ಕಿಸ್ ಬೆಡಗಿ ಲುಕ್‌ಗೆ ಚಂದಿರನೂ ನಾಚಿ ನೀರಾದ: ಶ್ರೀಲೀಲಾ ಅಂದಕ್ಕೆ ಫ್ಯಾನ್ಸ್ ಫಿದಾ!
ನಟಿ ಶ್ರೀಲೀಲಾ ವೈಟ್ ಚೂಡಿದಾರ ತೊಟ್ಟು ಕ್ಯಾಮರಾ ಮುಂದೆ ಅಂದ ಪ್ರದರ್ಶಿಸಿದ್ದಾರೆ. ಆಕರ್ಷಕ ಭಂಗಿಯಲ್ಲಿ ನಿಂತು ಮಾದಕ ನೋಟ ಬೀರಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಕನ್ನಡದ ಉದಯೋನ್ಮುಖ ನಟಿ ಮುದ್ದುಮುಖದ ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಆದರೆ ಅದೇ ಸಿನಿಮಾಗಳಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಸದ್ಯ ಈ ನಟಿ ಕಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ಇದೀಗ ತಮ್ಮ ಸೌಂದರ್ಯ ಪ್ರದರ್ಶನದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದೀಗ ಶ್ರೀಲೀಲಾ ವೈಟ್ ಚೂಡಿದಾರ ತೊಟ್ಟು ಕ್ಯಾಮರಾ ಮುಂದೆ ಅಂದ ಪ್ರದರ್ಶಿಸಿದ್ದಾರೆ. ಆಕರ್ಷಕ ಭಂಗಿಯಲ್ಲಿ ನಿಂತು ಮಾದಕ ನೋಟ ಬೀರಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ನಟಿಯ ಚೆಲುವಿನ ಚಿತ್ತಾರಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ಶ್ರೀಲೀಲಾ ಅವರು ಧಮಾಕಾ ಸಿನಿಮಾ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಡೆದರು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಸ್ಕಂದ, ಭಗವಂತ ಕೇಸರಿ, ಗುಂಟೂರು ಖಾರಂ ಸೇರಿದಂತೆ 13ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಿಗೆ ಸಹಿ ಹಾಕಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಈಗ ನಟಿ ಅಷ್ಟಾಗಿ ನಟಿಸುತ್ತಿಲ್ಲ. ಬದಲಾಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಧಿಕ ಸಿನಿಮಾ ಆಫರ್ ಪಡೆಯುತ್ತಿದ್ದಾರೆ. ತೆಲುಗಿನಲ್ಲಿ ಬೆಳೆಯುತ್ತಿರುವ ನಟಿಯರಿಗೆ ಟಫ್ ಕಾಂಪಿಟೀಷನ್ ಕೊಡುತ್ತಿದ್ದಾರೆ ಈ ನಟಿ.
ಯಂಗ್ ನಟಿಯರಾದ ಕೃತಿ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿ ಶ್ರೀಲೀಲಾ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಿನಿಮಾ ಆಫರ್ ಪಡೆಯುತ್ತಿದ್ದಾರೆ. ಅವರ ಮೂವಿಗಳು ಕೂಡಾ ಭರ್ಜರಿಯಾಗಿ ಹಿಟ್ ಆಗುತ್ತಿದೆ.
ಡ್ಯಾನ್ಸ್ ವಿಚಾರದಲ್ಲಿಯೂ ಸಖತ್ ಫೇಮಸ್ ಆಗಿರುವ ಶ್ರೀಲೀಲಾ ಅವರ ನೃತ್ಯ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಜನರು ಫಿದಾ ಆಗುತ್ತಾರೆ. ಇದು ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.