Asianet Suvarna News Asianet Suvarna News

ಶಾರುಖ್​ ಖಾನ್​@58: ನಡುರಾತ್ರಿ 12ಕ್ಕೆ ಅಭಿಮಾನಿಗಳಿಗೆ ದರ್ಶನ ನೀಡಿದ ವಿಶ್ವದ 5ನೇ ಶ್ರೀಮಂತ ನಟ!

ನಟ ಶಾರುಖ್​ ಖಾನ್​ ಅವರ ಹುಟ್ಟುಹಬ್ಬ ಇಂದು. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ತಮ್ಮ ಬಂಗಲೆಯಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ.
 

Actor Shah Rukh Khans birthday is today darshan at midnight suc
Author
First Published Nov 2, 2023, 12:19 PM IST

ಬಾಲಿವುಡ್‌ನ ಬಾದ್‌ಶಾ ಎಂದೇ ಕರೆಸಿಕೊಳ್ಳುವ ನಟ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) 58ನೇ ಹುಟ್ಟುಹಬ್ಬದ ಸಂಭ್ರಮ.  ಪ್ರಪಂಚದಾದ್ಯಂತ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಕಂಡುಕೊಂಡಿರೋ ನಟ ಶಾರುಖ್​ ಅವರು,  ಹಲವಾರು  ಚಲನಚಿತ್ರಗಳಲ್ಲಿನ  ಆಕರ್ಷಕ ಅಭಿನಯಕ್ಕಾಗಿ  'ಕಿಂಗ್ ಆಫ್ ರೊಮ್ಯಾನ್ಸ್' ಎಂದೇ ಪ್ರಸಿದ್ಧರಾಗಿದ್ದಾರೆ. ವಯಸ್ಸು ಎನ್ನುವುದು ಕೇವಲ ದೇಹಕ್ಕೆ ಮಾತ್ರ, ಮನಸ್ಸಿನಗಲ್ಲ, ಇದು ಕೇವಲ ಒಂದು ಸಂಖ್ಯೆ ಎನ್ನುವುದನ್ನು ಸಾಬೀತು ಮಾಡುತ್ತಿರುವ ಕೆಲವೇ ಕೆಲವು ನಟರಲ್ಲಿ ಶಾರುಖ್​ ಕೂಡ ಒಬ್ಬರು. ನಾಲ್ಕೈದು ವರ್ಷಗಳ ಸತತ ಸೋಲಿನ ಬಳಿಕ ಪಠಾಣ್​ ಮತ್ತು ಜವಾನ್​ ಮೂಲಕ ಮೇಲೆದ್ದು ಗಲ್ಲಾಪೆಟ್ಟಿಗೆಯನ್ನೇ ಚಿಂದಿ ಚಿತ್ರಾನ್ನ ಮಾಡಿದ್ದಾರೆ ಶಾರುಖ್​. ಇದೀಗ ತಮ್ಮ ಮುಂದಿನ ಡಂಕಿ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಸದ್ಯ  ಶಾರುಖ್ ಖಾನ್ ವಿಶ್ವದ 5ನೇ ಶ್ರೀಮಂತ ನಟರಾಗಿದ್ದಾರೆ. ಬಾಲಿವುಡ್ ಕಿಂಗ್ ಈ ಸ್ಥಾನ ಪಡೆಯಲು ಟಾಮ್ ಕ್ರೂಸ್ ಅವರನ್ನು ಸೋಲಿಸಿದ್ದಾರೆ.  ಶಾರುಖ್ ಖಾನ್ ಅವರ ನಿವ್ವಳ ಮೌಲ್ಯವು $ 700 ಮಿಲಿಯನ್ ಡಾಲರ್​ಗಳಿಗಿಂತ ಹೆಚ್ಚು ಅಂದರೆ 6,289 ಕೋಟಿ ರೂ ಇದೆ. 

