Sharmila Tagore: ಸೈಫ್​ ಅಲಿ ಅಮ್ಮನ ಬಿಕಿನಿ ಫೋಟೋ ನೋಡಿ ಪತಿಯ ರಿಯಾಕ್ಷನ್​ ಹೇಗಿತ್ತು?

60ರ ದಶಕದಲ್ಲಿಯೇ ಬಿಕಿನಿ ಫೋಟೋಶೂಟ್​ ಮಾಡಿಸಿಕೊಂಡಿದ್ದ ನಟಿ ಶರ್ಮಿಳಾ ಟ್ಯಾಗೋರ್​ ಅದನ್ನು ತಮ್ಮ ಭಾವಿ ಪತಿ ಮನ್ಸೂರ್ ಅಲಿ ಖಾನ್​ ಅವರಿಗೆ ಕಳುಹಿಸಿದ್ದಾಗ ಅವರ ರಿಯಾಕ್ಷನ್​ ಹೇಗಿತ್ತು? 
 

Sharmila Tagore Revealed Hubby Mansoor Alis Reaction To Her Controversial Bikini Shoot

ಶರ್ಮಿಳಾ ಟ್ಯಾಗೋರ್​ (Sharmila Tagore) ಬಾಲಿವುಡ್​ ಸಿನಿಮಾ ಕಂಡ ಅಪರೂಪದ ನಟಿ. 1960ರಿಂದ 80ರ ದಶಕದವರೆಗೂ ಬಹುಬೇಡಿಕೆಯುಳ್ಳ ನಟಿ ಈಕೆ. ಬಣ್ಣದ ಲೋಕಕ್ಕೆ ಹೆಣ್ಣೊಬ್ಬಳು ಎಂಟ್ರಿ ಕೊಡುತ್ತಾಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಕಾಲವದು. ಆಗ ಮೈಕೈ ತೋರಿಸುವುದಕ್ಕಾಗಿಯೇ ಸೈಡ್​ ಆ್ಯಕ್ಟ್ರೆಸ್​ಗಳನ್ನು ಸಿನಿಮಾಗಳಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಅವರು ಕೂಡ ಮೈ ಕೈಯನ್ನು ತೋರಿಸದೇ ಮೈ ಬಣ್ಣದ ಒಳಉಡುಪು ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಬಿಡಿ. ಪೈಪೋಟಿಗೆ ಬಿದ್ದವರಂತೆ ನಟಿಯರು ಅಂಗಾಂಗ ಪ್ರದರ್ಶನ ಮಾಡುತ್ತಾರೆ. ಮುಕ್ಕಾಲಕ್ಕಿಂತ ಹೆಚ್ಚು ಭಾಗದ ದೇಹ ಪ್ರದರ್ಶನ ಮಾಡುವಲ್ಲಿ ಇಂದಿನ ಬಹುತೇಕ ನಟಿಯರು ಹಿಂದೆ ಬಿದ್ದಿಲ್ಲ.  ಆದರೆ ನಟನೆಗೆ ಬರುವುದೇ ಸವಾಲು ಎಂಬಂತಿದ್ದ 60-70ರ ದಶಕದಲ್ಲಿಯೇ ಬಿಕಿನಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದ ನಟಿ ಶರ್ಮಿಳಾ ಟ್ಯಾಗೋರ್​.  ಹೌದು. ಶರ್ಮಿಳಾ ಟ್ಯಾಗೋರ್​ 1966ರಲ್ಲಿ ಬಿಕಿನಿ (Bikini) ಡ್ರೆಸ್​ ಹಾಕಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆದರೆ ಇದು ಚಿತ್ರಕ್ಕಾಗಿ ಅಲ್ಲ. ಬದಲಿಗೆ  ಮ್ಯಾಗ್‌ಝೀನ್‌ ಮುಖಪುಟದಲ್ಲಿ ಕಾಣಿಸಿಕೊಳ್ಳಲು. ಈ ರೀತಿಯ ಪೋಸ್​ ಕೊಡಲು ಒಪ್ಪಿಕೊಂಡಿದ್ದರು ಶರ್ಮಿಳಾ. ಅದು ಯಾಕೆ ಒಪ್ಪಿಕೊಂಡೆ ಎಂದು ತಮಗೆ ಇನ್ನೂ ಗೊತ್ತಾಗುತ್ತಿಲ್ಲ ಎಂದಿರುವ ಶರ್ಮಿಳಾ ಟ್ಯಾಗೋರ್​, ಆ ಪ್ರಸಂಗದ ಕುರಿತು ಈಗ ಮಾತನಾಡಿದ್ದಾರೆ. ಆಗ 22 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಏನಾದರೂ ಸಾಧನೆ ಮಾಡುವ ಹುಚ್ಚು ಮನಸ್ಸು ಇತ್ತು. ಅದಕ್ಕಾಗಿಯೇ ಹೀಗೆ ಮಾಡಿದೆನೋ ಗೊತ್ತಿಲ್ಲ ಎಂದಿರುವ ಶರ್ಮಿಳಾ ಟ್ಯಾಗೋರ್​, ಬಿಕಿನಿ ಡ್ರೆಸ್​ ತೋರಿಸಿ ನಿಜಕ್ಕೂ ನೀನು ಇದನ್ನು ಹಾಕಿಕೊಳ್ಳುತ್ತಿಯಾ ಎಂದು ಫೋಟೋಗ್ರಾಫರೇ ಪ್ರಶ್ನೆ ಕೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೂ ಹುಚ್ಚು ಸಾಹಸ ಮಾಡಿ ಅದನ್ನು ಹಾಕಿಸಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದೆ ಎಂದಿದ್ದಾರೆ. 

