JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ಖಡಕ್​ ವಾರ್ನಿಂಗ್​!

ಜವಾನ್​ ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ವಾರ್ನಿಂಗ್​ ಮಾಡಿದ್ದು, ಅದೀಗ ಸಕತ್​ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ಕೊಟ್ಟ ಎಚ್ಚರಿಕೆ ಏನು? 
 

Shah Rukh Khan WARN Vignesh Shivan about wife Nayanthara suc

ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan)  ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇದಾಗಲೇ ಇದರ ಪ್ರಿವ್ಯೂ ಕೂಡ ಬಿಡುಗಡೆಯಾಗಿದೆ. ಜವಾನ್ ಪ್ರಿವ್ಯೂ 20 ಗಂಟೆಯಲ್ಲಿ 4 ಕೋಟಿ ಬಾರಿ ವೀಕ್ಷಣೆ ಕಂಡು ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಆಗಿ ಹೊರಹೊಮ್ಮಿದೆ. ಶಾರುಖಾನ್ ಜೊತೆ ನಯನತಾರ , ದೀಪಿಕಾ, ವಿಜಯ್ಸೇತುಪತಿ ಸಹಕಲಾವಿದರಾಗಿ ನಟಿಸಿದ್ದಾರೆ. ತಮಿಳು ನಟ ಅಟ್ಲಿ ಜವಾನ್ ನಿರ್ದೇಶನ ಮಾಡಿದ್ದಾರೆ. 

ಈ ಚಿತ್ರದ ಮೂಲಕ ನಯನತಾರಾ ಶಾರುಖ್ ಖಾನ್ ಜೊತೆ ಮೊದಲ ಬಾಲಿವುಡ್ ಮೂವಿಗೆ ಎಂಟ್ರಿ ಕೊಟ್ಟ ಹಾಗಾಗಿದೆ.  ಆದರೆ ಇದರ ನಡುವೆಯೇ ಬಿಸಿಬಿಸಿ ಚರ್ಚೆಯೊಂದು ಶುರುವಾಗಿದ್ದು, ಅದೇನೆಂದರೆ,  ಶಾರುಖ್ ನಯನತಾರಾ ಪತಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನುವುದು! ಹೌದು.  ಇತ್ತೀಚೆಗೆ ಶಾರುಖ್ ಖಾನ್ ನಯನತಾರಾ ಪತಿಗೆ ವಾರ್ನಿಂಗ್ ಕೊಟ್ಟಿರೋ ಸುದ್ದಿಯೊಂದು ಸಕತ್​  ವೈರಲ್ ಆಗಿದೆ. ನಟಿ ನಯನತಾರಾ ಪತಿ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಶಾರುಖ್ ಖಾನ್ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಅದು.

ಅವಳಿ ಮಕ್ಕಳಿಗೆ ಪಠಾಣ್​, ಜವಾನ್​ ಎಂದು ಹೆಸರಿಡ್ಲಾ ಎಂದ ಮಹಿಳೆಗೆ ಶಾರುಖ್​ ಉತ್ತರ!

