ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರತಿದಿನದ ವಿಚಾರಣೆ, ಮನೆಯೂಟ ಸೇರಿದಂತೆ ದರ್ಶನ್ ಪರ ವಕೀಲರ ಹಲವು ಮನವಿಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ಚಂದ್ರನಿಗೇನೋ ಹಿಡಿದ ಗ್ರಹಣ ಬಿಟ್ಟಿದೆ. ಆದ್ರೆ ದರ್ಶನ್‌ಗೆ ಮಾತ್ರ ಅಂಟಿದ ಗ್ರಹಣ ಇನ್ನೂ ಬಿಡೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಗ್ರಹಣದ ದಿನವೇ ಕೋರ್ಟ್​ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ಎಸ್​ಪಿಪಿ ಸಮರ್ಥವಾಗಿ ವಾದ ಮಂಡಿಸಿದ್ದು ದರ್ಶನ್ ಬೇಡಿಕೆಗಳು ಈಡೇರೋ ಹಾಗೆ ಕಾಣ್ತಾ ಇಲ್ಲ. ಅಷ್ಟೇ ಅಲ್ಲ ಈ ಕೇಸ್​​ ಮತ್ತಷ್ಟು ತಡವಾಗೋ ಹಾಗೆ ಕಾಣ್ತಾ ಇದ್ದು ದಾಸನ ಗ್ರಹಣ ಮುಂದುವರೆದಿದೆ.

Add Asianetnews Kannada as a Preferred SourcegooglePreferred

ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!

ಯೆಸ್ ಚಂದ್ರಗ್ರಹಣ ಏನೋ ಮುಕ್ತಾಯ ಆಗಿದೆ. ಆದ್ರೆ ಸ್ಯಾಂಡಲ್​ವುಡ್ ಮಾಜಿ ಚಕ್ರವರ್ತಿ ​​ ದರ್ಶನ್‌ಗೆ ಆವರಿಸೋ ಗ್ರಹಣ ಮಾತ್ರ ಇಷ್ಟು ಬೇಗ ಬಿಡೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಗ್ರಹಣದ ದಿನವೇ ಕೋರ್ಟ್​ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದ್ದು, ಪ್ರಾಸಿಕ್ಯೂಷನ್ ಸಮರ್ಥವಾಗಿ ವಾದ ಮಂಡಿಸಿ, ದರ್ಶನ್​ ಗ್ಯಾಂಗ್‌ಗೆ ಬೆವರಿಳಿಸಿ ಬಿಟ್ಟಿದೆ.

ಅಸಲಿಗೆ ಕಳೆದ ವಾರ ದರ್ಶನ್ ಪರ ವಕೀಲರು ಹಲವು ಮನವಿಗಳನ್ನ ಮಾಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿದಿನ ಟ್ರಯಲ್ ಮಾಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ರು. ಹಾಗೆ ಪ್ರತಿ ದಿನ ಟ್ರಯಲ್ ನಡೆಸಿದ್ರೆ ಬೇಗ ಸಾಕ್ಷಿಗಳ ವಿಚಾರಣೆ ನಡೆದು ದರ್ಶನ್‌ಗೆ ಬೇಗ ಬೇಲ್ ಸಿಕ್ಕುತ್ತೆ ಅನ್ನೋದು ಅವರ ಲೆಕ್ಕಾಚಾರ ಆಗಿತ್ತು. ಆದ್ರೆ ಅದಕ್ಕೆ ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿದೆ.

SPP ವಾದ ಮಂಡನೆ

⦁ ಪ್ರತಿದಿನ ವಿಚಾರಣೆ ಅಗತ್ಯವಿಲ್ಲ ಅಂತ ಸುಪ್ರೀಂ ಕೋರ್ಟ್​​ನ ಅಭಿಪ್ರಾಯದ ಮಾಹಿತಿ ನೀಡಿದ SPP

⦁ ಇದೇ ಕೋರ್ಟ್ ನಲ್ಲಿ 977ಕೇಸ್ ಗಳ ಟ್ರಯಲ್ ನಡೆಯುತ್ತಿವೆ.

⦁ ಎಲ್ಲಾ ಕೇಸ್ ಗಳನ್ನ ಬಿಟ್ಟು ಈ ಪ್ರಕರಣವನ್ನ ಯಾಕೆ ಪ್ರತಿದಿನ ಮಾಡಬೇಕು..?

⦁ ಈಗಾಗಲೇ ವಾರಕ್ಕೆ 2 ದಿನ ಟ್ರಯಲ್ ನಡೆಯುತ್ತಿರುವಂತೆ ಮುಂದುವರೆಯಲಿ.

