ಒಂದು ವೇಳೆ ತಾಯಿನ ಕಳೆದು ಕೊಂಡರೂ ಪರ್ಫ್ಯೂಮ್‌ನಿಂದ ಅವಳನ್ನು ನೆನಪಿಸಿಕೊಳ್ತೀನಿ: ನಟಿ ಸೋಹಾ ಅಲಿ ಖಾನ್
ತಾಯಿ ಆದ ಮೇಲೆ ತಾಯಿ ಪ್ರೀತಿ ಏನೆಂದು ಅರ್ಥವಾಗುತ್ತದೆ ಎಂದು ನಟಿ ಸೋಹಾ ಅಲಿ ಖಾನ್ ಮೊದಲ ಸಲ ಮದರ್ ಹಗ್ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಇಬ್ಬರೂ ಮಕ್ಕಳು ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಬಿ-ಟೌನ್‌ನಲ್ಲಿ ಒಳ್ಳೆ ನೆಲೆ ಕಂಡುಕೊಂಡಿದ್ದಾರೆ.
2014ರಲ್ಲಿ ನಟ ಕುನಾಲ್ ಖೇಮು ಜೊತೆ ಸೋಹಾ ಎಂಜೇಗ್ ಆಗುತ್ತಾರೆ, 2015ರಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. 2017ರಲ್ಲಿ ಪುತ್ರಿ ಇನಾಯನ ಬರ ಮಾಡಿಕೊಳ್ಳುತ್ತಾರೆ.
ತಾಯಿ ಅದ ಮೇಲೆ ತಾಯಿ ಪ್ರೀತಿ ಅರ್ಥವಾಗುವುದು ಎನ್ನುವ ಮಾತು ಸತ್ಯ ಎಂದಿದ್ದಾರೆ. ಅಲ್ಲದೆ ತಾಯಿಗೆಯನ್ನು ತಬ್ಬಿಕೊಂಡರೆ ದೇಹದಲ್ಲಿ ಹ್ಯಾಪಿ ಹಾರ್ಮೋನ್ ರಿಲೀಸ್ ಆಗುತ್ತದೆ ಎಂದು ಅಧ್ಯಾಯನಗಳಲ್ಲಿ ಹೇಳಲಾಗಿದೆ. ಈ ವಿಚಾರದ ಬಗ್ಗೆ ಸೋಹಾ ಚರ್ಚೆ ಮಾಡಿದ್ದಾರೆ.
'ಜೀವನದಲ್ಲಿ ತುಂಬಾ ಮುಖ್ಯವಾದ ವ್ಯಕ್ತಿಯನ್ನ ಕಳೆದುಕೊಂಡಾಗ ಮತ್ತೊಬ್ಬರಿಗೆ ತುಂಬಾ ಕ್ಲೋಸ್ ಅಗುತ್ತೀವಿ. ನನ್ನ ತಂದೆಯನ್ನು ಕಳೆದುಕೊಂಡಾಗ ಬದಲಾವಣೆ ಕಂಡೆ. ಸಂಬಂಧದಲ್ಲಿ ಸಮಯ ತುಂಬಾ ಮುಖ್ಯವಾಗುತ್ತದೆ, ಸಮಯ ಮುಂದೆ ಸಾಗಿದರೆ ಆ ಕ್ಷಣ ಮತ್ತೆ ಸಿಗುವುದಿಲ್ಲ ಎಂದು ಫಾಯೆ ಡಿಸೋಜ ಸಂದರ್ಶನಲ್ಲಿ ಮಾತನಾಡಿದ್ದಾರೆ.