ಅಂದಹಾಗೆ ಎಲ್ಲರಿಗೂ ತಿಳಿದಿರುವಂತೆ ಶರ್ಮಿಳಾ ಅವರ ಪತಿ ಮಾನ್ಸೂರ್ ಅಲಿ ಖಾನ್‌ (Mansoor Ali Khan). ಇವರ ಪುತ್ರ ಸೈಫ್​ ಅಲಿ ಖಾನ್​. ಸೈಫ್​ ಪತ್ನಿ ಕರೀನಾ ಕಪೂರ್​ ಇದಾಗಲೇ ಬಹುತೇಕ ಚಿತ್ರಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡದ್ದಿದೆ. ಈಗಿನ ನಟಿಯರಿಗೆ ಪತಿಯಂದಿರಿಗೆ ಇದು ಒಪ್ಪಿತವಾದ್ದರಿಂದ ಹೆಚ್ಚಿನ ಸಮಸ್ಯೆ ಆಗಲಾರದು. ಆದರೆ ಕರೀನಾ ಕಪೂರ್​ ಅತ್ತೆ ಶರ್ಮಿಳಾ ಟ್ಯಾಗೋರ್​ ಬಿಕಿನಿಯಲ್ಲಿ ಅಂದಿನ ಕಾಲದಲ್ಲಿ ಕಾಣಿಸಿಕೊಂಡಿದ್ದಾಗ ಅವರ ಪತಿಯ ರಿಯಾಕ್ಷನ್​ ಹೇಗಿದ್ದಿರಬಹುದು ಎಂದು ಊಹಿಸಲು ಕಷ್ಟವಾದೀತು. ಮದುವೆಗೂ ಮುನ್ನ ಬಿಕಿನಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾಗ ಭಾವಿ ಪತಿಗೆ ಕಳುಹಿಸಿದ್ದ ಕುರಿತು  ನಟಿ ಶರ್ಮಿಳಾ ಮನಬಿಚ್ಚಿ ಮಾತನಾಡಿದ್ದಾರೆ. 

ಕರೀನಾ ಕೆಲಸಕ್ಕೆ ಹೋಗಲಿ ಎಂದ ಸೈಫ್​ ಅಲಿ- ಅಮ್ಮ ಶರ್ಮಿಳಾ ಟ್ಯಾಗೋರ್​ ಹೇಳಿದ್ದೇನು?

