Asianet Suvarna News Asianet Suvarna News

ಅವಳಿ ಮಕ್ಕಳಿಗೆ ಪಠಾಣ್​, ಜವಾನ್​ ಎಂದು ಹೆಸರಿಡ್ಲಾ ಎಂದ ಮಹಿಳೆಗೆ ಶಾರುಖ್​ ಉತ್ತರ!

ಪಠಾಣ್​ ಭರ್ಜರಿ ಯಶಸ್ಸಿನ ಬಳಿಕ ಜವಾನ್​ನತ್ತ ಚಿತ್ತ ನೆಟ್ಟಿದ್ದಾರೆ ಶಾರುಖ್​ ಫ್ಯಾನ್ಸ್​. ಇದರ ನಡುವೆಯೇ ಮಹಿಳೆಯೊಬ್ಬರು ತಮ್ಮ ಮಕ್ಕಳ ಹೆಸರಿನ ಬಗ್ಗೆ ಶಾರುಖ್​ಗೆ ಪ್ರಶ್ನಿಸಿದ್ದು, ಅದೀಗ ಸಕತ್​ ಸೌಂಡ್​ ಮಾಡುತ್ತಿದೆ. 

Woman asked ShahRukh about  her children name as Pathaan and Jawaan suc
Author
First Published Jul 10, 2023, 4:51 PM IST

 ‘ಪಠಾಣ್​’ ಚಿತ್ರದ ಮೂಲಕ  ಶಾರುಖ್​ ಖಾನ್​ (Shah Rukh Khan) ಅದ್ದೂರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಶಾರುಖ್​ ಖಾನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಸಾಬೀತಾಗಿದೆ.  ಭಾರತ ಮಾತ್ರವಲ್ಲದೇ, ಹಲವಾರು ದೇಶಗಳಲ್ಲಿಯೂ ಈ ಚಿತ್ರ ಇದಾಗಲೇ ಅಬ್ಬರಿಸಿದೆ. ಕಳೆದ ಏಪ್ರಿಲ್​ 6ರ ಅಂಕಿಅಂಶದ ಪ್ರಕಾರ, ಪಠಾಣ್​ ಚಲನಚಿತ್ರವು ಭಾರತದಲ್ಲಿ  82 ಮಿಲಿಯನ್ ಡಾಲರ್​ ಅರ್ಥಾತ್​ ಸುಮಾರು  654 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, ಸಾಗರೋತ್ತರ ದೇಶಗಳಲ್ಲಿ 50 ಮಿಲಿಯನ್​ ಡಾಲರ್​ ಅರ್ಥಾತ್​ ಸುಮಾರು   396 ಕೋಟಿ ರೂಪಾಯಿ ಹಾಗೂ  ವಿಶ್ವಾದ್ಯಂತ ಒಟ್ಟು 130 ಮಿಲಿಯನ್​ ಡಾಲರ್​ ಅರ್ಥಾತ್​ 1,050  ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರ ಖುಷಿಯಲ್ಲಿಯೇ ಜವಾನ್​ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 

ಶಾರುಖ್ ಖಾನ್ ಅಭಿನಯದ ‘ಜವಾನ್’ (Jawan) ಚಿತ್ರದ  ಪ್ರಿವ್ಯೂ ಇಂದು ಬಿಡುಗಡೆಯಾಗಿದ್ದು, ಇದಾಗಲೇ ಲಕ್ಷಾಂತರ ವ್ಯೂಸ್​ ಕಂಡಿದೆ. ಶಾರುಖ್​ ಅಭಿಮಾನಿಗಳು ಪ್ರಿವ್ಯೂ ನೋಡಿ ಸಿಕ್ಕಾಪಟ್ಟೆ ಖುಷಿಪಡುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಅಟ್ಲಿ ನಿರ್ದೇಶನದ ಜವಾನ್​ ಚಿತ್ರಕ್ಕಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುವುದಾಗಿ ಇದಾಗಲೇ ಘೋಷಿಸಲಾಗಿದೆ.  ಈ ಸಿನಿಮಾ ಕೂಡ ಪಠಾಣ್​ನಷ್ಟೇ ಯಶಸ್ಸು ಕಾಣುವ ಭರವಸೆಯಲ್ಲಿದ್ದಾರೆ ಕಿಂಗ್​ ಖಾನ್​ ಫ್ಯಾನ್ಸ್.

