ಒಂದೇ ತರ ಇದೆ ಶಾರುಖ್-ಯಶ್ ಲೈಫ್ ಜರ್ನಿ: ಇವರಿಬ್ಬರಿಗೆ ಲೈಫ್ ಕೊಟ್ಟಿದ್ದೇ ಸ್ಮಾಲ್ ಸ್ಕ್ರೀನ್!
ಒಂದೇ ಗುರಿ ಒಂದೇ ಛಲ. ಸಿನಿಮಾ ರಂಗದ ಹಿಂದಿಲ್ಲ ಮುಂದಿಲ್ಲ. ಗಾಡ್ ಫಾದರ್ ಅಂತೂ ಮೊದಲೇ ಇಲ್ಲ. ಆದ್ರೂ ಈ ಇಬ್ಬರು ಸ್ಟಾರ್ ಇಂದು ಇಂಡಿಯನ್ ಸಿನಿ ರಂಗದ ಸೂಪರ್ ಸ್ಟಾರ್ಸ್. ಅವ್ರೇ ಕಿಂಗ್ ಖಾನ್ ಶಾರುಖ್, ರಾಕಿಂಗ್ ಸ್ಟಾರ್ ಯಶ್.

ಒಂದೇ ಗುರಿ ಒಂದೇ ಛಲ. ಸಿನಿಮಾ ರಂಗದ ಹಿಂದಿಲ್ಲ ಮುಂದಿಲ್ಲ. ಗಾಡ್ ಫಾದರ್ ಅಂತೂ ಮೊದಲೇ ಇಲ್ಲ. ಆದ್ರೂ ಈ ಇಬ್ಬರು ಸ್ಟಾರ್ ಇಂದು ಇಂಡಿಯನ್ ಸಿನಿ ರಂಗದ ಸೂಪರ್ ಸ್ಟಾರ್ಸ್. ಅವ್ರೇ ಕಿಂಗ್ ಖಾನ್ ಶಾರುಖ್, ರಾಕಿಂಗ್ ಸ್ಟಾರ್ ಯಶ್. ಇಡೀ ಭಾರತೀಯ ಸಿನಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ರನ್ನ ಇಂದು ಸುಲ್ತಾನನನ್ನಾಗಿ ಮೆರೆಸುತ್ತಿದ್ದಾರೆ. ಆ ಕಡೆ ಕಿಂಗ್ ಆಫ್ ಬಾಲಿವುಡ್ ಶಾರುಖ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಇವರಿಬ್ಬರ ಲೈಫ್ ಜರ್ನಿ ಸೇಮ್ ಟು ಸೇಮ್. ಇವ್ರಿವ್ರು ಒಂದ್ ತರಾ ಸೆಲ್ಫ್ ಮೇಡ್ ಶೆಹಜಹಾನ್. ಇಂಟ್ರಸ್ಟಿಂಗ್ ಏನ್ ಗೊತ್ತಾ.? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರಾಕಿಂಗ್ ಸ್ಟಾರ್ಗೆ ನಟನಾ ಲೈಫ್ ಕೊಟ್ಟಿದ್ದು ಸ್ಮಾಲ್ ಸ್ಕ್ರೀನ್.
ಸೀರಿಯಲ್ಗಳಲ್ಲಿ ನಟಿಸುತ್ತಾ ಸಿನಿಮಾ ಜರ್ನಿ ಶುರು ಮಾಡಿದ್ರು ಶಾರುಖ್-ಯಶ್. ಶಾರುಖ್ ಇಂದು ಸೂಪರ್ ಸ್ಟಾರ್. ಮಂಗಳೂರಿನಲ್ಲಿ ಪಠಾಣ್ ಕುಟುಂಬದಲ್ಲಿ ಜನಿಸಿದ್ದ ಶಾರುಖ್ ನಟನಾಗೋ ದೊಡ್ಡ ಕನಸೊತ್ತು. ಮುಂಬೈ ಸೇರಿದ್ರು. ಆದ್ರೆ ಕಿಂಗ್ ಖಾನ್ ಬಳಿ ಇರಲು ಮನೆ ಇಲ್ಲ ಖರ್ಚಿಗೆ ದುಡ್ಡಿರಲಿಲ್ಲ. ಆ ಕಡೆ ಯಶ್ರದ್ದು ಇದೇ ಪಾಡು. ರಾಕಿ ಕೂಡ ತನ್ನ ಹುಟ್ಟೂರು ಹಾಸನ ಬಿಟ್ಟು ನಟನಾಗೋ ಆಸೆಯಿಂದ ಗಾಂಧಿನಗರ ಸೇರಿದ್ರು. ಆದ್ರೆ ಯಶ್ ಹೀರೋ ಆಗೋಕು ಮೊದಲು ಹಲವು ರಾತ್ರಿ ಕಳೆದಿದ್ದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ. 40 ವರ್ಷದಿಂದ ಸಿನಿಮಾ ಟ್ಯಾಕ್ ಮೇಲೆ ರನ್ ಮಾಡ್ತಿರೋ ಶಾರುಖ್ಗೆ ಸಿನಿಮಾ ಇಂದು ಎಲ್ಲವನ್ನ ಕೊಟ್ಟಿದೆ.
ಕಿಸ್ ಬೆಡಗಿ ಲುಕ್‌ಗೆ ಚಂದಿರನೂ ನಾಚಿ ನೀರಾದ: ಶ್ರೀಲೀಲಾ ಅಂದಕ್ಕೆ ಫ್ಯಾನ್ಸ್ ಫಿದಾ!
ಯಶ್ ಕೂಡ ಇದರಿಂದ ಹೊರತಲ್ಲ. ಆದ್ರೆ ಇಬ್ಬರ ಆಲೋಚನೆ ಕೂಡ ಒಂದೇ ತರ ಇದೆ. ಶಾರುಖ್ ಪ್ರತಿ ಸಿನಿಮಾ ಬಂದಾಗ್ಲು ಇದು ಬಿಗಿನಿಂಗ್ ಅಂತಲೇ ಮುನ್ನುಗ್ಗುತ್ತಾರೆ. ಆ ಕಡೆ ರಾಕಿಂಗ್ ಸ್ಟಾರ್ ಯಶ್ರದ್ದು ಅದೇ ಚಾತಿ. ಕೆಜಿಎಫ್ ಅನ್ನೋ ಸೂಪರ್ ಹಿಟ್ ಕೊಟ್ಟಿರೋ ಯಶ್ಗೆ ಇನ್ನೂ ದೊಡ್ಡ ಆಲೋಚನೆ ಇದೆ. ಇದು ಜೆಸ್ಟ್ ಬಿಗಿನಿಂಗ್ ನೆಕ್ಟ್ಸ್ ಸಿನಿಮಾ ಬರುತ್ತೆ ತಡ್ಕೊಳ್ರಪ್ಪಾ ಅಂತ ಸ್ಟ್ರಾಂಗ್ ಮೆಸೇಜ್ ಪಾಸ್ ಮಾಡಿದ್ದಾರೆ. ಸೋ ಈ ಸೆಲ್ಫ್ ಮೇಡ್ ವೆಪನ್ಸ್ ಲೈಫ್ ಜರ್ನಿ ಒಂದೇ ತರ ಇದ್ದು, ಇಂದು ಇಂಡಿಯಾ ಸಿನಿಮಾ ಜಗತ್ತಿನ ಕಿಂಗ್ಸ್ ಆಗಿದ್ದಾರೆ.