Asianet Suvarna News Asianet Suvarna News

ಶಾರುಖ್​ ಡಂಕಿ ಟೀಸರ್​ ರಿಲೀಸ್​- ಮತ್ತೊಂದು ಸಾವಿರ ಕೋಟಿ ಫಿಕ್ಸ್​? ಅರೆರೆ... ಡಂಕಿ ಅಂದ್ರೆ ಈ ಅರ್ಥನಾ?

ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಡಂಕಿ ಟೀಸರ್​ ರಿಲೀಸ್ ಆಗಿದ್ದು,  ಮತ್ತೊಂದು ಸಾವಿರ ಕೋಟಿ ಫಿಕ್ಸ್​ ಎನ್ನುತ್ತಿದ್ದಾರೆ ವಿಮರ್ಶಕರು.
 

Shah Rukh Khans much awaited Dunky teaser has been released with spl name suc
Author
First Published Nov 2, 2023, 6:02 PM IST

ಇಂದು ನಟ ಶಾರುಖ್​ ಖಾನ್​ ಅವರ 58ನೇ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ ಅವರ ಬಹು ನಿರೀಕ್ಷಿತ ಡಂಕಿ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಟೀಸರ್ ಕೈಬಿಟ್ಟ ನಂತರ, ಶಾರುಖ್ ಖಾನ್ ಅವರ ಅಭಿಮಾನಿಗಳು ಅದರ ಬಗ್ಗೆ ಉತ್ಸುಕರಾಗಿದ್ದಾರೆ.   ಪಠಾಣ್​ ಮತ್ತು ಜವಾನ್ ನಂತರ ನಟನ ಮುಂದಿನ ಬ್ಲಾಕ್​ಬಸ್ಟರ್​ ಚಿತ್ರ ಡಂಕಿ ಎಂದೇ ಎಲ್ಲೆಡೆ ಹೇಳಲಾಗುತ್ತಿದೆ.  ಶಾರುಖ್ ಖಾನ್ ಅವರ ಹಿಂದಿನ ಚಿತ್ರಗಳಾದ ಪಠಾಣ್​ ಮತ್ತು ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿವೆ.  ಪಠಾಣ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,055 ಕೋಟಿ ಗಳಿಸಿದರೆ, ಜವಾನ್ ವಿಶ್ವಾದ್ಯಂತ ಒಟ್ಟು 1,149.85 ಕೋಟಿ ಗಳಿಸಿದೆ. ಬಾಲಿವುಡ್​ನ ವಿವಾದಾತ್ಮಕ ವಿಮರ್ಶಕ ಎಂದು ಕರೆಸಿಕೊಳ್ಳುತ್ತಿರುವ ಕೆಆರ್​ಕೆ ಸೇರಿದಂತೆ ಹಲವರು ಇನ್ನೊಂದು ಸಾವಿರ ಕೋಟಿ ಫಿಕ್ಸ್​ ಎಂದು ಹೇಳುತ್ತಿದ್ದಾರೆ. 

ಅಂದಹಾಗೆ ಈ ಚಿತ್ರದ ಕುರಿತು ಖುದ್ದು, ಶಾರುಖ್​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಕನಸುಗಳು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸರಳ ಮತ್ತು ನೈಜ ಜನರ ಕಥೆ ಇದು. ಸ್ನೇಹ, ಪ್ರೀತಿ ಮತ್ತು ಒಟ್ಟಿಗೆ ಇರುವುದು  ಮನೆ ಎಂಬ ಸಂಬಂಧದಲ್ಲಿ! ಹೃದಯಸ್ಪರ್ಶಿ ಕಥೆಗಾರನ ಹೃದಯಸ್ಪರ್ಶಿ ಕಥೆ ಇದಾಗಿದೆ.  ಈ ಪ್ರಯಾಣದಲ್ಲಿ ನೀವೆಲ್ಲರೂ ನಮ್ಮೊಂದಿಗೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಕ್ರಿಸ್‌ಮಸ್‌ನಲ್ಲಿ ಡಂಕಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಶಾರುಖ್​ ಹೇಳಿದ್ದಾರೆ. ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ. 

ಶಾರುಖ್​ ಖಾನ್​@58: ನಡುರಾತ್ರಿ 12ಕ್ಕೆ ಅಭಿಮಾನಿಗಳಿಗೆ ದರ್ಶನ ನೀಡಿದ ವಿಶ್ವದ 5ನೇ ಶ್ರೀಮಂತ ನಟ!
 

ಡಂಕಿ ಚಿತ್ರದ ಈ ಒಂದು ಟೀಸರ್ ವಿಶ್ಲೇಷಣೆ ಮಾಡೋದಾದರೆ, ಇಲ್ಲಿ ಶಾರುಖ್ ಪಾತ್ರದ ಪರಿಚಯ ಇದೆ. ಹಾರ್ಡಿ ಅನ್ನೊದು ಶಾರುಖ್ ಪಾತ್ರದ ಹೆಸರಾಗಿದೆ. ಹಾರ್ಡಿ ತನ್ನ ಗೆಳೆಯರ ಬಗ್ಗೆ ಇರೋ ಪ್ರೀತಿಯನ್ನ ಇಲ್ಲಿ ವ್ಯಕ್ತಪಡಿಸುತ್ತಾನೆ. ಜೊತೆಗೆ ತಮ್ಮ ಗುಂಪಿನಲ್ಲಿರೋ ಮನು ಹೆಸರಿನ ಪಾತ್ರಧಾರಿ ತಾಪ್ಸಿ ಪನ್ನು ಬಗ್ಗೆನೂ ಹೇಳ್ತಾನೆ. ಇದು ಪಂಜಾಬ್​ನ ಕಥೆಯಾಗಿದೆ.  ಹಾರ್ಡಿ (ಶಾರುಖ್​ ಖಾನ್) ಮತ್ತು ಅವನ ಸ್ನೇಹಿತರಾದ ಮನು, ಸುಖಿ, ಬುಗ್ಗು ಮತ್ತು ಬಲ್ಲಿ ಅವರ ಪ್ರಪಂಚವನ್ನು ಇದು ತಿಳಿಸುತ್ತದೆ.  ಮನು ಮತ್ತು ಸುಖಿ ಪಾತ್ರಗಳನ್ನು ಕ್ರಮವಾಗಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ.  
 
 ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಷ್ಟಕ್ಕೂ ಇದಕ್ಕೆ ಡಂಕಿ ಎಂದು ಹೆಸರು ಕಾರಣ,  ಪಂಜಾಬ್‌ನಲ್ಲಿ Donkey ಅಂದ್ರೆ ಕತ್ತೆಗೆ  ಡಂಕಿ ಅಂತ ಹೇಳುತ್ತಾರೆ. ಇದು ಪಂಜಾಬ್​ ಸುತ್ತ ಸುತ್ತುವ ಚಿತ್ರವಾದ್ದರಿಂದ ಡಂಕಿ ಎಂದು ಹೆಸರು ಇಡಲಾಗಿದೆ. 

ಸಲ್ಮಾನ್​ ಖಾನ್​ ಟೈಗರ್-3 ಚಿತ್ರ ಬಿಡುಗಡೆಯಾಗ್ತಿದ್ದಂತೆಯೇ ಶಾರುಖ್​ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​!

Follow Us:
Download App:
  • android
  • ios