ಶಾರುಖ್​ ಖಾನ್​ ಅವರು ತಮ್ಮ ಚಿತ್ರದ ಟಿಕೆಟನ್ನು ತಾವೇ ಖರೀದಿಸುತ್ತಾರೆ ಹೌದಾ ಎಂದು ನಟನಿಗೆ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದು, ಅದಕ್ಕೆ ಅವರು ಹೇಳಿದ್ದೇನು? 

ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan) ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇದಾಗಲೇ ಇದರ ಪ್ರಿವ್ಯೂ ಕೂಡ ಬಿಡುಗಡೆಯಾಗಿದೆ. ಜವಾನ್ ಪ್ರಿವ್ಯೂ 20 ಗಂಟೆಯಲ್ಲಿ 4 ಕೋಟಿ ಬಾರಿ ವೀಕ್ಷಣೆ ಕಂಡು ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಆಗಿ ಹೊರಹೊಮ್ಮಿದೆ. ಶಾರುಖಾನ್ ಜೊತೆ ನಯನತಾರ , ದೀಪಿಕಾ, ವಿಜಯ್​ ಸೇತುಪತಿ ಸಹಕಲಾವಿದರಾಗಿ ನಟಿಸಿದ್ದಾರೆ. ತಮಿಳು ನಟ ಅಟ್ಲಿ ಜವಾನ್ ನಿರ್ದೇಶನ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್​ ಕೆಲ ತಿಂಗಳಿನಿಂದ ತಮ್ಮ ಟ್ವಿಟರ್​ (Twitter) ಖಾತೆಯಲ್ಲಿ ಫ್ಯಾನ್ಸ್​ ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳ ಪೈಕಿ ಹಲವಕ್ಕೆ ಉತ್ತರ ಕೊಡುತ್ತಿದ್ದಾರೆ. #AskSRK ಎಂಬ ಪ್ರಶ್ನೋತ್ತರ ಸೆಷನ್ ಇದಾಗಿದೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿರುವ ಸಂಭ್ರಮದಲ್ಲಿ ಈ ಒಂದು ಸೆಷನ್​ ಶುರು ಮಾಡಿದ್ದು, ಇದಾಗಲೇ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವುಗಳ ಪೈಕಿ ಹಲವು ಹಾಸ್ಯಭರಿತ ಉತ್ತರಗಳಿಂದ ಕೂಡಿದ್ದರೆ, ಕೆಲವು ಮಾತ್ರ ಸ್ವಲ್ಪ ಗರಂ ಆಗಿದೆ ಉತ್ತರಿಸುತ್ತಿದ್ದಾರೆ.

JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ಖಡಕ್​ ವಾರ್ನಿಂಗ್​!