⦁ ಪ್ರತಿದಿನ ಟ್ರಯಲ್ ಗೆ ಅವಕಾಶ ನೀಡದಂತೆ SPP ಮನವಿ

ಹೌದು ಪ್ರತಿದಿನ ಟ್ರಯಲ್ ನಡೆಸಿ ಅಂತ ದರ್ಶನ್ ಪರ ವಕೀಲರು ಸಲ್ಲಿಸಿದ ಮನವಿಗೆ ಆಕ್ಷೇಪ ಸಲ್ಲಿಸಿರೋ ಪ್ರಾಸಿಕ್ಯೂಷನ್ ಇದೇ ಕೋರ್ಟ್​ನಲ್ಲಿ 977 ಕೇಸ್ ನಡೀತಾ ಇವೆ. ಅದನ್ನೆಲ್ಲಾ ಬಿಟ್ಟು ಇವರಿಗೆ ಮಾತ್ರ ಯಾಕೆ ಈ ವಿಶೇಷ ಸೌಲಭ್ಯ ಅಂತ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ವಾರಕ್ಕೆ 2 ದಿನ ಟ್ರಯಲ್ ನಡೆಯುತ್ತಿರುವಂತೆ ಮುಂದುವರೆಯಲಿ ಅಂದಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳನ್ನ ಖುದ್ದು ಕೋರ್ಟ್ ಗೆ ಹಾಜರಿಗೆ ಮನವಿ ಮಾಡಿರೋ ವಿಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಆರೋಪಿಗಳನ್ನ ಕೋರ್ಟ್ ಗೆ ಹಾಜರುಪಡಿಸಿದಾಗ ಸಾಕಷ್ಟು ಜನಜಂಗುಳಿ ಆಗುತ್ತೆ. ಸೋ ವಿಡಿಯೋ ಕಾನ್ಫರೆನ್ಸ್ ನಲ್ಲಿಯೇ ವಿಚಾರಣೆ ನಡೆಯಲಿ ಅಂದಿದ್ದಾರೆ.

ದಾಸನ ಒಂದೊತ್ತು ಮನೆಯೂಟಕ್ಕೂ ಕತ್ತರಿ..!

ಅಸಲಿಗೆ ಕೋರ್ಟ್​ಗೆ ನೇರ ಹಾಜರಿಗೆ ಅವಕಾಶ ಕೊಡಿ ಅಂತ ಕೇಳಿದ್ದ ದರ್ಶನ್, ಕೊನೆ ಪಕ್ಷ ಕೋರ್ಟ್​ಗೆ ಬಂದಾಗ ಒಂದು ದಿನ ಮನೆಯೂಟ ತಿನ್ನೋ ಅವಕಾಶ ಸಿಗುತ್ತೆ ಅಂತ ಜಡ್ಜ್ ಎದುರು ಕೇಳಿಕೊಂಡಿದ್ರು. ಆದ್ರೀಗ ಒಂದು ದಿನದ ಮನೆಯೂಟವೂ ದಾಸನಿಗೆ ಸಿಗೋದು ಅಸಾಧ್ಯ ಅನ್ನಿಸ್ತಾ ಇದೆ.

ಇನ್ನೂ ಕುಟುಂಬಸ್ಥರನ್ನ ಒಳಸಂದರ್ಶನಕ್ಕೆ ಅವಕಾಶ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ರು. ಆದ್ರೆ ಇದಕ್ಕೆ ಕೋರ್ಟ್ ಗೂ ಮೊದಲು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅಂತ ಹೇಳಿದ್ದಾರೆ. ಜೈಲು ಮ್ಯಾನುವಲ್ ಪ್ರಕಾರ ಜೈಲು ಅಧಿಕಾರಿಗಳಿಗೆ ಮೊದಲು ಮನವಿ ಮಾಡಬೇಕು. ಒಂದು ವೇಳೆ ಜೈಲು ಅಧಿಕಾರಿಗಳು ನಿರಾಕರಿಸಿದಲ್ಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಅಂತ ದಾಸನಿಗೆ ಪಾಠ ಮಾಡಿದ್ದಾರೆ.

ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್

ಹೌದು ದರ್ಶನ್ ಮತ್ತವರ ಗ್ಯಾಂಗ್ ಪದೇ ಪದೇ ಬೇರೆ ಬೇರೆ ಮನವಿಗಳನ್ನ ಸಲ್ಲಿಸಿ ಕೋರ್ಟ್ ಸಮಯ ಹಾಳು ಮಾಡ್ತಾ ಇದೆ ಅಂತ ಆರೋಪ ಮಾಡಿರೋ SPP, ದರ್ಶನ್ ಅರ್ಜಿಗೆ ಮಾನ್ಯತೆ ನೀಡದಂತೆ ಮನವಿ ಮಾಡಿದ್ದಾರೆ. ಆರೋಪಿಗಳ ವಕೀಲರು ಕೋರ್ಟ್ ನಲ್ಲಿ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್ ಗೆ ಮನವಿ ಮಾಡಿದ್ರು. ಈ ಪ್ರಕರಣ ಅತ್ಯಾ*ಚಾರ ಪ್ರಕರಣ ಅಲ್ಲ. ಪೋಕ್ಸೋ ಪ್ರಕರಣ ಅಲ್ಲ. ಸೋ ಈಗ ನಡೆಯುತ್ತಿರೋ ರೀತಿನೇ ಕೋರ್ಟ್ ವಿಚಾರಣೆ ನಡೀಲಿ ಅಂತ ವಾದ ಮಾಡಿದ್ದಾರೆ. ಮಾರ್ಚ್ 9ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.

ಒಟ್ನಲ್ಲಿ ಮಂಗಳವಾರ ಗ್ರಹಣದ ದಿವಸ ಕೋರ್ಟ್ ನಲ್ಲಿ ಆದ ಬೆಳವಣಿಗೆ ನೋಡ್ತಾ ಇದ್ರೆ, ದಾಸನ ಗ್ರಹಣ ಅಷ್ಟು ಬೇಗ ಅಂತೂ ಬಿಡೋದಿಲ್ಲ. ದಾಸನ ಜೈಲುವಾಸ ಅಷ್ಟೂ ಬೇಗ ಮುಗಿಯೋದಿಲ್ಲ ಅನ್ನೋದಂತೂ ಖಚಿತವಾಗಿದೆ.

ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.