ಬಿಕಿನಿ ಡ್ರೆಸ್​ನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಇವರಿಬ್ಬರ ಮದುವೆ ಫಿಕ್ಸ್​ ಆಗಿತ್ತಷ್ಟೇ. ಶರ್ಮಿಳಾ ಟ್ಯಾಗೋರ್​ ಬಿಕಿನಿ  ಫೋಟೋಶೂಟ್​ಗೆ (Photoshoot) ಮೊದಲು ಒಪ್ಪಿಕೊಂಡಿರಲಿಲ್ಲ. ಆದರೂ ಕೊನೆಗೆ ಒಪ್ಪಿಕೊಂಡು  ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಆದರೆ ಇದನ್ನು ತಮ್ಮ ಭಾವಿ ಪತಿ ಮಾನ್ಸೂರ್ ಅಲಿ ಖಾನ್‌ ಅವರಿಗೆ ಕಳುಹಿಸುವುದು ಹೇಗೆ ಎಂದು ಶರ್ಮಿಳಾ ಭಯಪಟ್ಟಿದ್ದರಂತೆ. ಈ ಕುರಿತು ಮಾತನಾಡಿದ ಅವರು, 'ನನಗೆ ಈ ಬಗ್ಗೆ ಭಯವಿತ್ತು. ಆದರೂ ಟೆಲಿಗ್ರಾಮ್‌ನಲ್ಲಿ  ಮಾನ್ಸೂರ್ ಅವರಿಗೆ ಬಿಕಿನಿ ಫೋಟೋಗಳನ್ನು  ಕಳಿಸಿದ್ದೆ. ಆ ಸಮಯದಲ್ಲಿ ಅವರು  ಟ್ರಾವೆಲ್ ಮಾಡುತ್ತಿದ್ದರು. ಆದರೆ ಫೋಟೋ ನೋಡಿದ ತಕ್ಷಣ ಅವರು  ನೀನು ತುಂಬ ಚೆನ್ನಾಗಿ ಕಾಣಿಸುತ್ತಿದ್ದೀಯಾ ಎಂದುಬಿಟ್ಟರು. ನನಗಂತೂ ಹೇಳತೀರದಷ್ಟು ಖುಷಿಯಾಯಿತು. ಅವರಿಂದ  ನನಗೆ ದೊಡ್ಡ ಬೆಂಬಲ ಸಿಕ್ಕಹಾಗಾಯಿತು' ಎಂದಿದ್ದಾರೆ.
 
ಆದರೆ ಈ ಫೋಟೋ ನೋಡಿದ ಅನೇಕರು ತಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೂ ಇದೆ ಎಂದಿದ್ದಾರೆ ನಟಿ. ಇದು  ವಿಲಕ್ಷಣ ಎಂತಲೂ,  ಗಮನಸೆಳೆಯುವ ತಂತ್ರ ಎಂತಲೂ, ಅಸಹ್ಯ ಎಂತಲೂ ಕರೆದವರಿದ್ದಾರೆ. ಆದರೆ ನಾನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಮನ್ಸೂರ್​ ಅವರು ಗ್ರೀನ್​ ಸಿಗ್ನಲ್​ (green signal) ಕೊಟ್ಟಿದ್ದಕ್ಕೆ ತುಂಬಾ ಸಂತೋಷವಿದೆ ಎಂದಿದ್ದಾರೆ. ಅಂದಹಾಗೆ ಮಾನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದವರು. ಶರ್ಮಿಳಾ ಹಾಗೂ ಮಾನ್ಸೂನ್ ಅವರು  1968ಯಲ್ಲಿ ಮದುವೆಯಾದರು. ಇವರಿಗೆ ಸೈಫ್ ಅಲಿ ಖಾನ್, ಸಬಾ ಅಲಿ ಖಾನ್, ಸೋಹಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ.

ಮನೆ ಬಾಡಿಗೆ ಕಟ್ಟಲು ಸಿನಿಮಾ ಮಾಡುತ್ತಿದ್ದೆ; ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್

Latest Videos
Follow Us:
Download App:
  • android
  • ios