ಹಾಗಿದ್ದರೆ ಆಗಿದ್ದೇನು ಎಂದು ಕುತೂಹಲವೆ?  ಅಂಥದ್ದೇನೂ ನೆಗೆಟಿವ್​ ಘಟನೆ ಸಂಭವಿಸಿಲ್ಲ. ಅಸಲಿಗೆ ಇದು ತಮಾಷೆಗೆ ಎಚ್ಚರಿಕೆ ಅಷ್ಟೇ. ವಿಘ್ನೇಶ್ ಶಿವನ್ (Vighnesh Shivan) ಅವರು ಜವಾನ್ ಪ್ರಿವ್ಯೂ ರಿಲೀಸ್ ಆದಾಗ ನಿರ್ದೇಶಕ ಅಟ್ಲಿಗೆ ಶುಭಾಶಯ ತಿಳಿಸಿದ್ದರು. ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿದ ಅವರು, ಇದು ಅಂತಾರಾಷ್ಟ್ರೀಯ ಹಿಟ್ ಸಿನಿಮಾದಂತೆ ಕಾಣುತ್ತದೆ. ಇದಕ್ಕಾಗಿ ತುಂಬಾ ತಾಳ್ಮೆ ವಹಿಸಿ ಕಷ್ಟಪಟ್ಟು ಕೆಲಸ ಮಾಡಿದ್ದೀರಿ, ಬಿಗ್ ಹಗ್ ಎಂದು ಅಟ್ಲಿಯನ್ನು ಟ್ಯಾಗ್ ಮಾಡಿದ್ದರು. ನಂತರ ಪತ್ನಿ ನಯನತಾರಾರನ್ನೂ ಹೊಗಳಿದ್ದ ವಿಘ್ನೇಶ್​,  ನಯನತಾರಾ ಕಂಗ್ರಾಟ್ಸ್, ಕಿಂಗ್ ಖಾನ್ ಜೊತೆ ಕನಸಿನ ಮೊದಲ ಪ್ರಾಜೆಕ್ಟ್ ಮಾಡಿದ್ದೀರಿ. ತಂಡಕ್ಕೆ ಶುಭಾಶಯ' ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ಕೊಡುವಾಗ ಶಾರುಖ್​ ಸಣ್ಣ ವಾರ್ನಿಂಗ್ ಕೊಟ್ಟಿದ್ದಾರೆ. ಅದೇನೆಂದರೆ,  ಮೊದಲಿಗೆ  ವಿಘ್ನೇಶ್ ಶಿವನ್ ಅವರಿಗೆ ಥ್ಯಾಂಕ್ಯೂ ಹೇಳಿದ ನಟ ಶಾರುಖ್​,  ನಿಮ್ಮ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅವರು ಅದ್ಭುತ. ಅದನ್ನು ಹೇಳೋಕೆ ನಾನು ಯಾರು. ನಿಮಗೆ ಅದು ಮೊದಲೇ ಗೊತ್ತಿದೆಯಲ್ಲವೇ ಎನ್ನುವ ಮೂಲಕ ಚಿಕ್ಕ ವಾರ್ನಿಂಗ್​ ಕೊಟ್ಟಿದ್ದಾರೆ. ಅದೇನೆಂದರೆ, ನಯನತಾರಾ ಅವರ ಪತಿಯಾಗಿ ನೀವು ಹುಷಾರಾಗಿರಿ. ಅವರು ಕೆಲವು ಕಿಕ್ ಹಾಗೂ ಪಂಚ್ ಕಲಿತಿದ್ದಾರೆ ಎಂದು ತಮಾಷೆಯ ಪ್ರತಿಕ್ರಿಯೆ ಮಾಡಿದ್ದಾರೆ.  ಏಕೆಂದರೆ, ಜವಾನ್​ ಚಿತ್ರದಲ್ಲಿ ನಯನತಾರಾ ಫೈಟಿಂಗ್ ಗರ್ಲ್ ಆಗಿ ಕಾಣಿಸಿದ್ದು ಅವರ ಡ್ರೀಮಿ ಲುಕ್ ನಯನ್ ಫ್ಯಾನ್ಸ್​ಗೆ ಭಾರೀ ಇಷ್ಟವಾಗಿದೆ. ಇದರ ನಡುವೆಯೇ ಶಾರುಖ್ ಲುಕ್ ಮೇಲೆ ಕದ್ದ ಆರೋಪ ಎದುರಾಗಿದೆ.  ‘ಜವಾನ್’ ಪ್ರಿವ್ಯೂನಲ್ಲಿ ಮಗುವನ್ನು ಎತ್ತಿಕೊಳ್ಳುವ ದೃಶ್ಯವೊಂದು ಬರುತ್ತದೆ. ಇದನ್ನು ಅನೇಕರು ‘ಬಾಹುಬಲಿ 2’ ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ. ಶಾರುಖ್ ಖಾನ್ (Shah Rukh Khan) ಅವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವ ಮಾದರಿಯ ದೃಶ್ಯ ಒಂದು ಬರುತ್ತದೆ. ಇದನ್ನು, ವಿಕ್ರಮ್ ನಟನೆಯ ‘ಅಪರಿಚಿತ್’ ಚಿತ್ರಕ್ಕೆ ಕಂಪ್ಯಾರ್ ಮಾಡಲಾಗಿದೆ. ಶಾರುಖ್ ಖಾನ್ ಅವರು ತಲೆಯ ಮೇಲೆ ಸಂಪೂರ್ಣವಾಗಿ ಕೂದಲು ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಇದನ್ನು ‘ಶಿವಾಜಿ’ ಚಿತ್ರದಲ್ಲಿ ಬರುವ ರಜನಿಕಾಂತ್ ಪಾತ್ರಕ್ಕೆ ಹೋಲಿಕೆ ಮಾಡಲಾಗಿದೆ. ಶಾರುಖ್ ಖಾನ್ ಅವರು ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಇದನ್ನು ‘ಡಾರ್ಕ್ ಮ್ಯಾನ್’ ಚಿತ್ರಕ್ಕೆ ಹೋಲಿಸಲಾಗಿದೆ. 
'ಜವಾನ್​' ಫಸ್ಟ್​ ಲುಕ್​ ಲೀಕ್​? ನಯನತಾರಾ ಮಚ್ಚೆ ಮಾಯದ ಗುಟ್ಟು ರಟ್ಟಾಯ್ತು

Latest Videos
Follow Us:
Download App:
  • android
  • ios