ರಿಲೀಸ್‌ಗೂ ಮುನ್ನ 36 ಕೋಟಿ ಗಳಿಸಿದ ಶಾರುಖ್ ಖಾನ್ ನಟನೆಯ ಜವಾನ್!

ಇದರ ಬೆನ್ನಲ್ಲೇ ಇದೀಗ ಕುತೂಹಲದ ಚರ್ಚೆಯೊಂದು ಶಾರುಖ್​ ಮತ್ತು ಅವರ ಅಭಿಮಾನಿಯ ನಡುವೆ ನಡೆದಿದೆ. ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್​ ಕೆಲ ತಿಂಗಳಿನಿಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಫ್ಯಾನ್ಸ್​ ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳ ಪೈಕಿ ಹಲವಕ್ಕೆ ಉತ್ತರ ಕೊಡುತ್ತಿದ್ದಾರೆ. #AskSRK ಎಂಬ ಪ್ರಶ್ನೋತ್ತರ ಸೆಷನ್ ಇದಾಗಿದೆ.  ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿರುವ ಸಂಭ್ರಮದಲ್ಲಿ ಈ ಒಂದು ಸೆಷನ್​ ಶುರು ಮಾಡಿದ್ದು, ಇದಾಗಲೇ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವುಗಳ ಪೈಕಿ ಹಲವು ಹಾಸ್ಯಭರಿತ ಉತ್ತರಗಳಿಂದ ಕೂಡಿದ್ದರೆ, ಕೆಲವು ಮಾತ್ರ ಸ್ವಲ್ಪ ಗರಂ ಆಗಿದೆ ಉತ್ತರಿಸುತ್ತಿದ್ದಾರೆ.

 ಇದೀಗ ಪಠಾಣ್​ ಯಶಸ್ಸು ಹಾಗೂ ಜವಾನ್ ಚಿತ್ರದ ಯಶಸ್ಸಿನ​ ನಿರೀಕ್ಷೆಯಲ್ಲಿರುವ ಮಹಿಳೆಯೊಬ್ಬರು ಶಾರುಖ್​ಗೆ ಪ್ರಶ್ನೆಯೊಂದನ್ನು ಕೇಳಿದ್ದು, ಅದೀಗ ಸಕತ್​ ಸುದ್ದಿಯಾಗುತ್ತಿದೆ. ಅದೇನೆಂದರೆ, ಸದ್ಯದಲ್ಲೇ ಹುಟ್ಟಲಿರುವ ತಮ್ಮ ಅವಳಿ ಗಂಡು ಮಕ್ಕಳಿಗೆ ‘ಪಠಾಣ್ ಮತ್ತು ‘ಜವಾನ್’  ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ. ಇದಕ್ಕೆ ನೀವೇನೆನ್ನುತ್ತೀರಾ ಎಂದು ಮಹಿಳೆಯೊಬರಬು ಕೇಳಿದ್ದಾರೆ. ಅದಕ್ಕೆ ನಟ ಶಾರುಖ್​, ‘ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಟ್ಟರೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ಶಾರುಖ್​ ತಮಾಷೆಯ ಉತ್ತರ ಕೊಡಬಹುದಿತ್ತು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ಆದರೆ ಉತ್ತರ ಸಿಂಪಲ್​  ಆಗಿದ್ದರೂ ಮಹಿಳೆ ಕೇಳಿದ ತಮಾಷೆಯ ಪ್ರಶ್ನೆ ಮಾತ್ರ ಸಕತ್​ ಸೌಂಡ್​ ಮಾಡುತ್ತಿದೆ. 

ಅಬ್ಬಬ್ಬಾ! ಪಠಾಣ್​ ಚಿತ್ರದಲ್ಲಿಯೂ ಇಷ್ಟೊಂದು ತಪ್ಪಾ? ಐದು ಮೇಜರ್​ ಮಿಸ್ಟೆಕ್ಸ್ ಇವು
 

Follow Us:
Download App:
  • android
  • ios