'ಎಷ್ಟೇ ಬ್ಯುಸಿ ಇದ್ದರೂ ನಾನು ಸಮಯ ಮಾಡಿಕೊಳ್ಳುವೆ. ನಾನು ತಾಯಿ ಆದ ಸಮಯದಲ್ಲಿ ನನ್ನ ತಾಯಿಯನ್ನು ನಿರ್ಲಕ್ಷ್ಯ ಮಾಡಿದೆ ಏಕೆಂದರೆ ನನ್ನ ಮಗಳು ನನ್ನ ಮಗಳು ಎನ್ನುತ್ತಿದ್ದೆ'
'ಮಗಳಿಗೆ ಎರಡು ಮೂರು ವರ್ಷ ಅಗುತ್ತಿದ್ದಂತೆ ನನ್ನ ತಾಯಿ ಜೊತೆ ಕಳೆದ ಕ್ಷಣಗಳು ಹೆಚ್ಚಿಗೆ ನೆನಪು ಅಯ್ತು. ಆಗಾಗ ಸಣ್ಣ ಪುಟ್ಟ ವಿಚಾರಗಳ ಬಗ್ಗೆನೂ ಚರ್ಚೆ ಮಾಡುತ್ತಿದ್ದೆ'
'ನಾನು ನನ್ನ ತಾಯಿ ಜೊತೆಗಿರಬೇಕು ನನ್ನ ತಾಯಿ ಅವರ ಮೊಮ್ಮಗಳ ಜೊತೆಗಿರಬೇಕು. ಒಂದಲ್ಲಾ ಒಂದು ದಿನ ವ್ಯಕ್ತಿಯನ್ನು ಕಳೆದುಕೊಳ್ಳುತ್ತಿವಿ ಆಗ ಮಾಡಿಲ್ಲ ಅನ್ನೋ ನೋವು ಇರಬಾರದು ಎಂದು ಈಗ ಅಕೆ ಜೊತ್ತೆ ತುಂಬಾ ಕ್ಲೋಸ್ ಅಗಿರುವೆ. ನನ್ನ ಭಾವನೆಗಳನ್ನು ಹೆಚ್ಚಿಗೆ ಹೊರ ಹಾಕುವುದಿಲ್ಲ ಕಂಟ್ರೋಲ್ ಮಾಡುವೆ ಆದರೆ ತಾಯಿಯನ್ನು ತಬ್ಬಿಕೊಳ್ಳುವುದು ಎಂದು ಮುಖ್ಯ ಎಂದು ನನಗೆ ಅರ್ಥವಾಗಿದೆ.'
'17 ವರ್ಷದ ಹುಡುಗಿ ಇದ್ದಾಗ ನಾನು ವಿದ್ಯಾಭ್ಯಾಸಕ್ಕೆಂದು ಹೊರ ಬಂದೆ ಆನಂತರ ಮದುವೆ ಆಗಿ ಈಗ ಗಂಡನ ಮನೆಯಲ್ಲಿರುವ ಹೀಗಾಗಿ ಪದೇ ಪದೇ ತಬ್ಬಿಕೊಳ್ಳುವ ಕಾನ್ಸೆಪ್ಟ್ ನಮ್ಮ ಫ್ಯಾಮಿಲಿಯಲ್ಲಿ ಇಲ್ಲ. ಹೀಗಾಗಿ ಒಟ್ಟಿಗೆ ಭೇಟಿ ಮಾಡಿದರೆ ನಾನ್ ಸ್ಟಾಪ್ ಮಾತನಾಡುತ್ತೀವಿ.
'ಅಮ್ಮ ತಮ್ಮ ಜೀವನ ಪೂರ್ತಿ ಒಂದೇ ಪರ್ಫ್ಯೂಮ್ ಬಳಸುವುದು ಹೀಗಾಗಿ ಆ ಪರ್ಫ್ಯೂಮ್ ವಾಸನೆ ತೆಗೆದುಕೊಂಡರೆ ಮೊದಲು ಆಕೆನೇ ನೆನಪಾಗುವುದು. ಮನಸ್ಸಾರೆ ನಮಗೆ ಖುಷಿ ಆದಾಗ ದೇಹದಲ್ಲಿ ಹಾರ್ಮೋನ್ ರಿಲೀಸ್ ಆಗುತ್ತದೆ ಆಗ ನಮ್ಮಲ್ಲಿ ಬದಲಾವಣೆಗಳನ್ನು ನಾವು ಕಾಣಬಹುದು' ಎಂದು ಹೇಳಿದ್ದಾರೆ.