನೇ ಹೆಚ್ಚಾಗುತ್ತದೆ' ಎಂದು ಮೋಜೋ ಸ್ಟೋರಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ತೈಮೂರ್ ಹುಟ್ಟಿದ ಕ್ಷಣದಿಂದ ಸೆಲೆಬ್ರಿಟಿ ಕಿಡ್ ಆಗಿ ಗುರುತಿಸಿಕೊಂಡ. ತೈಮೂರ್ ಹೆಸರಿನಲ್ಲಿ ಹೋಟೆಲ್, ಫ್ಯಾಷನ್ ಬ್ರ್ಯಾಂಡ್ ಮತ್ತು ಗೊಂಬೆಗಳನ್ನು ಆರಂಭಿಸಿದ್ದರು. ಮಗು ತುಂಬಾ ಮುದ್ದಾಗಿದ್ದ ಕಾರಣ ಅನೇಕರು ನೆಗೆಟಿವ್ ಕಾಮೆಂಟ್ ಮಾಡಿ ಕಣ್ಣು ಹಾಕಿದ್ದೇ ಹೆಚ್ಚು. 'ನೆಗೆಟಿವ್ ಕಾಮೆಂಟ್ ಮಾಡುವವರ ವಿರುದ್ಧ ಕೋಪ ಮಾಡಿಕೊಂಡು ಉಪಯೋಗವಿಲ್ಲ. ಗೊತ್ತಿಲ್ಲದ ರೀತಿ ಎಲ್ಲನೂ ಗಮನಿಸಿ ತಲೆಯಲ್ಲಿ ಇಟ್ಟಿಕೊಳ್ಳಬೇಕು. ಸಾಮಾನ್ಯವಾಗಿ ನಾನು ಯಾವ ಕಾಮೆಂಟ್‌ನೂ ಓದುವಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ಕರೀನಾಗೆ ಝಿಕಾ ವೈರಲ್ ಬರ್ಲಿ ಎಂದು ಕಾಮೆಂಟ್ ಮಾಡಿದ್ದ. ಕರೀನಾ ಝಿಕಾ ವೈರಲ್ ಬರಬೇಕಿತ್ತು ಆಗ ಆಕೆಗೆ ತೈಮೂರ್ ಹುಟ್ಟುತ್ತಿರಲಿಲ್ಲ ಎಂದು ಕಾಮೆಂಟ್ ಹಾಕಿದ್ದಾನೆ. ಹೇಗೆ ಪರಿಚಯವೇ ಇಲ್ಲದ ವ್ಯಕ್ತಿ ಈ ರೀತಿ ನೆಗೆಟಿವ್ ಕಾಮೆಂಟ್ ಮಾಗಬಹುದು? ಒಂದು ದಿನದ ಮಗುವಿನ ಬಗ್ಗೆ ಕಾಮೆಂಟ್ ಮಾಡುವುದಕ್ಕೆ ತಾಯಿಗೆ ಕೆಡುಕು ಬಯಸುವುದಕ್ಕೆ ಹೇಗೆ ಸಾಧ್ಯ? ಎಲ್ಲಿಂದ ಈ ರೀತಿ ಯೋಚನೆಗಳು ಅವರಿಗೆ ಬರುತ್ತದೆ? ನನ್ನ ಬಗ್ಗೆ ನನಗೆ ಭಯವಿಲ್ಲ ಆದರೆ ಈ ಪ್ರಪಂಚ ಎಲ್ಲಿ ಹೋಗುತ್ತಿದೆ ಗೊತ್ತಾಗುತ್ತಿಲ್ಲ. ಯಾರು ಆ ಜನ? ಪ್ರಪಂಚದಲ್ಲಿ ಎಲ್ಲಿದ್ದಾರೆ? ಅಥವಾ ಯಾರೋ ಹೇಳಿರುವುದನ್ನು ಕಾಮೆಂಟ್ ಮಾಡುತ್ತಿದ್ದಾರಾ?' ಎಂದು ಶರ್ಮಿಳಾ ಮಾತನಾಡಿದ್ದಾರೆ.

ಒಂದು ವೇಳೆ ತಾಯಿನ ಕಳೆದು ಕೊಂಡರೂ ಪರ್ಫ್ಯೂಮ್‌ನಿಂದ ಅವಳನ್ನು ನೆನಪಿಸಿಕೊಳ್ತೀನಿ: ನಟಿ ಸೋಹಾ ಅಲಿ ಖಾನ್

ಝಿಕಾ ಕಾಯಿಲೆ ಆರಂಭವಾಗಿದ್ದು ಝಿಕಾ ವೈರಸ್‌ನಿಂದ ಇದು ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಈ ಕಾಯಿಲೆಯಿಂದ ಕೆಲವರು ಜೀವನ ಕೂಡ ಕಳೆದುಕೊಂಡಿದ್ದಾರೆ. 

2017ರಲ್ಲಿ ತೈಮೂರು ಹೆಸರು ಬದಲಾಯಿಸಬೇಕು ಎಂದು ಸೈಫ್ ಅಲಿ ಖಾನ್ ಮನಸ್ಸು ಮಾಡಿದ್ದರಂತೆ. 'ಇದುವರೆಗೂ ಯಾರೊಂದಿಗೂ ಈ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಆದರೆ ತೈಮೂರ್ ಹೆಸರು ಬದಲಾಯಿಸುವ ಮನಸ್ಸು ಮಾಡಿದ್ದೆ. ಕರೀನಾ ಬಳಿ ಹೇಳಿಕೊಂಡಾಗ ಆಕೆ ಕೂಡ ಆಸಕ್ತಿ ತೋರಿಸಿರಲಿಲ್ಲ. ನೀವು ತೆಗೆದುಕೊಂಡಿರುವ ನಿರ್ಧಾರವನ್ನು ಜನರು ಒಪ್ಪಿಕೊಂಡಿದ್ದಾರೆ ಹಾಗೂ ಅದನ್ನು ಗೌರವಿಸುತ್ತಿದ್ದಾರೆ ಇದ್ದಕ್ಕಿದ್ದಂತೆ ಹಸರು ಬದಲಾಯಿಸುವುದು ಸರಿ ಅಲ್ಲ ಎಂದು. ಆಗ ಯೋಚನೆ ಮಾಡಿದೆ ಇದು ನನ್ನ ಮಗನ ಜೀವನ ಜನರ ಮಾತುಗಳು ಪರಿಣಾಮ ಬೀರಬಾರದು' ಎಂದು ಸೈಫ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನಲ್ಲಿ ಹೇಳಿದ್ದರು.