ಈಗ ಸ್ವಲ್ಪ ಗಂಭೀರ ಎನ್ನುವ ಪ್ರಶ್ನೆಯೊಂದು ಶಾರುಖ್​ಗೆ ಎದುರಾಗಿದ್ದು, ಅಷ್ಟೇ ಗಂಭೀರವಾಗಿಯೇ ಕಿಂಗ್​ ಖಾನ್​ ಆ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ನೆಟ್ಟಿಗರೊಬ್ಬರು ಶಾರುಖ್​ಗೆ ‘ನಿಮ್ಮ ಸಿನಿಮಾದ ಟಿಕೆಟ್​ ಅನ್ನು ನೀವೇ ಖರೀದಿ ಮಾಡುತ್ತೀರಂತೆ ಹೌದಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್​ ಖಾನ್​ ಅವರು ಅಷ್ಟೇ ಗಂಭೀರವಾಗಿ ಹಾಗೂ ಅಷ್ಟೇ ಕೂಲ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಕೆಲಸಕ್ಕೆ ನೀವೇ ಸಂಬಳ ಕೊಟ್ಟುಕೊಳ್ಳುತ್ತೀರಾ’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಹೀಗೆ ಪ್ರಶ್ನೆಗೆ ಪ್ರಶ್ನೆ ಕೇಳುವ ಮೂಲಕ ಕೇಳುಗನ ಬಾಯಿ ಮುಚ್ಚಿಸಿದ್ದಾರೆ. ಇದಕ್ಕೆ ಹಲವರು ಗ್ರೇಟ್​ ರಿಪ್ಲೈ ಎಂದು ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಮಹಿಳೆಯೊಬ್ಬರು ಶಾರುಖ್​ಗೆ ಸದ್ಯದಲ್ಲೇ ಹುಟ್ಟಲಿರುವ ತಮ್ಮ ಅವಳಿ ಗಂಡು ಮಕ್ಕಳಿಗೆ ‘ಪಠಾಣ್ ಮತ್ತು ‘ಜವಾನ್’ (Pathaan and Jawan) ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ. ಇದಕ್ಕೆ ನೀವೇನೆನ್ನುತ್ತೀರಾ ಎಂದು ಮಹಿಳೆಯೊಬರಬು ಕೇಳಿದ್ದರು. ಅದಕ್ಕೆ ನಟ ಶಾರುಖ್​, ‘ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಟ್ಟರೆ ಒಳ್ಳೆಯದು ಎಂದು ಹೇಳಿದ್ದರು. ಈ ಪ್ರಶ್ನೆಗೆ ಶಾರುಖ್​ ತಮಾಷೆಯ ಉತ್ತರ ಕೊಡಬಹುದಿತ್ತು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ಆದರೆ ಉತ್ತರ ಸಿಂಪಲ್​ ಆಗಿದ್ದರೂ ಮಹಿಳೆ ಕೇಳಿದ ತಮಾಷೆಯ ಪ್ರಶ್ನೆ ಮಾತ್ರ ಸಕತ್​ ಸೌಂಡ್​ ಮಾಡುತ್ತಿದೆ. 

ಇದರ ನಡುವೆಯೇ, ಶಾರುಖ್ ಲುಕ್ ಮೇಲೆ ಕದ್ದ ಆರೋಪ ಎದುರಾಗಿದೆ. ‘ಜವಾನ್’ ಪ್ರಿವ್ಯೂನಲ್ಲಿ ಮಗುವನ್ನು ಎತ್ತಿಕೊಳ್ಳುವ ದೃಶ್ಯವೊಂದು ಬರುತ್ತದೆ. ಇದನ್ನು ಅನೇಕರು ‘ಬಾಹುಬಲಿ 2’ ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ. ಶಾರುಖ್ ಖಾನ್ (Shah Rukh Khan) ಅವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವ ಮಾದರಿಯ ದೃಶ್ಯ ಒಂದು ಬರುತ್ತದೆ. ಇದನ್ನು, ವಿಕ್ರಮ್ ನಟನೆಯ ‘ಅಪರಿಚಿತ್’ ಚಿತ್ರಕ್ಕೆ ಕಂಪ್ಯಾರ್ ಮಾಡಲಾಗಿದೆ. ಶಾರುಖ್ ಖಾನ್ ಅವರು ತಲೆಯ ಮೇಲೆ ಸಂಪೂರ್ಣವಾಗಿ ಕೂದಲು ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಇದನ್ನು ‘ಶಿವಾಜಿ’ ಚಿತ್ರದಲ್ಲಿ ಬರುವ ರಜನಿಕಾಂತ್ ಪಾತ್ರಕ್ಕೆ ಹೋಲಿಕೆ ಮಾಡಲಾಗಿದೆ. ಶಾರುಖ್ ಖಾನ್ ಅವರು ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಇದನ್ನು ‘ಡಾರ್ಕ್ ಮ್ಯಾನ್’ ಚಿತ್ರಕ್ಕೆ ಹೋಲಿಸಲಾಗಿದೆ. 

ಅವಳಿ ಮಕ್ಕಳಿಗೆ ಪಠಾಣ್​, ಜವಾನ್​ ಎಂದು ಹೆಸರಿಡ್ಲಾ ಎಂದ ಮಹಿಳೆಗೆ ಶಾರುಖ್​ ಉತ್ತರ!