ಇಷ್ಟೆಲ್ಲಾ ಶ್ರೀಮಂತರಾದರೂ ಸರಳತೆಗೆ ಹೆಸರಾಗಿದ್ದಾರೆ ನಟ. ಇವರ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳು ನಡುರಾತ್ರಿ ಶಾರುಖ್​ ಅವರ ಬಂಗಲೆ ಮನ್ನತ್​ ಮುಂದೆ ಜಮಾಯಿಸಿದ್ದರು. ನಟನ ದರ್ಶನ ಸಿಗುವುದೋ ಇಲ್ಲವೊ ಎನ್ನುವುದು ಖಚಿತವಿರಲಿಲ್ಲ. ಆದರೂ ಅಭಿಮಾನಿಗಳು ಶುಭಾಶಯ ತಿಳಿಸಲು ಆಗಮಿಸಿದ್ದರು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ.  ಶಾರುಖ್​ ಅವರು, ಮಧ್ಯರಾತ್ರಿಯೇ ದಿಢೀರ್​ ತಮ್ಮ ಮನೆಯ ಮೇಲೆ ಪ್ರತ್ಯಕ್ಷರಾಗಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಮುಂಬೈ ಬಂಗಲೆಯಾದ ಮನ್ನತ್‌ನ ಹೊರಗೆ ಅಭಿಮಾನಿಗಳು ಕಾಯುತ್ತಿದ್ದಾಗ ಶಾರುಖ್ ಖಾನ್ ಕಾಣಿಸಿಕೊಂಡರು.  ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ದರ್ಶನ ನೀಡಿದ್ದರು. ಕಪ್ಪು ಟಿ ಶರ್ಟ್,  ಟೋಪಿ,  ಸನ್‌ಗ್ಲಾಸ್‌ಗಳಲ್ಲಿ ಕಾಣಿಸಿಕೊಂಡರು.  ಅಭಿಮಾನಿಗಳಿಗೆ ಕೈ ಮುಗಿದು ಅವರತ್ತ ಕೈ ಬೀಸಿ, ಪ್ಲೈಯಿಂಗ್ ಕಿಸ್‌ ಕೊಟ್ಟರು.  ಇದರ ಜೊತೆಗೆ ತಮ್ಮ ಸಿಗ್ನೇಚರ್ ಫೋಸ್ ನೀಡಿದರು. ಫ್ಯಾನ್ಸ್​ ಹರ್ಷೋದ್ಗಾರ ವಿಡಿಯೋದಲ್ಲಿ ಕೇಳಬಹುದು.  

ಸಲ್ಮಾನ್​ ಖಾನ್​ ಟೈಗರ್-3 ಚಿತ್ರ ಬಿಡುಗಡೆಯಾಗ್ತಿದ್ದಂತೆಯೇ ಶಾರುಖ್​ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​!
 

ಶಾರುಖ್ ಖಾನ್ ಹುಟ್ಟುಹಬ್ಬದಂದು ಭಾರತದಾದ್ಯಂತ ಇರುವ ಅವರ ಅಭಿಮಾನಿಗಳು ಮುಂಬೈ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ಶಾರುಖ್​ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ನಿಯೋಜನೆಯಾಗಿದೆ. ಇನ್ನು ಶಾರುಖ್​ ಅವರ ಚಿತ್ರದ ಕುರಿತು ಹೇಳುವುದಾದರೆ, ಇದುವರೆಗೆ ಅವರು 90 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 14 ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಯಶಸ್ವಿ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಕೂಡ. ಇವರು,   ನಟ ಮಾತ್ರವಲ್ಲ, ಯಶಸ್ವಿ ನಿರ್ಮಾಪಕ, ಟಿವಿ ನಿರೂಪಕ ಕೂಡ.  ಅವರು ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.


 
ಇನ್ನು ಇವರ  ಜವಾನ್ ಸಿನಿಮಾದ ಕುರಿತು ಹೇಳುವುದಾದರೆ, ಈವರೆಗಿನ ಕಲೆಕ್ಷನ್ 1103.27 ಕೋಟಿ ರೂಪಾಯಿಗೂ ಹೆಚ್ಚು ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಈ ಮಾಹಿತಿ ನೀಡಿದೆ.  ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಎಂದು ಹೇಳಿದೆ.  

ಹಾರರ್​ ಸಿನಿಮಾ ಶೂಟಿಂಗ್​ನಲ್ಲಿ ನಡೆದ ಭಯಾನಕ ಘಟನೆಗಳ ವಿವರಿಸಿದ ನಟಿ ಪ್ರಿಯಾಂಕಾ ಉಪೇಂದ್ರ
 

Follow Us:
Download App:
  • android
  • ios